/newsfirstlive-kannada/media/post_attachments/wp-content/uploads/2024/08/KOLKATTA-RAPE-AND-MURDER-2.jpg)
ಆರ್​.ಜಿ.ಕರ್ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಮಹಿಳಾ ವೈದ್ಯೆಯ ಮೇಲೆ ನಡೆದ ಅನಾಚಾರದಿಂದ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಒಂದು ಮುಗಿಯದ ಆಕ್ರೋಶ ದೇಶಾದ್ಯಂತ ಹೊರಹೊಮ್ಮಿತ್ತು. ಸದ್ಯ ವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಸಂಜಯ್ ರಾಯ್​ನನ್ನು ಸೇಷನ್ಸ್ ನ್ಯಾಯಾಲಯ ದೋಷಿ ತೀರ್ಪು ನೀಡಿ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ. ಇದೇ ವಿಚಾರವಾಗಿ ಅಪರಾಧಿ ಸಂಜಯ್​ ರಾಯ್ ಅವರ ತಾಯಿ ಮಾತನಾಡಿದ್ದು. ನನ್ನ ಮಗ ನಿಜಕ್ಕೂ ಅಂತಹ ಕ್ರೂರಿ ಕೆಲಸ ಮಾಡಿದ್ದರೆ ಅವನಿಗೆ ಯಾವ ಬೇಕಾದ ಶಿಕ್ಷೆಯನ್ನು ಕಾನೂನು ನೀಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಂಜಯ್ ರಾಯ್ ರಾಕ್ಷಸ ಕೃತ್ಯ ಸಾಬೀತು.. ಕೊಲ್ಕತ್ತಾ RG Kar ವೈದ್ಯೆ ಪ್ರಕರಣಕ್ಕೆ ಮಹತ್ವದ ತೀರ್ಪು ಪ್ರಕಟ
ನನ್ನ ಮಗ ಸಂಜಯ್ ನಿಜಕ್ಕೂ ಅಂತಹ ಅಪರಾಧ ಮಾಡಿದ್ದರೆ ಕೋರ್ಟ್ ಆತನನ್ನು ನೇಣುಗಂಬಕ್ಕೆ ಏರಿಸಿದರೂ ಕೂಡ ನನಗೆ ಚಿಂತೆಯಿಲ್ಲ. ಅದಕ್ಕಾಗಿ ನಾನೊಬ್ಬಳೆ ಅಳುತ್ತೇನೆ ಆದ್ರೆ ಶಿಕ್ಷೆಯನ್ನು ನಾನು ಸಮರ್ಥಿಸುತ್ತೇನೆ ಎಂದು ಮಾಲತಿ ರಾಯ್ ಹೇಳಿದ್ದಾರೆ.
ಸಿಲ್ಡಾ ಕೋರ್ಟ್​​ನ 5 ಕಿಲೋ ಮೀಟರ್ ದೂರದಲ್ಲಿರುವ ತನ್ನ ಮನೆಯೆದರು ಮಾತನಾಡಿದ ಮಾಲತಿ ರಾಯ್​, ಒಂದು ವೇಳೆ ನನ್ನ ಮಗನ ಮೇಲಿನ ಆರೋಪಗಳೆಲ್ಲವು ಸುಳ್ಳು ಎಂಬುದಾಗಿದ್ದರೆ ನಾನು ಕೂಡ ಕೋರ್ಟ್​​ನ ವಿಚಾರಣೆಯನ್ನು ನೋಡಲು ಹೋಗುತ್ತಿದ್ದೆ ಎಂದು ಹೇಳಿದ್ದಾರೆ.
ಇದೆಲ್ಲದರ ಜೊತೆಗೆ ನಾನು ಸಂತ್ರಸ್ಥೆಯ ತಾಯಿಯ ನೋವು ಎನು ಎಂಬುದನ್ನು ಬಲ್ಲೆ. ಒಂದು ಹೆಣ್ಣಾಗಿ ಆ ತಾಯಿಯ ಸಂಕಟವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನನಗೂ ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ. ಅವರಲ್ಲಿ ಒಬ್ಬಳು ಕೆಲವು ವರ್ಷಗಳ ಹಿಂದೆ ತೀರಿಕೊಂಡರು ಎಂದು ಹೇಳಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us