/newsfirstlive-kannada/media/post_attachments/wp-content/uploads/2025/01/HANUMANTH_DHANU.jpg)
ಬಿಗ್ಬಾಸ್ ಸೀಸನ್ 11ರಲ್ಲಿ ಫುಲ್ ಫೇಮಸ್ ಆಗಿರೋದು ಎಂದರೆ ಹನುಮಂತು ಹಾಗೂ ಧನರಾಜ್ ನಡುವಿನ ಸ್ನೇಹ. ಈ ಗೆಳೆತನ ಸದ್ಯ ನಾಡಿದ್ಯಾಂತ ಮೆರಗು ಪಡೆದಿದೆ. ದೋಸ್ತಾ.. ದೋಸ್ತಾ.. ಎನ್ನುತ್ತಾ ಹನುಮಂತ ಬಿಗ್ಬಾಸ್ ಟ್ರೋಫಿಯನ್ನೇ ಗೆದ್ದು ಬಿಟ್ಟರು. ಇದರ ಜೊತೆಗೆ ತಮ್ಮ ಸ್ನೇಹನೂ ಶಾಶ್ವತ ಅಂತನೂ ಹೋದಲ್ಲಿ, ಬಂದಲ್ಲಿ ಧನು-ಹನು ಇಬ್ಬರು ಹೇಳಿಕೊಂಡಿದ್ದಾರೆ. ಇದೀಗ ಹನು-ಧನು ಇಬ್ಬರೂ ಟ್ರೋಫಿ ಹಿಡಿಸು ಸಂಭ್ರಮಿಸಿದ್ದಾರೆ.
ಸ್ನೇಹ ಎಂದರೆ ಹೀಗಿರಬೇಕು ಎಂದು ಧನರಾಜ್- ಹನುಮಂತು ಇಬ್ಬರು ಬಿಗ್ ಬಾಸ್ ಮನೆಯಲ್ಲಿ ತೋರಿಸಿಕೊಟ್ಟಿದ್ದರು. ಇಬ್ಬರು ದೋಸ್ತರು ಸೇರಿ ಬಿಗ್ ಮನೆಯ ಮೇನ್ ಡೋರ್ ಬಳಿಯೇ ಹೆಚ್ಚು ಹೊತ್ತು ಕುಳಿತು ಸಮಯ ಕಳೆಯುತ್ತಿದ್ದರು. ಹನುಮಂತು ಹಾಗೂ ಧನರಾಜ್ ಈ ಬಾರಿಯ ಬಿಗ್ಬಾಸ್ನಲ್ಲಿ ಹೆಚ್ಚಾಗಿ ಕೇಳಿ ಬಂದ ಹೆಸರು. ಮನೆಯಲ್ಲಿ ಏನು ಮಾಡಿದರೂ ಇಬ್ಬರು ಒಟ್ಟಿಗೆ ಮಾಡುತ್ತಿದ್ದರು. ಮನೆಯಲ್ಲಿ ಇಬ್ಬರು ಸೇರಿ ಒಮ್ಮೆ ಒಂದೇ ಬಾತ್ರೂಮ್ನಲ್ಲಿ ಸ್ನಾನ ಮಾಡಿ ಇಬ್ಬೊರಿಗೆ ಒಬ್ಬರೂ ಬೆನ್ನು ಉಜ್ಜಿಕೊಂಡಿದ್ದರು. ಇದನ್ನು ಗೋಲ್ಡ್ ಸುರೇಶ್ ಸೇರಿ ಕೆಲ ಸ್ಪರ್ಧಿಗಳು ನೋಡಿ ನಕ್ಕು ನಕ್ಕು ಸುಸ್ತಾಗಿದ್ದರು.
ಇದನ್ನೂ ಓದಿ: Bigg Boss; ಫ್ರೆಂಡ್ಶಿಪ್ ಕಟ್ ಮಾಡಿಕೋ ಎಂದಿದ್ದ ಗೌತಮಿ ಗಂಡ.. ಮಂಜು ರಿಯಾಕ್ಟ್ ಮಾಡಿದ್ದು ಹೇಗೆ?
ಬಿಗ್ಬಾಸ್ನ ಗ್ರ್ಯಾಂಡ್ ಫಿನಾಲೆಯಲ್ಲಿ ಹನುಮಂತು ವಿಜಯಮಾಲೆ ಧರಿಸಿ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಗರುಡವ್ವ ನಿನ್ನ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಕೇಳಿಕೊಂಡಿದ್ದರು. ಅದರಂತೆ ಹನುಮಂತನಿಗೆ ಟ್ರೋಫಿ ಒಲಿದಿದೆ. ಕಪ್ ಗೆದ್ದ ಖುಷಿಯಲ್ಲಿರುವ ಹನುಮಂತನಿಗೆ ರಾಜ್ಯದ ಮೂಲೆ ಮೂಲೆಯಿಂದಲೂ ಶುಭಶಯಗಳು ಹರಿದು ಬರುತ್ತಿವೆ. ಇದರ ಬೆನ್ನಲ್ಲೇ ತನ್ನ ಜೀವದ ಗೆಳೆಯ ಧನರಾಜ್ ಜೊತೆ ಸೇರಿ ಸೆಲೆಬ್ರೆಷನ್ ಮಾಡಿದ್ದಾರೆ.
ಧನರಾಜ್- ಹನುಮಂತ ಇಬ್ಬರು ಬಿಗ್ಬಾಸ್ ಟ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ. ಸದ್ಯ ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಲ್ಲದೇ ಧನರಾಜ್ ಪೋಸ್ಟ್ಗೆ ಟ್ಯಾಗ್ ಲೈನ್ ಬರೆದಿದ್ದಾರೆ. ದೋಸ್ತಾ ನೀ ಮಸ್ತಾ, ಗೆಲುವು ನಿನ್ನದು, ಖುಷಿ ನನ್ನದು. ಇದು ದೋಸ್ತಿ ಗೆಲುವು, ದೋಸ್ತಾ ಇರು ನೀ ಜೊತೆಗಿರು ಎಂದೆಂದಿಗೂ ಅಂತ ಹನುಮಂತನನ್ನ ಧನರಾಜ್ ಹಾಡಿ ಹೊಗಳಿದ್ದಾರೆ. ಫೋಟೋದಲ್ಲಿ ಹನಮಂತು ಕೈಕಟ್ಟಿಕೊಂಡು ನಿಂತಿದ್ದರೇ, ಧನರಾಜ್ ಟ್ರೋಫಿ ಹಿಡಿದು ಸಂತಸ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ