/newsfirstlive-kannada/media/post_attachments/wp-content/uploads/2024/05/MUMBAI_POLICE.jpg)
ಸಾಂದರ್ಭಿಕ ಚಿತ್ರ
ಬೆಂಗಳೂರು: ಬ್ಯಾಗ್ನಲ್ಲಿ ಹ್ಯಾಂಡ್ ಗ್ರೆನೇಡ್ ಇಟ್ಕೊಂಡಿದ್ದ ವ್ಯಕ್ತಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರೆಹಮಾನ್ ಬಂಧಿತ ವ್ಯಕ್ತಿ.
ಇದನ್ನೂ ಓದಿ:65 ವರ್ಷದ ಹಳೇ ಸಿನಿಮಾ.. ಒಂದು ಹಾಡನ್ನು 105 ಬಾರಿ ಬರೆಯಲಾಯ್ತು; ಶೂಟಿಂಗ್ ಮಾಡಲು ತೆಗೆದುಕೊಂಡಿದ್ದು 2 ವರ್ಷ!
ಎರಡು ದಿನದ ಹಿಂದೆ ಅಬ್ದುಲ್ ರೆಹಮಾನ್ ಠಾಣಾ ವ್ಯಾಪ್ತಿಯ ವೈಭವ್ ಹೋಟೆಲ್ಗೆ ಕೆಲಸಕ್ಕೆ ಸೇರಿದ್ದ. ಸಪ್ಲೆಯರ್ ಆಗಿ ಕೆಲಸಕ್ಕೆ ಸೇರಿದ್ದ ಆತ, ತನ್ನನ್ನು ಬೆಳ್ಳಹಳ್ಳಿಯ ನಿವಾಸಿ ಎಂದು ಹೇಳಿಕೊಂಡಿದ್ದ. ಆಗ ಹೋಟೆಲ್ನವರು ಆಧಾರ್ ಕಾರ್ಡ್ ಕೇಳಿದ್ದಾರೆ. ಆದ್ರೆ ಆತ ಕೆಲಸಕ್ಕೆ ಸೇರಿ ಎರಡು ದಿನಗಳು ಕಳೆದರೂ ಆಧಾರ್ ಕಾರ್ಡ್ ಕೊಟ್ಟಿರಲಿಲ್ಲ.
ಹೋಟೆಲ್ ಸಿಬ್ಬಂದಿಯೊಬ್ಬರು ವಾಸವಿದ್ದ ಶೆಡ್ನಲ್ಲಿ ಬ್ಯಾಗ್ ಚೆಕ್ ಮಾಡಿದ್ದಾರೆ. ಈ ವೇಳೆ ಬ್ಯಾಗ್ನಲ್ಲಿ ಹ್ಯಾಂಡ್ ಗ್ರೆನೇಡ್ ಸಿಕ್ಕಿದೆ. ಆ ಕೂಡಲೇ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯನ್ನು ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣಗೆ ಒಳಪಡಿಸಿದ್ದಾರೆ. ಅದರ ಬಗ್ಗೆ ನನಗೆ ಗೊತ್ತಿಲ್ಲ, ರಸ್ತೆ ಬದಿ ಸಿಕ್ಕಿತ್ತು ಎಂದಿದ್ದಾನೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ