ಹೇರ್ ಡ್ರೈಯರ್‌ ಸ್ಫೋಟ ಆಗಿದ್ದು ಹೇಗೆ? ಬಸಮ್ಮಳ ವಾಟ್ಸ್‌ಆ್ಯಪ್‌ನಲ್ಲೇ ಪೊಲೀಸರಿಗೆ ಮಹತ್ವದ ಸುಳಿವು!

author-image
admin
Updated On
ಹೇರ್ ಡ್ರೈಯರ್‌ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌; ಪ್ರೇಯಸಿಯ ಕೈ ಕಟ್‌! ಅಸಲಿಗೆ ಆಗಿದ್ದೇನು?
Advertisment
  • ಹೇರ್ ಡ್ರೈಯರ್ ಬ್ಲಾಸ್ಟ್ ಸುದ್ದಿ ಕೇಳುತ್ತಿದ್ದಂತೆ ಹೆಣ್ಮಕ್ಕಳು ಬೆಚ್ಚಿ ಬಿದ್ದಿದ್ರು
  • ಮಹಿಳೆಯ ಕೈ ಬೆರಳುಗಳು ತುಂಡು ತುಂಡಾಗಿ ನೆಲದ ಮೇಲೆ ಬಿದ್ದಿದ್ದವು
  • ಪೊಲೀಸರಿಗಂತೂ ಇದ್ಹೇಗೇ ಬ್ಲಾಸ್ಟ್ ಆಯ್ತು ಅನ್ನೋದೇ ದೊಡ್ಡ ಟೆನ್ಷನ್!

ಬಾಗಲಕೋಟೆಯಲ್ಲಿ ಹೇರ್ ಡ್ರೈಯರ್ ಬ್ಲಾಸ್ಟ್​. ಇಂತಹದೊಂದು ಸುದ್ದಿ ಕೇಳಿದಾಗ ಹೇರ್ ಡ್ರೈಯರ್ ಬಳಸುತ್ತಿದ್ದ ಹೆಣ್ಮಕ್ಕಳು ಬೆಚ್ಚಿ ಬಿದ್ದಿದ್ರು. ಯಾಕಂದ್ರೆ ಈ ಹೇರ್ ಡ್ರೈಯರ್‌ ಬ್ಲಾಸ್ಟ್​​ನಿಂದ ಇಳಕಲ್​​ನ ಬಸಮ್ಮ ಅನ್ನೋ ಮಹಿಳೆ ಅಕ್ಷರಶಃ ನರಕವನ್ನೇ ಅನುಭವಿಸಿಬಿಟ್ಟಿದ್ದಳು. ಬಸಮ್ಮಳ ಕೈ ಕಟ್​ ಆಗಿ ಇಡೀ ಮನೆಯ ತುಂಬಾ ನೆತ್ತರು ಚೆಲ್ಲಾಡಿತ್ತು.

ಬಸಮ್ಮರ ಮನೆಯಲ್ಲಿ ಚೆಲ್ಲಾಡಿದ್ದ ರಕ್ತದ ಕಲೆಗಳು ನಡೆದ ಘಟನೆಗೆ ಸಾಕ್ಷಿ ನುಡಿಯುತ್ತಿತ್ತು. ಕೈಯಲ್ಲಿರಬೇಕಾದ ಬೆರಳುಗಳು ತುಂಡು ತುಂಡಾಗಿ ನೆಲದ ಮೇಲೆ ಬಿದ್ದಿದ್ದವು. ಅಕ್ಕ ಪಕ್ಕದ ಮನೆಯವರೆಲ್ಲ ಈ ದೃಶ್ಯ ನೋಡಿ ಒಂದರೆಕ್ಷಣ ಬೆಚ್ಚಿ ಬಿದ್ದಿದ್ರು. ಬಸಮ್ಮಳ ಕೈ ಅಕ್ಷರಶಃ ಛಿದ್ರ ಛಿದ್ರಗೊಂಡಿತ್ತು. ತಕ್ಷಣ ಬಸಮ್ಮಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

publive-image

ಕ್ಯೂರಿಯಾಸಿಟಿಗೆ ಅಂತ ಆನ್ ಮಾಡಿದಾಗ ಸಿಡಿದಿತ್ತು ಹೇರ್ ಡ್ರೈಯರ್
ಸ್ಫೋಟದ ತೀವ್ರತೆಗೆ ಬೆರಳು ಕಟ್! ಮನೆ ತುಂಬಾ ಸಿಡಿದಿತ್ತು ನೆತ್ತರು
ಅವತ್ತು ಈ ಹೇರ್ ಡ್ರೈಯರ್​ ಬಸಮ್ಮಳಿಗೆ ಬಂದಿದ್ದಲ್ಲ. ಈ ಬಸಮ್ಮಳ ಸ್ನೇಹಿತೆ ಶಶಿಕಲಾ ಅನ್ನೋ ಮಹಿಳೆಗೆ ಪಾರ್ಸೆಲ್ ಬಂದಿತ್ತು. ಡೆಲಿವರಿ ಬಾಯ್ ಬಂದು ಕೇಳಿದಾಗ ಶಶಿಕಲಾ ಊರಲ್ಲಿ ಇರಲಿಲ್ಲ. ಬಸಮ್ಮ ಶಶಿಕಲಾಗೆ ಕಾಲ್ ಮಾಡಿ ಕೇಳಿ ಬಂದ ಪಾರ್ಸೆಲ್​ ಅನ್ನ ಡೆಲಿವರಿ ತೆಗೆದುಕೊಂಡಿದ್ದಳು.

ಇದನ್ನೂ ಓದಿ: ಹೇರ್ ಡ್ರೈಯರ್‌ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌; ಪ್ರೇಯಸಿಯ ಕೈ ಕಟ್‌! ಅಸಲಿಗೆ ಆಗಿದ್ದೇನು? 

ನೋಡಿದ್ರೆ ಒಳಗೆ ಹೇರ್ ಡ್ರೈಯರ್ ಇತ್ತು. ಹೇರ್ ಡ್ರೈಯರ್ ನೋಡ್ತಿದ್ದಂತೆ ಬಸಮ್ಮಳಿಗೆ ಕೌತುಕ ತಡೆದುಕೊಳ್ಳೋದಕ್ಕೆ ಆಗಿಲ್ಲ. ತನ್ನ ಫ್ರೆಂಡ್​ದ್ದೆ ಅಲ್ವಾ ಯಾವುದಕ್ಕೂ ಒಂದು ಸಾರಿ ಟೆಸ್ಟ್ ಮಾಡೋಣ ಅಂತ ಹೇರ್ ಡ್ರೈಯರ್ ಆನ್ ಮಾಡಿದ್ಳು. ಆನ್ ಮಾಡಿದ್ದೇ ತಡ ಅಕ್ಷರಶಃ ಬಾಂಬ್​​ನಂತೆ ಹೇರ್ ಡ್ರೈಯರ್‌ ಸ್ಫೋಟಗೊಂಡಿತ್ತು. ನೋಡ ನೋಡ್ತಿದ್ದಂತೆ ಬಸಮ್ಮಳ ಕೈ ಬೆರಳು ಕತ್ತರಿಸಿ ನೆಲಕ್ಕೆ ಬಿದ್ದಿದ್ವು. ಬಸಮ್ಮ ಜೀವವೇ ಬಾಯಿಗೆ ಬಂದು ಬಿಟ್ಟಿತ್ತು.

publive-image

ಇಡೀ ದೇಶಾದ್ಯಂತ ಎಲ್ಲರೂ ಹೇರ್ ಡ್ರೈಯರ್‌ ಆರ್ಡರ್ ಮಾಡಿದ್ದಾರೆ. ಆ ಕೇಸ್‌ನಲ್ಲಿ ಯಾವತ್ತೂ ಈ ರೀತಿ ಆಗಿರಲಿಲ್ಲ. ಓರ್ವ ಮಹಿಳೆಯ ಕೈ ಕಟ್‌ ಆಗುವಷ್ಟು ತೀವ್ರತೆಯಲ್ಲಿ ಬ್ಲಾಸ್ಟ್ ಆಗಿದೆ ಅನ್ನೋದನ್ನ ಯಾರೂ ಜೀರ್ಣಿಸಿಕೊಳ್ಳಲು ಆಗುತ್ತಿರಲಿಲ್ಲ. ಹೇರ್‌ ಡ್ರೈಯರ್‌ಗೆ ಬ್ಲ್ಯಾಸ್ಟ್ ಆದ್ರೆ, ಇಷ್ಟೊಂದು ಇನ್‌ಟೆನ್ಸ್ ಆಗಿರುತ್ತಾ ಅನ್ನೋ ಪ್ರಶ್ನೆ ಮೂಡಿದ್ದು ಸುಳ್ಳಲ್ಲ. ಆಗ ಇನ್‌ವೇಸ್ಟಿಗೇಷನ್ ಶುರು ಮಾಡಿದಾಗ, ಮೊದಲು ಅನುಮಾನ ಮೂಡಿದ್ದೇ ಗೆಳತಿ ಶಶಿಕಲಾ ಮೇಲೆ.

ಆಮೇಲೆ ಇಲ್ಲೊಂದು ಟ್ವಿಸ್ಟ್ ಸಿಗುತ್ತೆ. ಅದೇನಂದ್ರೆ ಈ ಹೇರ್ ಡ್ರೈಯರ್ ಬ್ಲಾಸ್ಟ್ ಸುದ್ದಿ ಸಖತ್ ವೈರಲ್ ಆಯ್ತೋ, ಬಸಮ್ಮಳ ಗೆಳತಿ ಶಶಿಕಲಾ ಉಲ್ಟಾ ಹೊಡೆದು ಬಿಟ್ಟಿದ್ದಳು. ತಾನು ಯಾವುದೇ ಹೇರ್​ ಡ್ರೈಯರ್ ಆರ್ಡರ್ ಮಾಡಿಲ್ಲ, ತನಗೇನು ಗೊತ್ತಿಲ್ಲ ಅಂತ ಹೇಳಿಬಿಟ್ಟಿದ್ದಳು. ಪೊಲೀಸರಿಗೂ ಇದು ಸ್ವಲ್ಪ ತಲೆ ನೋವಾಗಿತ್ತು.

ಪೊಲೀಸರಿಗಂತೂ ಇದ್ಹೇಗೇ ಬ್ಲಾಸ್ಟ್ ಆಯ್ತು ಅನ್ನೋದೇ ದೊಡ್ಡ ಟೆನ್ಷನ್ ಆಗಿಬಿಟ್ಟಿತ್ತು. ಅದೇಗೆ ಬ್ಲಾಸ್ಟ್ ಆಯ್ತು? ಬೇರೆ ಏನಾದ್ರೂ ಮಸಲತ್ತು ಇದ್ಯಾ? ಅನ್ನೋ ಅನುಮಾನಗಳಿದ್ರೂ ಅವತ್ತು ಪೊಲೀಸರು ಕೇಸ್ ದಾಖಲಿಸಿಕೊಂಡು ಸುಮ್ಮನಿದ್ರು. ಇನ್ನೊಂದೆಡೆ ಆಸ್ಪತ್ರೆ ಸೇರಿದ ಬಸಮ್ಮಳಿಗೂ ವಿಚಾರಣೆ ನಡೆಸಿದಾಗ ಆಕೆ ಕೂಡ ಶಶಿಕಲಾ ತರಿಸಿದ್ದು ಅಂತ ಹೇಳಿದ್ದಳು. ಅತ್ತ ಶಶಿಕಲಾಗೆ ಕೇಳ್ದಾಗ ತನಗೇನೂ ಗೊತ್ತಿಲ್ಲ. ತಾನು ಹೇರ್ ಡ್ರೈಯರ್ ಆರ್ಡರ್ ಮಾಡಿಲ್ಲ ಅಂತ ಹೇಳಿದ್ದಳು.

ಅವತ್ತು ಪೊಲೀಸರಿಗೆ ಇನ್ನೊಂದ್‌ ಪ್ರಶ್ನೆ ತಲೆಗೆ ಹುಳಬಿಟ್ಟಿತ್ತು. ಬಸಮ್ಮ ಏನಾದ್ರೂ ಬಳಸೋ ವಿಧಾನದಲ್ಲಿ ಯಡವಟ್ಟು ಮಾಡಿಕೊಂಡ್ಬಿಟ್ರಿದ್ರಾ? ಅಂತಾ ಯೋಚಿಸಿದ್ದರು. ಹಾಗಾಗಿಯೇ ಹೇರ್​ ಡ್ರೈಯರ್ ಸ್ಟೋಟಗೊಂಡಿದೆ ಅಂತಲೇ ಪೊಲೀಸರು ಅಂದುಕೊಂಡಿದ್ರು. ಆದ್ರೆ ಘಟನೆಯಲ್ಲಿ ಗಾಯಗೊಂಡ ಬಸಮ್ಮಳ ಹೇಳಿಕೆ ಗೆಳತಿ ಶಶಿಕಲಾ ಹೇಳಿಕೆಗೆ, ಒಂದುಕ್ಕೊಂದು ತಾಳ ಮೇಳ ಇರಲಿಲ್ಲ. ಹೀಗಾಗಿ ಆದ್ರೆ ಪೊಲೀಸರಿಗೆ ಮಾತ್ರ ಈ ಕೇಸ್ ವಿಚಿತ್ರ ಅನಿಸತೊಡಗಿತ್ತು. ಹೀಗಾಗಿ ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ರು. ಯಾವಾಗ ತನಿಖೆ ಶುರು ಮಾಡಿದರೋ, ಪೊಲೀಸರಿಗೆ ಒಂದೊಂದು ಸತ್ಯ ಬಯಲಾಗುತ್ತಾ ಹೋಯ್ತು. ಅಸಲಿಗೆ ಇದೊಂದು ಕೊಲೆ ಯತ್ನದ ಮಾಸ್ಟರ್‌ ಪ್ಲಾನ್. ಅಂದುಕೊಂಡಿದ್ದೆಲ್ಲಾ ಆಗಿತ್ತು. ಆದ್ರೆ, ಟಾರ್ಗೆಟ್ ಮಾತ್ರ ಮಿಸ್ ಆಗಿತ್ತು.

publive-image

ಕೊಲೆಗಾಗಿ ನಡೆದಿತ್ತು ಮಾಸ್ಟರ್ ಪ್ಲಾನ್!
ನಾವ್ ಮೊದಲೇ ಹೇಳಿದ್ವಿ ಪೊಲೀಸರಿಗೆ ಮೊದಲು ಈ ಹೇರ್ ಡ್ರೈಯರ್ ಶಶಿಕಲಾಗೆ ಕಳಿಸಿದ್ದು ಯಾರು ಅನ್ನೋದನ್ನ ಪತ್ತೆ ಮಾಡ್ಬೇಕಿತ್ತು. ಆಗ ಪೊಲೀಸರು ಈ ಪಾರ್ಸೆಲ್ ಬಂದಿದ್ದ ಡಿಟಿಟಿಸಿ ಕೊರಿಯರ್ ಸೆಂಟರ್​ಗೆ ಹೋಗಿ ವಿಚಾರಿಸಿದ್ದಾರೆ. ಆಗ ಈ ಹೇರ್ ಡ್ರೈಯರ್ ಆನ್​ಲೈನ್​​ ಫ್ಲಾಟ್​ ಫಾರಂನಿಂದ ಬಂದೇ ಇರಲಿಲ್ಲ. ಅದು ಕೊರಿಯರ್ ಮೂಲಕ ಬಂದಿದೆ ಅನ್ನೋ ವಿಚಾರ ಗೊತ್ತಾಗಿದೆ. ಇದೊಂದು ಮ್ಯಾಟರ್​ ಪೊಲೀಸರ ಅನುಮಾನವನ್ನ ಇನ್ನಷ್ಟು ದುಪ್ಟಟ್ಟು ಮಾಡಿತ್ತು. ಆದ್ರೆ ಕೊರಿಯ್ ಬಾಕ್ಸ್​ ಹಿಂದೆ ಫ್ರಮ್ ಅಡ್ರೆಸ್ ವಿಶಾಖಪಟ್ಟಣಂ ಅಂತ ಇತ್ತು. ಹೀಗಾಗಿ ಪೊಲೀಸರು ಏನ್ ಮಾಡಿದ್ರು ಕೊರಿಯರ್ ಕಳಿಸಿದ್ಯಾರು ಅನ್ನೋ ಸತ್ಯ ಗೊತ್ತಾಗಿರಲಿಲ್ಲ.

ಕೊನೆಗೆ ತನಿಖೆಗೆ ಅಂತ ಈ ಬಸಮ್ಮ ಮತ್ತು ಶಶಿಕಲಾ ಇಬ್ಬರ ಮೊಬೈಲ್​ನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿರ್ತಾರೆ. ಆಗ ಹೇರ್ ಡ್ರೈಯರ್‌ ಬ್ಲಾಸ್ಟ್​ನಲ್ಲಿ ಬೆರಳು ಕಳ್ಕೊಂಡಿದ್ದ ಬಸಮ್ಮಳ ವಾಟ್ಸ್​ಪ್​ನಲ್ಲಿ ಅದೊಂದು ಸುಳಿವು ಪೊಲೀಸರಿಗೆ ಸಿಗುತ್ತೆ. ಬಸಮ್ಮನಿಗೆ ಬಂದಿದ್ದ ಅದೊಂದು ವಾಯ್ಸ್​ ಮೆಸೇಜ್​ನಲ್ಲಿ ಇಡೀ ಕೇಸ್​ನ ರಹಸ್ಯ ಅಡಗಿರೋದು ತಿಳಿದು ಬರುತ್ತೆ. ಆಗ್ಲೇ ನೋಡಿ ಈ ಹೇರ್ ಡ್ರೈಯರ್​ ಬ್ಲಾಸ್ಟ್​​ನ ಹೊಸ ಕಹಾನಿ ಓಪನ್ ಆಗೋದು.

ಬಸಮ್ಮಳಿಗೆ ವಾಟ್ಸ್​​ಪ್​ನಲ್ಲಿ ಬಂದಿದ್ದ ಆ ವಾಯ್ಸ್ ನೋಟ್ ಯಾರದು? ಆ ವಾಯ್ಸ್​ ನೋಟ್​​ಗೂ ಈ ಹೇರ್ ಡ್ರೈಯರ್ ಬ್ಲಾಸ್ಟ್​​ಗೆ ಸಂಬಂಧವೇನು? ಹಾಗಾದ್ರೆ ಬಸಮ್ಮ ತನ್ನ ಜೀವಕ್ಕೆ ತಾನೇ ಕುತ್ತು ತಂದುಕೊಂಡ್ಲಾ? ಈ ಎಲ್ಲ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ಪೊಲೀಸರು ತನಿಖೆ ಆರಂಭಿಸಿದಾಗ, ವಾಯ್ಸ್‌ ಮೆಸೇಜ್‌ನಿಂದ ಅಕ್ರಮ ಸಂಬಂಧ ನೆರಳು ಇರೋದು ಕಂಡು ಬರುತ್ತೆ. ಅಲ್ಲಿಂದ ಈ ಕೇಸ್‌ಗೆ ಹೊಸ ತಿರುವು ತೆೆರೆದುಕೊಳ್ಳುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment