ಸಾದಾ ಸೀದಾ ಹಳ್ಳಿ ಹೈದನಿಗೆ ಅದೆಂಥ ಕ್ರೇಜು.. ಹೇಗಿದ್ದ, ಹೇಗಾದ ಗೊತ್ತಾ ಹುನುಮ..?

author-image
Ganesh
Updated On
ಸಾದಾ ಸೀದಾ ಹಳ್ಳಿ ಹೈದನಿಗೆ ಅದೆಂಥ ಕ್ರೇಜು.. ಹೇಗಿದ್ದ, ಹೇಗಾದ ಗೊತ್ತಾ ಹುನುಮ..?
Advertisment
  • 50 ದಿನ ಲೇಟಾದ್ರೂ ಲೇಟೆಸ್ಟಾಗಿ ಬಂದಿದ್ದ ಗೇಮ್ ಚೇಂಜರ್
  • ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟು ಕಪ್ ಗೆದ್ದು ಹೋದ ಹನುಮಂತ
  • ಎಂಟ್ರಿ ಕೊಟ್ಟ ಕೂಡಲೇ ಬಿಗ್​ಬಾಸ್​ ಮನೆಗೆ ಕ್ಯಾಪ್ಟನ್ ಆಗಿದ್ದ

ಬಿಗ್​ಬಾಸ್​ ಸೀಸನ್​​ 11ರ ಟೈಟಲ್​ ಗೆಲ್ಲೋದು ಯಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ. ಕುರಿಗಾಯಿ ಹನುಮಂತ ಬಿಗ್​ಬಾಸ್​​ ವಿನ್ನರ್ ಆಗಿದ್ದಾರೆ. ಲೇಟಾಗಿ ಬಂದರೂ ಸಿಂಪಲ್ಲಾಗಿಯೇ ಕನ್ನಡಿಗರ ಹೃದಯ ಗೆದ್ದು, ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಿಗ್​​ಬಾಸ್​ ವಿನ್ನರ್ ಯಾರು ಗೆಲ್ಲಬೇಕು? ಅನ್ನೋ ಪ್ರಶ್ನೆ ಕೇಳಿದ್ರೆ ಹನುಮಂತು ಗೆದ್ರೆ ಸಾಕು ಅಂತಾ ಬಹುಪಾಲು ಮಂದಿ ಹೇಳ್ತಿದ್ದರು. ಹಾಡಿನಿಂದ್ಲೇ ಆಟ ಆಡ್ತಿದ್ದಾನೆ.. ಒಂದೇ ಮಾತಲ್ಲಿ ಪಂಚ್​ ಕೊಡ್ತಿದ್ದಾನೆ.. ನೋಡೋಕೇನೋ ಬಲು ಸಿಂಪಲ್ಲು.. ಮೆಂಟಲಿ ಗುಂಡಿಗೆ ಡಬ್ಬಲು ಅಂತ ಖುದ್ದು ಸುದೀಪ್ ಹೇಳಿದ್ದರು. ಇದೀಗ ಟ್ರೋಫಿ ಗೆಲ್ಲುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ. ಎಲ್ಲೋ ಇದ್ದ ಹುಡುಗ, ಇವತ್ತು ಎಲ್ಲಿಗೋ ಬಂದು ನಿಂತಿದ್ದಾನೆ. ಏನೇನೂ ಬದಲಾದ್ರೂ, ನಮ್ ಹುಡ್ಗ ಮಾತ್ರ ಚೇಂಜ್ ಆಗ್ಲೇ ಇಲ್ಲ. ಅದಕ್ಕೆ ಬಿಗ್​ಬಾಸ್ ಟ್ರೋಫಿಯೇ ಸಾಕ್ಷಿ ಎಂದು ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ.

ಇದನ್ನೂ ಓದಿ: ಕುರಿ ಕಾಯುತ್ತಿದ್ದ ಹುಡುಗ ಈಗ ಬಿಗ್​​ಬಾಸ್​ ವಿನ್ನರ್​​; ಹನುಮಂತು ನಡೆದ ಹಾದಿಯೇ ರೋಚಕ!

publive-image

ಯಾರು ಈ ಹನುಮಂತ..?

ಹಾವೇರಿ ಜಿಲ್ಲೆ ಚಿಲ್ಲೂರು ಬಡ್ನಿ ಅನ್ನೋ ಕುಗ್ರಾಮದಲ್ಲಿ ಕುರಿ ಮೇಯಿಸುತ್ತಿದ್ದ ಹುಡುಗ ಎಲ್ಲಿಂದ ಎಲ್ಲಿಗೋ ಬಂದು ನಿಂತಿದ್ದಾನೆ. ಒಮ್ಮೆ ಆತನ ಫ್ಲ್ಯಾಷ್​​ ಬ್ಯಾಕ್ ನೋಡಿದ್ರೂ ನಂಬೋಕೆ ಆಗೋದಿಲ್ಲ. ಅಷ್ಟರಮಟ್ಟಿಗಿನ ಬದಲಾವಣೆ ಬದುಕಿನಲ್ಲಿ ಆಗಿದೆ.

ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟು ಕಪ್ ಗೆದ್ದ ಹನುಮಂತ

ಬಿಗ್​ಬಾಸ್​​ ಸೀಸನ್ 11 ಸಖತ್​ ಸೌಂಡ್​​ ಮಾಡ್ತಿದೆ ಅಂದ್ರೆ ಅದರಲ್ಲಿ ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರ, ಭಾವೈಕ್ಯತೆಯ ಭೂಮಿಯ ಗುಣವಂತ ಹನುಮಂತ ಕೂಡ ಕಾರಣ ಅಂದ್ರೆ ತಪ್ಪಾಗೋದಿಲ್ಲ. ಸೀಸನ್ ಶುರುವಾಗಿ 50 ದಿನಗಳೇ ಉರುಳಿದ್ಮೇಲೆ 18ನೇ ಸ್ಪರ್ಧಿಯಾಗಿ ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟು ಹನುಮಂತ ಶಾಕ್ ನೀಡಿದ್ದರು.

ಇದನ್ನೂ ಓದಿ: BBK11 Grand Finale: ಬಿಗ್​ಬಾಸ್​ ವಿನ್ನರ್​ ಹನುಮಂತುಗೆ ಸಿಕ್ತು ಲಕ್ಷ ಲಕ್ಷ

publive-image

ಬರ್ತಿದ್ದಂತೆಯೇ ಕ್ಯಾಪ್ಟನ್..!

ಕುರಿ ಕಾಯ್ತಿದ್ದ ಹುಡುಗ ಬರೀ ಹಾಡಿಂದ್ಲೇ ಕನ್ನಡಿಗರ ಹೃದಯ ಗೆದ್ದ. ಸೋಷಿಯಲ್ ಮೀಡಿಯಾದಲ್ಲಿ ಹನುಮಂತನದ್ದು ಮಾಮೂಲಿ ಕ್ರೇಜ್ ಅಲ್ಲವೇ ಅಲ್ಲ. ಯಾರಿಗಾದ್ರೂ ಕೆಟ್ಟದಾಗಿ ಕಮೆಂಟ್​​ ಮಾಡ್ತಾರೆ. ಹನುಮಂತನ ವಿಚಾರಕ್ಕೆ ಬಂದ್ರೆ ಎಲ್ಲರೂ ನೆಂಟರೇ. ಹನುಮಂತನ ಅದೃಷ್ಟವೋ? ಜನರ ಹರಕೆ, ಆಶೀರ್ವಾದವೋ? ಬಿಗ್​ಬಾಸ್​​ ಮನೆಗೆ ವೈಲ್ಡ್​​ ಕಾರ್ಡ್​ ಎಂಟ್ರಿ ಕೊಟ್ಟ ಕೂಡಲೇ ಬಿಗ್​ಬಾಸ್​ ಮನೆಯ ಕ್ಯಾಪ್ಟನ್ ಕೂಡ ಆಗಿದ್ದರು. ಹನುಮಂತಗೆ ಆರಂಭದಲ್ಲೇ ಕ್ಯಾಪ್ಟನ್ ಪಟ್ಟ ಸಿಕ್ಕಿತ್ತು.

ಹನುಮನಿಗೇಕೆ ಇಂಥಾ ಕ್ರೇಜ್?

ಜೀ ಕನ್ನಡ ವಾಹಿನಿಯ ‘ಸರಿಗಮಪ’ ಸೀಸನ್ 15ರಲ್ಲಿ ಗಾಯಕರಾಗಿ ಎಂಟ್ರಿ ಕೊಟ್ಟಿದ್ದ ಹನುಮಂತ, ತಮ್ಮ ಗಾಯನ ಮತ್ತು ಮುಗ್ಧತೆಯಿಂದಲೇ ಫೇಮಸ್ ಆಗಿದ್ದರು. ಗ್ರಾಮೀಣ ಪ್ರದೇಶ ಜನಪದ ಹಾಡುಗಳನ್ನು ಹಾಡುತ್ತ ಎಲ್ಲರ ಪ್ರೀತಿಯನ್ನು ಗಳಿಸಿದ್ದರು. ಹನುಮಂತಗೆ ಸಾಕಷ್ಟು ಜನಪ್ರಿಯತೆ ಸಿಕ್ಕ ಹಿನ್ನೆಲೆಯಲ್ಲಿ ನಂತರ ಜೀ ಕನ್ನಡದ ಹಲವು ಶೋಗಳಲ್ಲಿ ಅವರು ಕಾಣಿಸಿಕೊಂಡರು.

publive-image

‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಅಲ್ಲಿಯೂ ಹನುಮಂತ ಉತ್ತಮವಾಗಿ ನೃತ್ಯ ಪ್ರದರ್ಶನ ನೀಡಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 7’ರಲ್ಲಿಯೇ ಹನುಮಂತಗೆ ಆಫರ್ ಬಂದಿತ್ತು. ಆದರೆ ಅವರು ರಿಜೆಕ್ಟ್ ಮಾಡಿದ್ರು ಅನ್ನೋ ಗಾಸಿಪ್ ಇತ್ತು. ಇದೀಗ ಅಧಿಕೃತವಾಗಿ ‘ಬಿಗ್ ಬಾಸ್’ ಮನೆಯೊಳಗೆ ಎಂಟ್ರಿ ಕೊಟ್ಟು ಗೆದ್ದು ಬಂದಿದ್ದಾರೆ.

ಇದನ್ನೂ ಓದಿ: ಭಾವಿಪತ್ನಿ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ಸಂಸದ ತೇಜಸ್ವಿ ಸೂರ್ಯ.. ಗುರೂಜಿ ಆಶೀರ್ವಾದ ಪಡೆದ ಜೋಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment