/newsfirstlive-kannada/media/post_attachments/wp-content/uploads/2025/01/bbk11114.jpg)
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ ಇಂದಿಗೆ 116 ದಿನಗಳನ್ನು ಕಳೆದಿವೆ. ಈಗಾಗಲೇ ಬಿಗ್ಬಾಸ್ ಮನೆಗೆ 20 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಆ 20 ಸ್ಪರ್ಧಿಗಳಲ್ಲಿ ಈಗ ಬಿಗ್ಬಾಸ್ ಮನೆಯಲ್ಲಿ 6 ಫೈನಲಿಸ್ಟ್ಗಳು ಇದ್ದಾರೆ. ಇನ್ನೂ ಒಂದೇ ದಿನದಲ್ಲಿ ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಬಿಗ್ಬಾಸ್ ಮನೆಯಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈಗ ಆರು ಸ್ಪರ್ಧಿಗಳಗೆ ಆಡಲು ಟಾಸ್ಕ್‌ಗಳೂ ಇಲ್ಲ. ಜಗಳ ಆಡಲು ವಿಷಯಗಳೂ ಕಾಲಿಯಾಗಿವೆ. ಈಗ ಏನಿದ್ದರು ಬಿಗ್ಬಾಸ್ ಟ್ರೋಫಿ ಬಗ್ಗೆಯೇ ಸ್ಪರ್ಧಿಗಳು ಚಿಂತೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಪ್ರಸಂಗ.. ಮೀಟರ್ ಬಡ್ಡಿ ಹಾವಳಿಗೆ ಊರು ಬಿಟ್ಟ ಕುಟುಂಬ..!
ಆದ್ರೆ ಇದರ ಮಧ್ಯೆ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಹಂಸ ಪ್ರತಾಪ್ ಅವರು ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಇರುವ ಪಕ್ಕಾ ಕ್ರಿಮಿನಲ್ ಯಾರು ಎಂಬ ಪ್ರಶ್ನೆ ಉತ್ತರ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಪಕ್ಕಾ ಕ್ರಿಮಿನಲ್ ಸ್ಪರ್ಧಿ ಎಂದರೆ ಅದು ಹನುಮಂತ. ನಾವೆಲ್ಲಾ ಅಂದುಕೊಂಡ ಹಾಗೇ ಹನುಮಂತ ಮುಗ್ಧ ಅಲ್ಲವೇ ಅಲ್ಲ. ಸರಿಯಾಗಿ ಏಟಿಗೆ ಎದುರೇಟು ಕೊಡ್ತಾ ಇರುತ್ತಾರೆ. ಹಾಗಾಗಿ ಹನುಮಂತ ದೊಡ್ಡ ಕ್ರಿಮಿನಲ್ ಆಗಿದ್ದಾರೆ. ಒಂದು ಹಳ್ಳಿಯಿಂದ ಬಂದು ತ್ರಿವಿಕ್ರಮ್, ರಜತ್, ಮಂಜು ಜೊತೆಗೆ ನಿಂತು ಆಟ ಗೆದ್ದು ಬಂದಿದ್ದಾರೆ ಅಂದ್ರೆ ಒಳ್ಳೆಯ ರೀತಿಯಲ್ಲಿ ಹನುಮಂತ ಕ್ರಿಮಿನಲ್ ಆಗಿದ್ದಾರೆ ಎಂದಿದ್ದಾರೆ.
ಇನ್ನೂ, ಜನವರಿ 25, 26ರಂದು ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಕೊನೆಯದಾಗಿ ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ. ಈ ಸೀಸನ್ ಬಳಿಕ ಅವರು ಬಿಗ್ ಬಾಸ್ ನಿರೂಪಣೆ ಮಾಡೋದಿಲ್ಲ ಅಂತ ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸದ್ಯ ಈ ಬಾರಿಯ ಬಿಗ್ಬಾಸ್ ಸೀಸನ್ 11ರ ಟ್ರೋಫಿ ಯಾರ ಕೈಗೆ ಸೇರಲಿದೆ ಎಂದು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ