newsfirstkannada.com

ಹಾನಗಲ್​ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್​; ಎಸ್​ಪಿ ಅಂಶು ಕುಮಾರ್​ರಿಂದ ಮಹತ್ವದ ಮಾಹಿತಿ

Share :

Published January 11, 2024 at 3:05pm

    ಗ್ಯಾಂಗ್ ರೇಪ್ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು

    ಮಹಿಳೆಯಿಂದ ಮಹತ್ವದ ಹೇಳಿಕೆ ಪಡೆಯಲಿರುವ ಹಾವೇರಿ ಪೊಲೀಸ್

    ಕೃತ್ಯ ಖಂಡಿಸಿದ ಮಾಜಿ ಸಿಎಂ ಬೊಮ್ಮಾಯಿ, ಸರ್ಕಾರದ ವಿರುದ್ಧ ವಾಗ್ದಾಳಿ

ಹಾವೇರಿ: ಹಾನಗಲ್​ನ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಂತ್ರಸ್ಥ ಮಹಿಳೆ ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಆರೋಪ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ವೈರಲ್​ ಆದ ವಿಡಿಯೋ ಬೆನ್ನಲ್ಲೇ ಹಾವೇರಿ ಜಿಲ್ಲೆಯ ಎಸ್​ಪಿ ಅಂಶು ಕುಮಾರ್ ಹೇಳಿಕೆ ನೀಡಿದ್ದಾರೆ. ನಿನ್ನೆ ಸಂತ್ರಸ್ತೆಯ 161 ಸ್ಟೇಟಮೆಂಟ್ ನಲ್ಲಿ ಯಾವುದೇ ಗ್ಯಾಂಗ್ ರೇಪ್ ಆಗಿಲ್ಲ ಎಂದು ಹೇಳಿದ್ದಾರೆ ಅಂತಾ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಎಸ್​ಪಿ ಅಂಶು ಕುಮಾರ್, ರಿಟರ್ನ್ ಸ್ಟೇಟ್ಮೆಂಟ್ ಕೂಡಾ ಮಾಡಿದ್ದೀವಿ. ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ನಿನ್ನೆವರೆಗೂ ರೇಪ್ ಆಗಿದೆ ಎಂದು ಆರೋಪ ಮಾಡಿಲ್ಲ, ಹೇಳಿಕೆಯಲ್ಲಿ ಬಂದಿಲ್ಲ. ಮ್ಯಾಜಿಸ್ಟ್ರೇಟ್ ಮುಂದೆ ಇಂದು 164 ಸ್ಟೇಟ್​ಮೆಂಟ್ ಕೂಡಾ ಮಾಡಲಾಗುತ್ತೆ. ಮ್ಯಾಜಿಸ್ಟ್ರೇಟ್ ಮುಂದೆ ಏನು ಹೇಳ್ತಾರೆ ಅದರ ಮೇಲೆ ತನಿಖೆ ಮಾಡಲಾಗುತ್ತೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿರುವ ಅವರು, ಇಂದು 164 ಸ್ಟೇಟ್​​ಮೆಂಟ್ ಮಾಡಿಸ್ತೀವಿ. ನಿನ್ನೆಯತನಕ ಅತ್ಯಾಚಾರ ಅಂತ ನಮಗೆ ಹೇಳಿಲ್ಲ. ವಿಡಿಯೋ ಸ್ಟೇಟ್ ಮೆಂಟ್ ನಲ್ಲಿ ಅವರು ಹೇಳಿಲ್ಲ. ಮತ್ತೆ ಇವತ್ತು 164 ಸ್ಟೇಟ್ ಮೆಂಟ್ ನಲ್ಲಿ ಏನು ಬರುತ್ತೆ. ಅದರ ಮೇಲೆ ಮತ್ತೆ ಸೆಕ್ಷನ್ ಸೇರಿಸ್ತೀವಿ. ಅವರು ಪ್ರತ್ಯೇಕ ದೂರು ಕೊಟ್ಟರೆ ಅದರ ಮೇಲೆ FIR ಮಾಡಿ ತನಿಖೆ ಮಾಡ್ತೀವಿ. ನಿನ್ನೆ ಎಫ್​ಐಆರ್​ನಲ್ಲಿ 3 ಜನರ ಹೆಸರು ಇದ್ದವು. ಮತ್ತೆ ಹೆಚ್ಚಿನ ತನಿಖೆ ನಡೆಸಿದಾಗ 6 ರಿಂದ 7 ಜನ ಇದಾರೆ ಅಂತ ಮಾಹಿತಿ ಇದೆ. ಅವರನ್ನೂ ಸಹಿತ ಹುಡುಕಾಡುತ್ತಿದ್ದೀವೆ ಎಂದ ಹಾವೇರಿ ಎಸ್​ಪಿ ಅಂಶು ಕುಮಾರ್ ಹೇಳಿದ್ದಾರೆ.

ಬೊಮ್ಮಾಯಿ ಖಂಡನೆ

ಇನ್ನು ಪುಂಡರ ಕೃತ್ಯವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಖಂಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು.. ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ವಸತಿಗೃಹದಲ್ಲಿದ್ದ ಜೋಡಿಯ ಮೇಲೆ ದುಷ್ಕರ್ಮಿಗಳು ನೈತಿಕ ಪೊಲೀಸ್ ಗಿರಿ ನಡೆಸಿರುವುದು ಖಂಡನೀಯ. ಅಮಾಯಕರ ಮೇಲೆ ನೈತಿಕ ಪೋಲಿಸ್ ಗಿರಿ ನಡೆಸಿರುವ ಎಲ್ಲ ಗೂಂಡಾಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಯುವತಿಯ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ತೆರಳಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಈ ರೀತಿ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ಪುಂಡರು ರಾಜಾರೋಷವಾಗಿ ನೈತಿಕ ಪೊಲೀಸ್ ಗಿರಿ ಮಾಡಲು ಬಿಟ್ಟಿರುವುದನ್ನು ನೋಡಿದರೆ, ರಾಜ್ಯದಲ್ಲಿ ಸರ್ಕಾರ ಜೀವಂತ ಇದೀಯಾ ಇಲ್ಲವೋ ಎನ್ನುವಂತಾಗಿದೆ. ನೈತಿಕ ಪೊಲಿಸ್ ಗಿರಿ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಹೀನ ಕೃತ್ಯ ನಡೆದರೂ ಮೌನ ವಹಿಸಿರುವುದೇಕೆ. ದೌರ್ಜನ್ಯ ಮಾಡಿರುವ ಕಿರಾತಕರು ಅಲ್ಪ ಸಂಖ್ಯಾತರು ಅನ್ನುವ ಕಾರಣಕ್ಕೆ ದಿವ್ಯ ಮೌನ ವಹಿಸಿದ್ದಾರಾ? ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಏನಿದು ಪ್ರಕರಣ..? 

ಜನವರಿ 8 ರಂದು ಹಾನಗಲ್ ಸಮೀಪದ ನಾಲ್ಕರ ಕ್ರಾಸ್ ಬಳಿಯ ಲಾಡ್ಜ್​ಗೆ ಶಿರಸಿ ಮೂಲದವರೆನ್ನಲಾದ ಅನ್ಯ ಕೋಮಿನ ಯುವತಿಯೊಂದಿಗೆ ಯುವಕನೋರ್ವ ಆಗಮಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ 5-6 ಯುವಕರ ಗುಂಪು ಲಾಡ್ಜ್​ಗೆ ನುಗ್ಗಿ ಯುವಕ-ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಕೊನೆಗೆ ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ಮಾನಸಿಕ ಕಿರುಕುಳ ಹಾಗೂ ದೈಹಿಕ ಹಲ್ಲೆ ನಡೆಸಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಲಾಡ್ಜ್​ಗೆ ನುಗ್ಗಿ ದಾಂಧಲೆ ನಡೆಸಿದ್ದಕ್ಕೆ ಲಾಡ್ಜ್ ರೂಮ್​ ಬಾಯ್ ವಿನಯ್ ಹಾನಗಲ್ಲ ಠಾಣೆಗೆ ದೂರು ನೀಡಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಚಾಲಕನಾಗಿರುವ ಸೋಮಶೇಖರ ಎಂಬ ಯುವಕ ಯುವತಿಯೊಂದಿಗೆ ಆಗಮಿಸಿದ್ದಾಗ ಅನ್ಯ ಕೋಮಿನ ಯುವಕರು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾನಗಲ್​ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್​; ಎಸ್​ಪಿ ಅಂಶು ಕುಮಾರ್​ರಿಂದ ಮಹತ್ವದ ಮಾಹಿತಿ

https://newsfirstlive.com/wp-content/uploads/2024/01/Amshu-kumar.jpg

Load More