/newsfirstlive-kannada/media/post_attachments/wp-content/uploads/2024/07/HAMAS-LEADER.jpg)
ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh)ಅವರನ್ನು ಇಸ್ರೇಲ್ ಹತ್ಯೆಗೈದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಟೆಹ್ರಾನ್‌ನಲ್ಲಿರುವ ಹಮಾಸ್ ಮುಖ್ಯಸ್ಥನ ನಿವಾಸವನ್ನು ಗುರಿಯಾಗಿಸಿಕೊಂಡು ಇಸ್ಮಾಯಿಲ್ ಹನಿಯೆಹ್ನನ್ನು ಕೊಲ್ಲಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದೃಢಪಡಿಸಿದೆ.
ಬುಧವಾರ ಬೆಳಗ್ಗೆ ದಾಳಿ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಐಆರ್‌ಜಿಸಿ ತಿಳಿಸಿದೆ. ಇಸ್ಮಾಯಿಲ್ ಹನಿಯೆಹ್ ಸಾವಿಗೆ ಇಸ್ರೇಲ್ ಹೊಣೆ ಎಂದು ಹಮಾಸ್ ಹೇಳಿದೆ. ಇರಾನ್‌ನ ನೂತನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅವರು ಭೇಟಿ ನೀಡಿದ್ದರು. ಭೇಟಿ ಬಳಿಕ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಈ ಹಿಂದೆ ಇಸ್ಮಾಯಿಲ್ ಹನಿಯೆಹ್ ಅವರನ್ನು ಕೊಂದು ಹಮಾಸ್ ಗುಂಪನ್ನು ನಾಶ ಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಅಂತೆಯೇ ಇದೀಗ ಇಸ್ರೇಲ್ ಸೇಡು ತೀರಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇಸ್ಮಾಯಿಲ್ ಸಾವಿನ ಬಗ್ಗೆ ಇಸ್ರೇಲ್ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ:ಗಂಭೀರ್ ಅಧ್ಯಕ್ಷತೆಯಲ್ಲಿ ಎಲ್ಲರೂ ಬೌಲರ್ಗಳೇ.. 4 ವಿಕೆಟ್ ಕಿತ್ತ ಸೂರ್ಯ, ರಿಂಕು ಸಿಂಗ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ