/newsfirstlive-kannada/media/post_attachments/wp-content/uploads/2023/10/Netanyahu.jpg)
ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ ಘೋಷಣೆಯಾಗಿ ಎರಡು ತಿಂಗಳ ಬಳಿಕ ಇದೀಗ ಮತ್ತೆ ಯುದ್ಧ ಶುರುವಾಗಿದೆ. ಇಸ್ರೇಲ್‌ನ ಗಾಜಾ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಹಮಾಸ್ ಟೆಲ್ ಅವಿವ್ ಮೇಲೆ ರಾಕೆಟ್ ಉಡಾಯಿಸಿದೆ.
ಹಮಾಸ್ ಮೇಲೆ ಮತ್ತೆ ಇಸ್ರೇಲ್ ದಾಳಿ!
ಕದನ ವಿರಾಮ ಘೋಷಣೆಯಾದ ಬಳಿಕವೂ ಇಸ್ರೇಲ್ ತನ್ನ ವೈಮಾನಿಕ ದಾಳಿಯನ್ನು ಮುಂದುವರಿಸಿದೆ. ಕಳೆದ ಜನವರಿ 19ರಂದು ಕದನ ವಿರಾಮ ಘೋಷಣೆಯಾಗಿತ್ತು.. ಇದಾದ ಎರಡು ತಿಂಗಳಿಗೆ ಮತ್ತೆ ದಾಳಿಯನ್ನ ಶುರು ಮಾಡಿಕೊಂಡಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಭೀಕರ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್, ಗಾಜಾದಲ್ಲಿ 400ಕ್ಕೂ ಅಧಿಕ ಮಂದಿಯನ್ನ ಕೊಂದು ಹಾಕಿತ್ತು. ಗಾಜಾ ಪಟ್ಟಿಯಲ್ಲಿದ್ದ ಹಮಾಸ್‌ನ ಆಂತರಿಕ ಭದ್ರತಾ ಸೇವೆಗಳ ಮುಖ್ಯಸ್ಥ ಮಹಮೂದ್ ಅಬು ವತ್ಫಾ ಕೂಡ ಇಸ್ರೇಲ್ ದಾಳಿಗೆ ಬಲಿಯಾಗಿದ್ದ. ನಿನ್ನೆ ಗಾಜಾಪಟ್ಟಿಯ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಹಲವು ಮನೆಗಳು ಹಾಗೂ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಹಮಾಸ್ ನಾಯಕರೂ ಸೇರಿ 70ಕ್ಕೂ ಅಧಿಕ ಜನ ಹತ್ಯೆಗೀಡಾಗಿದ್ದಾರೆ.
ಇದನ್ನೂ ಓದಿ: ಹನಿಟ್ರ್ಯಾಪ್ ಗುಟ್ಟು ರಟ್ಟು.. K.N ರಾಜಣ್ಣ ಹೇಳಿಕೆ ಬೆನ್ನಲ್ಲೇ ಸ್ಫೋಟಕ ಟ್ವಿಸ್ಟ್; ಕಾಂಗ್ರೆಸ್ ಪಕ್ಷದಲ್ಲಿ ಏನಾಗ್ತಿದೆ?
ಇಸ್ರೇಲ್‌ನ ಗಾಜಾ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಹಮಾಸ್ ಟೆಲ್ ಅವಿವ್ ಮೇಲೆ ರಾಕೆಟ್ ದಾಳಿ ನಡೆಸಿದೆ. ನಿನ್ನೆ ಹಮಾಸ್ ಗಾಜಾದಿಂದ ಇಸ್ರೇಲ್‌ನತ್ತ ಒಟ್ಟು ಮೂರು ರಾಕೆಟ್‌ಗಳನ್ನ ಹಾರಿಸಿದೆ. ಇಸ್ರೇಲ್ ಸೇನೆ ಒಂದು ರಾಕೆಟ್ ಅನ್ನು ತಡೆಯುವಲ್ಲಿ ಸಫಲವಾಗಿದ್ದು, ಉಳಿದ ಎರಡು ರಾಕೆಟ್‌ಗಳು ಟೆಲ್ ಅವಿವ್ ನಗರದ ಹೊರವಲಯದಲ್ಲಿ ಸ್ಫೋಟಗೊಂಡಿವೆ.
ಮತ್ತೆ ಯುದ್ಧಕ್ಕೆ ಕಾರಣವೇನು?
ಕದನ ವಿರಾಮ ಒಪ್ಪಂದ ಜಾರಿಯಾಗುವ ಸಂದರ್ಭದಲ್ಲೇ ಹಮಾಸ್ ಒತ್ತೆಯಾಳುಗಳನ್ನ ಬಿಡುಗಡೆ ಮಾಡದಿದ್ದಲ್ಲಿ ಒಪ್ಪಂದವನ್ನ ಮುರಿದು ಇಸ್ರೇಲ್ ದಾಳಿ ಮಾಡಿದೆ. ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳ ಒತ್ತಡದ ಹೊರತಾಗಿಯೂ ಹಮಾಸ್ ತನ್ನ ವಶದಲ್ಲಿರುವ ಇಸ್ರೇಲಿ ಒತ್ತೆಯಾಳುಗಳನ್ನ ಬಿಡುಗಡೆ ಮಾಡಲು ಮುಂದಾಗದಿರುವುದು, ಸಂಘರ್ಷ ಮತ್ತೆ ಆರಂಭವಾಗಲು ಕಾರಣವಾಗಿದೆ. ಶಾಂತಿ ಮಾತುಕತೆಗೆ ಉಭಯ ಬಣಗಳು ಸಿದ್ಧರಿಲ್ಲದಿರುವುದು ಸಂಘರ್ಷದ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇದೀಗ ಹಮಾಸ್ ಕೂಡ ಇಸ್ರೇಲ್ ಮೇಲೆ ದಾಳಿಯನ್ನ ಆರಂಭಿಸಿದ್ದು, ಇಸ್ರೇಲ್ ಪ್ರಮುಖ ನಗರಗಳ ಮೇಲೆ ದಾಳಿ ಮಾಡಲು ಕಣ್ಣಿಟ್ಟಿದೆ.
ಗಾಜಾ ಮೇಲಿನ ಇಸ್ರೇಲ್ ದಾಳಿ ತೀವ್ರ ಮಾನವೀಯ ಬಿಕ್ಕಟ್ಟನ್ನ ಸೃಷ್ಟಿಸ್ತಿದೆ. ನೂರಾರು ಸಂಖ್ಯೆಯಲ್ಲಿ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸಾಯುತ್ತಿರುವುದು ಜಾಗತಿಕ ಕಳವಳವನ್ನ ಹೆಚ್ಚಿಸಿದೆ.
ಇದನ್ನೂ ಓದಿ: SSLC ಪರೀಕ್ಷೆ.. ಮಕ್ಕಳೇ ಭಯ ಬಿಡಿ ಈ 5 ಟಿಪ್ಸ್ ಮರೆಯದೇ ಫಾಲೋ ಮಾಡಿ; ಆಲ್ ದಿ ಬೆಸ್ಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ