Advertisment

ಅರ್ಧ ಸುಟ್ಟ ಪೇಪರ್ ತುಂಡು ನೀಡಿತು ದೊಡ್ಡ ಸುಳಿವು.. NEET ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್​ಗೆ ಟ್ವಿಸ್ಟ್​..!

author-image
Ganesh
Updated On
ಅರ್ಧ ಸುಟ್ಟ ಪೇಪರ್ ತುಂಡು ನೀಡಿತು ದೊಡ್ಡ ಸುಳಿವು.. NEET ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್​ಗೆ ಟ್ವಿಸ್ಟ್​..!
Advertisment
  • ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಮೂಲ ಎಲ್ಲಿ ಗೊತ್ತಾ..?
  • ಪಾಟ್ನಾದಲ್ಲಿ ಸಿಕ್ಕ ಸಣ್ಣ ಪೇಪರ್ ತುಂಡು ಕೊಟ್ಟಿತು ಸುಳಿವು
  • 33 ಸ್ಥಳಗಳಲ್ಲಿ ದಾಳಿ, 36 ಆರೋಪಿಗಳ ಬಂಧನ

NEET-UG 2024 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದ್ದು, ನಿನ್ನೆ 33 ಸ್ಥಳಗಳಲ್ಲಿ ದಾಳಿ ಮಾಡಿ ಕೆಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದೆ. ಇಲ್ಲಿಯವರೆಗೆ 36 ಆರೋಪಿಗಳನ್ನು ಬಂಧಿಸಿದ್ದು, ಬಿಹಾರದ ಪೊಲೀಸರು 15 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿ ಹಲವು ಸಾಕ್ಷ್ಯಗಳನ್ನು ಸಂಗ್ರಹ ಮಾಡಲಾಗಿದೆ. ಅದರಲ್ಲಿ ಅರ್ಧ ಸುಟ್ಟಿದ್ದ ಪ್ರಶ್ನೆ ಪತ್ರಿಕೆಯ ತುಂಡು ಮಹತ್ವದ ಸುಳಿವು ನೀಡಿದೆ ಎಂದು ತನಿಖಾ ಸಂಸ್ಥೆ ಹೇಳಿದೆ. ತನಿಖೆ ವೇಳೆ ಸಿಕ್ಕಿರುವ ಸಾಕ್ಷ್ಯಗಳ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.

Advertisment

ಅರ್ಧ ಸುಟ್ಟ ಕಾಗದದ ತುಂಡು ನೀಡಿತು ಸುಳಿವು..!
ಬಿಹಾರ ಪಾಟ್ನಾದ ಶಾಸ್ತ್ರಿ ನಗರದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆಯನ್ನು ಸಿಬಿಐ, ಜೂನ್ 23 ರಂದು ಅಧಿಕೃತವಾಗಿ ಕೈಗೆತ್ತಿಕೊಂಡಿತ್ತು. ತನಿಖೆ ವೇಳೆ ಪಾಟ್ನಾದಲ್ಲಿ ಅರ್ಧ ಸುಟ್ಟಿದ್ದ ಪ್ರಶ್ನೆ ಪತ್ರಿಕೆ ತುಂಡು ಸಿಕ್ಕಿತ್ತು. ಅದು ನೀಡಿದ ಸಣ್ಣ ಸುಳಿವಿನೊಂದಿಗೆ ತನಿಖೆ ತೀವ್ರಗೊಳಿಸಿದ್ದ ಸಿಬಿಐ, ಪ್ರಶ್ನೆ ಪತ್ರಿಗೆ ಹೇಗೆ ಲೀಕ್ ಆಯಿತು ಅನ್ನೋದನ್ನು ಬಯಲಿಗೆ ಎಳೆದಿದೆ.

ಇದನ್ನೂ ಓದಿ:24 ಗಂಟೆಯಲ್ಲಿ ಮತ್ತೆ 7 ಜನ ಸಾವು.. ಮಹಾರಾಷ್ಟ್ರಕ್ಕೆ ಮಳೆ ಕಂಟಕ.. ಏನೆಲ್ಲ ಅನಾಹುತ ಆಗ್ತಿದೆ..

publive-image

ಪ್ರಕರಣದ ಮಾಸ್ಟರ್ ಮೈಂಡ್​ ಪಂಕಜ್ ಕುಮಾರ್, ಜಾರ್ಖಂಡ್​​ನ ಹಜಾರಿಬಾಗ್​​ ಓಯಸಿಸ್​ ಶಾಲೆಯಿಂದ (Oasis School in Hazaribagh) ಮೇ 5, 2024 ರಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಸಿಬಿಐ ಹೇಳಿದೆ. ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಸೇರಿದಂತೆ ಹಲವು ಅಧಿಕಾರಿಗಳು ಶಾಮೀಲಾಗಿದ್ದಾರೆ. ತಲೆ ಮರೆಸಿಕೊಂಡಿರುವ ಪಂಕಜ್​​ನನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ.

Advertisment

ಹೇಗೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ..?
2024ರ ಪ್ರಶ್ನೆ ಪತ್ರಿಕೆಗಳನ್ನು ಹೊಂದಿರುವ ಟ್ರಂಕ್ ಅನ್ನು ಶಾಲೆಗೆ ತರಲಾಗಿತ್ತು. ಮೇ 5 ರ ಬೆಳಗ್ಗೆ ಕಂಟ್ರೋಲ್​ ರೂಮ್​ನಲ್ಲಿ ಪ್ರಶ್ನೆ ಪತ್ರಿಕೆಯನ್ನು ಇಡಲಾಗಿತ್ತು. ಟ್ರಂಕ್ ಬಂದ ಕೆಲವೇ ನಿಮಿಷಗಳಲ್ಲಿ ಕಂಟ್ರೋಲ್ ರೂಮ್​​ಗೆ ಅಕ್ರಮ ಪ್ರವೇಶ ಆಗಿದೆ. ಅದಕ್ಕೆ ಶಾಲೆಯ ಪ್ರಾಂಶುಪಾಲರು, ಇತರೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಟ್ರಂಕ್ ತೆರೆಯಲು ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗಿದೆ. ಅಲ್ಲಿಂದ ಅಕ್ರಮವಾಗಿ ತಂದ ಪ್ರಶ್ನೆ ಪತ್ರಿಕೆಯನ್ನು ಸಾಲ್ವರ್ಸ್​ ಎಂದು ಕರೆಯಲ್ಪಡುವ ಎಂಬಿಬಿಎಸ್​ ವಿದ್ಯಾರ್ಥಿಗಳಿಂದ ಪರಿಹರಿಸಲಾಗಿದೆ. ನಂತರ ಉತ್ತರಗಳಿಗಾಗಿ ಹಣ ಪಾವತಿಸಿದ ಆಯ್ದ ವಿದ್ಯಾರ್ಥಿಗಳಿಗೆ ಅದನ್ನು ಹಂಚಲಾಗಿದೆ ಎಂದು ಸಿಬಿಐ ಮಾಹಿತಿ ನೀಡಿದೆ.

ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment