BBK11: ಮುದ್ದಿನ ಮಗನನ್ನು ನೋಡಲು ಬಿಗ್​ಬಾಸ್​ ಮನೆಗೆ ಬಂದ ಹನುಮನ ಅಪ್ಪ-ಅವ್ವ; ತಂದಿದ್ದು ಏನು?

author-image
Veena Gangani
Updated On
BBK11: ಹನುಮಂತನ ಮದ್ವೆ ಆಗೋ ಹುಡುಗಿ ಹೇಂಗಿರ್ಬೇಕು? ಬಿಗ್ ಬಾಸ್ ಮನೆಯಲ್ಲಿ ಆಸೆ ಬಿಚ್ಚಿಟ್ಟ ಅವ್ವ!
Advertisment
  • ಕುಟುಂಬಸ್ಥರನ್ನು ಮಿಸ್​ ಮಾಡಿಕೊಳ್ಳುತ್ತಿದ್ದ ಸ್ಪರ್ಧಿಗಳು ಖುಷ್
  • ಗ್ರ್ಯಾಂಡ್​ ಫಿನಾಲೆಗೆ ಹತ್ತಿರವಾಗುತ್ತಿದೆ ಬಿಗ್​ಬಾಸ್​ ಸೀಸನ್ 11
  • ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ರು ಹಳ್ಳಿ ಹೈದನ ಪೋಷಕರು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಫಿನಾಲೆಗೆ ಹತ್ತಿರವಾಗುತ್ತಿದೆ. 95ನೇ ದಿನಕ್ಕೆ ಕಾಲಿಟ್ಟಿರೋ ಬಿಗ್​ಬಾಸ್​ ಸ್ಪರ್ಧಿಗಳು ಕುಟುಂಬಸ್ಥರನ್ನು ಮಿಸ್​ ಮಾಡಿಕೊಳ್ಳುತ್ತಿದ್ದರು. ಅದರಂತೆ ಬಿಗ್​ಬಾಸ್​ ಸ್ಪರ್ಧಿಗಳಿಗೆ ಹೊಸ ವರ್ಷದ ದಿನವೇ ಸರ್ಪ್ರೈಸ್ ಕೊಟ್ಟಿದ್ದರು.

ಇದನ್ನೂ ಓದಿ:ತಿಮ್ಮಪ್ಪನ ಸನ್ನಿಧಿಯಲ್ಲಿ ಬಂಗಾರದ ಮನುಷ್ಯರು.. ವರ್ಷದ ಮೊದಲ ದಿನ ಭಕ್ತರಿಗೆ ಸರ್ಪ್ರೈಸ್..! Photos

publive-image

ಮಂಗಳವಾರದ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಗೆ ಭವ್ಯಾ ಗೌಡ, ತ್ರಿವಿಕ್ರಮ್​ ಹಾಗೂ ರಜತ್​ ಕಿಶನ್​ ಫ್ಯಾಮಿಲಿಯವರು ಬಂದಿದ್ದರು. ನಿನ್ನೆ ಬಿಗ್​ಬಾಸ್​ ಮನೆಗೆ ಮೋಕ್ಷಿತಾ ಪೈ, ಉಗ್ರಂ ಮಂಜು ಹಾಗೂ ಗೌತಮಿ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದರು. ಇಂದಿನ ಸಂಚಿಕೆಯಲ್ಲಿ ಬಿಗ್​ ಮನೆಗೆ ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ಫ್ಯಾಮಿಲಿಯವರು ಎಂಟ್ರಿ ಕೊಟ್ಟಿದ್ದಾರೆ.

publive-image

ಕಲರ್ಸ್​ ಕನ್ನಡ ರಿಲೀಸ್​ ಮಾಡಿದ್ದ ಪ್ರೋಮೋದಲ್ಲಿ ಬಿಗ್​ಬಾಸ್​ ಮನೆಗೆ ಧನರಾಜ್​ ಅವರ ಇಡೀ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದರು. ಅವರನ್ನೇಲ್ಲಾ ಕಂಡ ಧನರಾಜ್ ಫುಲ್ ಖುಷ್ ಆಗಿದ್ದರು. ಮನೆಗೆ ಎಂಟ್ರಿ ಆಗ್ತಿದ್ದಂತೆಯೇ ಕುಟುಂಬದ ಸದಸ್ಯರೆಲ್ಲರೂ ಹುಲಿ ಕುಣಿತದ ಸ್ಟೆಪ್ಸ್ ಹಾಕಿದ್ದಾರೆ. ಇದೀಗ ರಿಲೀಸ್​ ಆದ ಮತ್ತೊಂದು ಪ್ರೋಮೋದಲ್ಲಿ ಹನುಮಂತ ಹಾಗೂ ಚೈತ್ರಾ ಕುಂದಾಪುರ ಕುಟುಂಬ ಎಂಟ್ರಿ ಕೊಟ್ಟಿದೆ.


ಬಿಗ್​ಬಾಸ್​ ಮನೆಗೆ ಮಗನಿಗಾಗಿ ಬುತ್ತಿ ತೆಗೆದುಕೊಂಡು ಬಂದಿದ್ದಾರೆ ಹನುಮಂತನ ತಂದೆ ತಾಯಿ. ಮನೆಯ ಒಳಗೆ ಬರುತ್ತಿದ್ದಂತೆ ಮಗನನ್ನೂ ನೋಡಿ ಪೋಷಕರು ಭಾವುಕರಾಗಿದ್ದಾರೆ. ಅಪ್ಪಿಕೊಂಡು ಹನುಮಂತನಿಗೆ ಮುತ್ತು ಕೊಟ್ಟಿದ್ದಾರೆ. ಇದಾದ ಬಳಿಕ ತಾವು ತಂದಿದ್ದ ಊಟದ ಬುತ್ತಿಯನ್ನು ತೆಗೆದು ಎಲ್ಲರ ಜೊತೆಗೆ ಕುಳಿತುಕೊಂಡು ಉತ್ತರ ಕರ್ನಾಟಕದ ಫೇಮಸ್​ ರೊಟ್ಟಿ, ಮೂರು ತರಹದ ಪಲ್ಯವನ್ನು ತಿಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment