/newsfirstlive-kannada/media/post_attachments/wp-content/uploads/2025/01/Hair-Loss.jpg)
ಮುಂಬೈ: ಮಹಾರಾಷ್ಟ್ರದ ಮೂರು ಹಳ್ಳಿಗಳಲ್ಲಿ ವಿಚಿತ್ರ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ಗ್ರಾಮದ ಜನರಲ್ಲಿ ವಿಪರೀತವಾಗಿ ಕೂದಲು ಉದುರುವಿಕೆ ಆರಂಭವಾಗಿದ್ದು, ಜನ ಗಾಬರಿಯಾಗಿದ್ದಾರೆ. ಒಂದೇ ವಾರದಲ್ಲಿ ಮಕ್ಕಳು, ಮಹಿಳೆಯರಿಗೆ ಬೋಳು ತಲೆ ಸಮಸ್ಯೆ ಕಾಣ್ತಿದ್ದು, ಈ ನಿಗೂಢ ಸಮಸ್ಯೆಯಿಂದ ಗ್ರಾಮಸ್ಥರು ಕಂಗಲಾಗಿದ್ದಾರೆ.
ದಪ್ಪ ಹಾಗೂ ದಟ್ಟವಾದ ಕೂದಲು ಪ್ರತಿಯೊಬ್ಬರು ಬಯಸ್ತಾರೆ. ಆದ್ರೆ ಈಗಿನ ಕಾಲದಲ್ಲಿ ಅದು ಕೆಲವರಿಗೆ ಕನಸು, ಅಪೌಷ್ಟಿಕತೆ, ಮಾಲಿನ್ಯ ಹೀಗೆ ನಾನಾ ಕಾರಣಗಳಿಂದ ಕೂದಲು ಉದುರುವಿಕೆ, ಬೊಕ್ಕು ತಲೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದ್ರಲ್ಲೂ ಪುರಷರ ನೋವು ಕೇಳುವ ಹಾಗೇ ಇಲ್ಲ ಬಿಡಿ. ಮೂವತ್ತು ವಯಸ್ಸಾಗುವಷ್ಟರಲ್ಲಿ ಕೂದುಲು ಉದುರುವ ಸಮಸ್ಯೆ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಆದ್ರೆ ಮಹಾರಾಷ್ಟ್ರದ 3 ಗ್ರಾಮಗಳಲ್ಲಿ ವಿಚಿತ್ರ ಸಮಸ್ಯೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರೆಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ.
ನಿಗೂಢ ಸಮಸ್ಯೆಗೆ ಮಹಾರಾಷ್ಟ್ರದ ಮಂದಿ ಕಂಗಾಲು
ಮಹಾರಾಷ್ಟ್ರದ ಮೂರು ಹಳ್ಳಿಗಳಲ್ಲಿ ನಿಗೂಢ ಸಮಸ್ಯೆಯೊಂದು ಕಾಣಿಸಿಕೊಂಡಿದ್ದು, ಜನ ಗಾಬರಿಗೊಂಡಿದ್ದಾರೆ. ಜನರ ಕೂದಲು ವಿಪರೀತವಾಗಿ ಊದರುತ್ತಿದ್ದು, ಕೇವಲ ಒಂದು ವಾರದಲ್ಲಿ ಗ್ರಾಮಸ್ಥರಲ್ಲಿ ಬೋಳು ತಲೆ ಸಮಸ್ಯೆ ಕಾಣಿಕೊಂಡಿದೆ.
ಬೋರಗ್ರಾಮ, ಕಾಲ್ವಾದ್ ಹಾಗೂ ಹಿಂಗ್ನಾ ಗ್ರಾಮಗಳಲ್ಲಿ ಈ ನಿಗೂಢ ಸಮಸ್ಯೆ ಶುರುವಾಗಿದೆ. ಕೆಲವೊಂದು ಆರೋಗ್ಯ ಸಮಸ್ಯೆ ಇದ್ರೆ ಕೂದಲು ಉದುರುವುದಕ್ಕೆ ಸಾಮಾನ್ಯ. ಆದ್ರೆ, ಇಲ್ಲಿ ಮಾತ್ರ ಜನರು ಆರೋಗ್ಯವಾಗಿ ಓಡಾಡಿಕೊಂಡಿದ್ದಾರೆ. ಆದ್ರೆ ತಲೆ ಮುಟ್ಟಿದರೇ ಸಾಕು ಕೂದಲು ಉದುರುತ್ತಿದೆ. ತಲೆ ಬಾಚಿದರೆ ಕೂದಲಿನ ರಾಶಿ, ಕೂದಲು ಬುಡದಿಂದಲೇ ಕಿತ್ತು ಬರ್ತಿದ್ದು, ಹಠಾತ್ ಕೂದಲು ಉದುರುವಿಕೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಮಹಾರಾಷ್ಟ್ರದ ಮೂರು ಗ್ರಾಮಗಳಲ್ಲಿ ಒಂದೇ ವಾರದ ಅಂತರದಲ್ಲಿ 50ಕ್ಕೂ ಹೆಚ್ಚು ಮಂದಿಯ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಮಕ್ಕಳು, ಪುರುಷರು, ಮಹಿಳೆಯರು, ವೃದ್ಧರ ಕೂದಲುಗಳು ಉದುರುತ್ತಿದ್ದು, ಹಠಾತ್ ಕೂದಲು ಉದುರುವಿಕೆಯ ನಿಗೂಢ ಸಮಸ್ಯೆಯಿಂದಾಗಿ ಜನರಿಗೆ ಭೀತಿ ಎದುರಾಗಿದೆ.
ಹೊಸ ರೋಗದ ಆತಂಕ
ಹೊಸ ರೋಗ ಏನಾದ್ರೂ ಕಾಡ್ತಿದ್ಯಾ ಅನ್ನೋ ಆತಂಕ ಗ್ರಾಮಸ್ಥರಿಗೆ ಶುರುವಾಗಿದ್ದು, ಗ್ರಾಮಗಳಿಗೆ ಆರೋಗ್ಯಾಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಕಲುಷಿತ ನೀರಿನಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿರೋ ಅನುಮಾನ ವ್ಯಕ್ತವಾಗಿದ್ದು, ಅಧಿಕಾರಿಗಳು ನೀರು, ಕೂದಲು ಮತ್ತು ಚರ್ಮದ ಮಾದರಿ ಪರೀಕ್ಷೆಗೆ ಒಳಪಡಿಸಿದ್ದಾರೆ.
ಜೊತೆಗೆ ಸಮಸ್ಯೆ ಕಾರಣ ಏನು ಅಂತ ಶೀಘ್ರವಾಗಿ ಪತ್ತೆ ಹಚ್ಚಲು ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಪ್ರಾಥಮಿಕ ಮಾಹಿತಿಯಲ್ಲಿ ನೆತ್ತಿಯ ಶಿಲೀಂಧ್ರ ಸೋಂಕಿನಿಂದಾಗಿ ಈ ಸಮಸ್ಯೆ ಕಾಣಿಸಿಕೊಂಡಿದ್ದಾಗಿ ಪತ್ತೆಯಾಗಿದೆ.
ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿಗೆ ಗಂಭೀರ್ ಕೃಪೆ ಯಾರ ಮೇಲೆ? ಟೀಮ್ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ