/newsfirstlive-kannada/media/post_attachments/wp-content/uploads/2025/05/DOCTOR_dentist.jpg)
ಲಕ್ನೋ: ಕೂದಲು ಕಸಿ ಶಸ್ತ್ರಚಿಕಿತ್ಸೆ (hair transplant surgery) ಮಾಡಿಸಿಕೊಂಡ ಇಬ್ಬರು ಇಂಜಿನಿಯರ್​ಗಳು ಎರಡು ದಿನಗಳ ಒಳಗೆ ಜೀವ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಕಸಿ ಮಾಡಿದ್ದ ವೈದ್ಯೆ ತಿಂಗಳ ಬಳಿಕ ಜೈಲು ಪಾಲಾಗಿದ್ದಾರೆ ಎಂದು ಹೇಳಲಾಗಿದೆ.
ಇಂಜಿನಿಯರ್​ಗಳಾದ ವಿನಿತ್ ಕುಮಾರ್ ದುಬೆ ಮತ್ತು ಪ್ರಮೋದ್ ಕಟಿಯಾರ್ ಕೂದಲು ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಪ್ರಾಣ ಕಳೆದುಕೊಂಡವರು. ಇನ್ನು ಇವರಿಗೆ ಕೂದಲು ಕಸಿ ಮಾಡಿದ್ದ ಡೆಂಟಿಸ್ಟ್​ ಡಾಕ್ಟರ್​ ಅನುಷ್ಕಾ ತಿವಾರಿ, ಪ್ರಕರಣ ದಾಖಲು ಆಗುತ್ತಿದ್ದಂತೆ ಪರಾರಿಯಾಗಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರಾದ ಮೇಲೆ ವಿಚಾರಣೆ ನಡೆಸಿ ವೈದ್ಯೆಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ವಿನಿತ್ ಕುಮಾರ್ ದುಬೆ ಅವರ ಪತ್ನಿ ಜಯ ತ್ರಿಪಾಠಿ ಅವರು ಮೇ 9 ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಮಾರ್ಚ್​ 13 ರಂದು ಪತಿ ಬೇರೆ ಸ್ಥಳದಲ್ಲಿ ಕೂದಲು ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದರಿಂದ ಅವರ ಮುಖವೆಲ್ಲಾ ಊದಿಕೊಂಡಿತ್ತು. ಆಗ ಕಸಿ ಮಾಡಿದ ವೈದ್ಯೆಯನ್ನು ಸಂಪರ್ಕ ಮಾಡಲು ಮುಂದಾದಗ ಅವರು ಸಿಕ್ಕಿರಲಿಲ್ಲ. ಆದರೆ ಯಾವುದೇ ಪರೀಕ್ಷೆ ಮಾಡದೇ ಕಸಿ ಮಾಡಿದ್ದರು. ಬಳಿಕ ಗಂಡನನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾರ್ಚ್​ 15 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ವೇಳೆ ವೈದ್ಯೆಯೊಂದಿಗೆ ಫೋನ್​ನಲ್ಲಿ ಮಾತನಾಡಿದ್ದ ಕಾಲ್ ರೆಕಾರ್ಡ್ ಅನ್ನು ಇಂಜಿನಿಯರ್ ಪತ್ನಿ​ ಮಾಡಿಕೊಂಡಿದ್ದರು.
ಇದನ್ನೂ ಓದಿ: ಜ್ವರ, ನೆಗಡಿ ಇದ್ದ ಮಕ್ಕಳಿಗೆ ರಜೆ ಕೊಡಿ.. ರಾಜ್ಯದ ಎಲ್ಲಾ ಶಾಲೆಗಳಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸೂಚನೆ
[caption id="attachment_125385" align="alignnone" width="800"]
ಡೆಂಟಿಸ್ಟ್​ ಅನುಷ್ಕಾ ತಿವಾರಿ[/caption]
ಈ ಕುರಿತು ವಿನಿತ್ ಕುಮಾರ್ ದುಬೆ ಅವರ ಪತ್ನಿ ಜಯ ತ್ರಿಪಾಠಿ, ಕಾಕದೇವ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರೂ ಪೊಲೀಸರು ಈ ಘಟನೆಯನ್ನ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಅವರು ಮುಖ್ಯಮಂತ್ರಿಗಳ ಕುಂದುಕೊರತೆ ಘಟಕಕ್ಕೆ ದೂರು ನೀಡಿದ್ದರು. ಇದಾದ ಮೇಲೆ ಪೊಲೀಸರು ಮೇ 9 ರಂದು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಈ ಪ್ರಕರಣ ದಾಖಲು ಆಗುತ್ತಿದ್ದಂತೆ ದಂತವೈದ್ಯೆ ಅನುಷ್ಕಾ ಪರಾರಿ ಆಗಿದ್ದರು.
ಇದಾದ ಮೇಲೆ ಕೋರ್ಟ್​ಗೆ ಹಾಜರಾಗಿದ್ದರು. ಈ ವೇಳೆ ಅನುಷ್ಕಾ ಅವರ ಮೇಲೆ ಗಂಭೀರವಾದ ಆರೋಪ ಇದೆ. ಅವರ ವೃತ್ತಿ ಕೂದಲು ಕಸಿಗೆ ಸಂಬಂಧಿಸಿಲ್ಲ ಎಂದರೂ ಸರ್ಜರಿ ಮಾಡಿದ್ದಾರೆ. ಈ ಬಗ್ಗೆ ವೈಜ್ಞಾನಿಕ ಸಾಕ್ಷಿಗಳಿವೆ. ಪ್ರಾಥಮಿಕ ತನಿಖೆಯಲ್ಲಿ ಅನುಷ್ಕಾ ತಿವಾರಿ ತಪ್ಪಿತಸ್ಥರು ಎಂದು ಹೇಳಲಾಗುತ್ತಿದೆ. ತಿಂಗಳ ಬಳಿಕ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಕೋರ್ಟ್​ಗೆ ಹಾಜರು ಆಗುತ್ತಿದ್ದಂತೆ ವೈದ್ಯೆಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಸರ್ಕಾರಿ ವಕೀಲರೊಬ್ಬರು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us