/newsfirstlive-kannada/media/post_attachments/wp-content/uploads/2025/01/HANSIKA-MOTWANI.jpg)
ಟೆಲಿವಿಷನ್ ನಟಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್​ ತನ್ನ ಪತಿ ಪ್ರಶಾಂತ್ ಮೋಟ್ವಾನಿ ವಿರುದ್ಧ ದೂರು ನೀಡಿದ್ದಾರೆ. ಕೌಟುಂಬಿಕ ಕಿರುಕುಳ ನೀಡಿದ ಆರೋಪ ಮಾಡಿರುವ ಮುಸ್ಕಾನ್​. ಪ್ರಶಾಂತ್ ತಾಯಿ ಮೋನಾ ಮೋಟ್ವಾನಿ ಹಾಗೂ ಸಹೋದರಿ ಹನ್ಸಿಕಾ ಮೋಟ್ವಾನಿ ಹೆಸರನ್ನು ಕೂಡ ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ಆಸ್ತಿ ವಿಚಾರದಲ್ಲಿ ನನಗೆ ಮೋಸ ಆಗಿದೆ ಎಂದು ಕೂಡ ಆರೋಪಿಸಿದ್ದಾರೆ.
ಹನ್ಸಿಕಾ ಮೋಟ್ವಾನಿ ಅಂದ್ರೆ ಥಟ್ ನೆನಪಗೋದು ಅಪ್ಪು ನಟನೆಯ ಬಿಂದಾಸ್ ಸಿನಿಮಾ. ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು ಹನ್ಸಿಕಾ ಮೋಟ್ವಾನಿ. ಅವರ ವಿರುದ್ಧವೂ ಹಲವು ಆರೋಪಗಳನ್ನು ಮಾಡಿದ್ದಾರೆ ಮುಸ್ಕಾನ್​. ಸದ್ಯ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 18 ರಂದು ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತಾ ಕಾಯ್ದೆ 498-ಎ, 323, 504, 506, ಮತ್ತು 34ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಪೊಲೀಸರು.
ಇದನ್ನೂ ಓದಿ: ವಿವಾದದ ಹೊಗೆ ಹೊತ್ತಿಸಿದ ಬಿಳ್ಕೋಡುಗೆ ಸಮಾರಂಭದ ಸಂಭ್ರಮ.. 70 ವಿದ್ಯಾರ್ಥಿಗಳ ಮೇಲೆ ಎಫ್​ಐಆರ್! ಆಗಿದ್ದೇನು?
ಅವರ ಅತ್ತೆ ಹಾಗೂ ನಾದಿನಿ ನನ್ನ ಮದುವೆಯ ವಿಷಯದಲ್ಲಿ ಮೂಗು ತೂರಿಸುತ್ತಾರೆ ಎಂದು ಮುಸ್ಕಾನ್ ಎಫ್​ಐಆರ್​ನಲ್ಲಿ ಆರೋಪಿಸಿದ್ದಾರೆ. ಅದು ಮಾತ್ರವಲ್ಲ ನನ್ನ ಪತಿ ನನಗೆ ಕಿರುಕುಳ ನೀಡುತ್ತಾರೆ. ದುಬಾರಿ ಗಿಫ್ಟ್​ಗಳನ್ನು ನೀಡುವಂತೆ ಹಾಗೂ ಹಣವನ್ನು ನೀಡುವಂತೆ ಪೀಡಿಸುತ್ತಾರೆ ಎಂದು ಆರೋಪಿಸಿದ್ದಲ್ಲದೇ ಆಸ್ತಿ ವಿಚಾರದಲ್ಲಿ ನನಗೆ ಮೋಸ ಮಾಡಿದ್ದಾರೆ ಎಂದು ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಸ್ಕಾನ್. ಸದ್ಯ ನಾನು ಕಾನೂನು ಹೋರಾಟ ಮಾಡುತ್ತಿದ್ದೇನೆ. ಪ್ರಕರಣ ದಾಖಲಾಗಿದೆ ಹೀಗಾಗಿ ಇದರ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂದಿದ್ದಾರೆ.
2020ರಲ್ಲಿ ಮದುವೆಯಾಗಿದ್ದ ಮುಸ್ಕಾನ್ ಹಾಗೂ ಪ್ರಶಾಂತ್​, 2022ರಲ್ಲಿ ಬೇರೆ ಬೇರೆಯಾಗಿದ್ದರು. ಅಂದಿನಿಂದ ಇಂದಿನವರೆಗೂ ಪ್ರಶಾಂತ್ ಆಗಲಿ ಅಥವಾ ಹನ್ಸಿಕಾ ಆಗಲಿ ಈ ಬಗ್ಗೆ ಒಂದೇ ಒಂದು ಹೇಳಿಕೆಯನ್ನು ಎಲ್ಲಿಯೂ ಕೂಡ ಕೊಟ್ಟಿಲ್ಲ.ಮುಸ್ಕಾನ್​ ಜನಪ್ರಿಯ ಧಾರವಾಹಿ ನಟಿ. ಥೋಡಿ ಖುಷಿ ಥೋಡಿ ಗಮ್ ಧಾರವಾಹಿ ಮೂಲಕ ಕಿರುತೆರೆಗ ಎಂಟ್ರಿ ಕೊಟ್ಟ ಮುಸ್ಕಾನ್ ಮೊದಲ ಧಾರಾವಾಹಿಯಲ್ಲಿ ಬಹುದೊಡ್ಡ ಹೆಸರು ಮಾಡಿದರು. ಸದ್ಯ ಅವರ ಕುಟುಂಬದ ಜಗಳ ಬೀದಿಗೆ ಬಂದಿದ್ದು. ಖ್ಯಾತಿ ನಟಿ ಹನ್ಸಿಕಾ ಮೋಟ್ವಾನಿ ಅವರ ಹೆಸರು ಕೂಡ ಈಗ ತಳುಕು ಹಾಕಿಕೊಂಡಿದೆ.
ಇದನ್ನೂ ಓದಿ:ಪವಿತ್ರಾಗೌಡ ಬೆನ್ನಲ್ಲೆ ಮತ್ತೊಬ್ಬ ಸ್ಟಾರ್ ನಟಿಗೆ ಅಶ್ಲೀಲ ಕಮೆಂಟ್ ಕಿರುಕುಳ; ಮಲೆಯಾಳಂ ಹೀರೋಯಿನ್ ಮಾಡಿದ್ದೇನು?
ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಈ ಹಿಂದೆ ಯಾವುದೇ ರೀತಿಯ ವಿವಾದಗಳಲ್ಲಿ ಸಿಲುಕಿಕೊಂಡಿರಲಿಲ್ಲ. ಸದ್ಯ ಈಗ ಅವರ ಕುಟುಂಬದ ಜನಗಳ ಬೀದಿಗೆ ಬಂದಿದೆ. ಎಫ್​ಐಆರ್​​ನಲ್ಲಿಅ ವರ ಹೆಸರು ಕೂಡ ಸೇರಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಕೌಟುಂಬಿಕ ಕಲಹ ಯಾವ ಹಂತಕ್ಕೆ ಹೋಗಲಿವೆ ಎಂದು ಕಾಲವೇ ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us