/newsfirstlive-kannada/media/post_attachments/wp-content/uploads/2025/05/Prithvi-Bhat6.jpg)
ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಎರಡೆರಡು ಸಂಭ್ರಮ. ತಾನು ಪ್ರೀತಿಸಿದ ಹುಡುಗನ ಜೊತೆಗೆ ಮದುವೆಯಾಗಿ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಇನ್ನೊಂದು ಇಂದು ಗಾಯಕಿ ಪೃಥ್ವಿ ಭಟ್ಗೆ ಹುಟ್ಟು ಹಬ್ಬದ ಸಂಭ್ರಮ.
ಇದನ್ನೂ ಓದಿ:ಸರಿಗಮಪ ಸಿಂಗರ್ ಪೃಥ್ವಿ ಭಟ್ ಅದ್ಧೂರಿ ರಿಸೆಪ್ಷನ್; ಯಾರೆಲ್ಲಾ ಬಂದಿದ್ರು?
ಕೆಲವು ದಿನಗಳ ಹಿಂದೆ ಗಾಯಕಿ ಪೃಥ್ವಿ ಭಟ್ ಅವರು ಪೋಷಕರ ವಿರೋಧದ ನಡುವೆಯೂ ದೇವಾಲಯವೊಂದರಲ್ಲಿ ಮಾರ್ಚ್ 27ರಂದು ಮದುವೆಯಾಗಿದ್ದರು. ಗಾಯಕಿ ಮದುವೆಯಾಗಿರೋ ಹುಡುಗನ ಹೆಸರು ಅಭಿಷೇಕ್. ಇವರು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪೃಥ್ವಿ ಭಟ್ ಮದುವೆ ಬಗ್ಗೆ ತಂದೆ ಶಿವಪ್ರಸಾದ್ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಇದರ ಮಧ್ಯೆ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರು ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದಾರೆ. ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ರಿಸೆಪ್ಶನ್ಗೆ ನಿರೂಪಕಿ ಅನುಶ್ರೀ, ನಟಿ ಮೋಕ್ಷಿತಾ, ಪೈ, ಬಿಗ್ಬಾಸ್ ಸೀಸನ್ 11ರ ವಿನ್ನರ್, ಗಾಯಕ ಹನುಮಂತ ಲಮಾಣಿ ಬಂದಿದ್ದಾರೆ.
ಅಲ್ಲದೇ ನಂದಿತಾ, ಖ್ಯಾತ ಗಾಯಕ ಹೇಮಂತ್ ಕುಮಾರ್, ಸಿಂಗರ್ ಮೆಹಬೂಬ್ ಸಾಬ್, ಸ್ಟಾರ್ ಗಾಯಕ ವಿಜಯ್ ಪ್ರಕಾಶ್ ದಂಪತಿ, ನಟ ಒಳ್ಳೆ ಹುಡುಗ ಪ್ರಥಮ್, ಸಿಂಗರ್ ಸುನೀಲ್, ಹಂಸಲೇಖ ಅವರ ಪತ್ನಿ ಲತಾ ಹಾಗೂ ಸರಿಗಮಪ ಸ್ಪರ್ಧಿಗಳು ಕೂಡ ಆಗಮಿಸಿದ್ದಾರೆ.
View this post on Instagram
ಇನ್ನೂ ಪೃಥ್ವಿ ಭಟ್ ಮದುವೆಗೆ ಬಂದ ಹನುಮಂತು ಲಮಾಣಿ ಹಾಡನ್ನು ಹಾಡಿ ನವ ಜೋಡಿಗೆ ಖುಷಿ ಪಡಿಸಿದ್ದಾರೆ. ವೇದಿಕೆ ಮೇಲೆ ನಿನ್ನ ಮಾರಿ ನೋಡಂಗ್ ಆಗೈತಿ ಎಂಬ ಫೇಮಸ್ ಸಾಂಗ್ ಅನ್ನು ಹಾಡಿದ್ದಾರೆ. ಹನುಮಂತು ಜೊತೆಗೆ ಪೃಥ್ವಿ ಭಟ್ ಕೂಡ ಹಾಡು ಹಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ