BBK11: ಬಿಗ್​ಬಾಸ್​ ಫಿನಾಲೆಗೆ ಮೊದಲ ಎಂಟ್ರಿ.. ಹನುಮಂತ ದಿಢೀರ್ ಫೈರ್ ಆಗಿದ್ದು ಹೇಗೆ?

author-image
Veena Gangani
Updated On
BBK11: ಬಿಗ್​ಬಾಸ್​ ಫಿನಾಲೆಗೆ ಮೊದಲ ಎಂಟ್ರಿ.. ಹನುಮಂತ ದಿಢೀರ್ ಫೈರ್ ಆಗಿದ್ದು ಹೇಗೆ?
Advertisment
  • ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಆಡಲು ಹನುಮಂತ್​​ಗೆ ಶಕ್ತಿ ಬಂದಿದ್ದು ಹೇಗೆ?
  • ಈ ವಾರ ಬಿಗ್​ಬಾಸ್​ ಮನೆಯ ಕೊನೆಯ ಕ್ಯಾಪ್ಟನ್​ ಆದ ಹನುಮಂತ
  • ಟಿಕೆಟ್​ ಟು ಫಿನಾಲೆ ಪಾಸ್​ ತಮ್ಮದಾಗಿಸಿಕೊಂಡಿದ್ದಾರೆ ಈ ಸ್ಪರ್ಧಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಸ್ಪರ್ಧಿ ಹನುಮಂತ ಅವರು ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿ ಕೊಡುತ್ತಿರೋ ಮೊದಲ ಸ್ಪರ್ಧಿಯಾಗಿದ್ದಾರೆ. ಇನ್ನೇನು ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆಗೆ ಮೂರು ವಾರಗಳು ಬಾಕಿ ಇರುವ ಹೊತ್ತಲ್ಲೇ ಟಿಕೆಟ್​ ಟು ಫಿನಾಲೆ ಪಾಸ್​ ಅನ್ನು ತಮ್ಮದಾಗಿಸಿಕೊಂಡಿದ್ದಾರೆ ಹಳ್ಳಿ ಹೈದ ಹನುಮಂತ.

ಇಷ್ಟು ದಿನ ಬಿಗ್​ಬಾಸ್​ ಮನೆಯಲ್ಲಿ ಹಾಡು ಹಾಡುತ್ತಲ್ಲೇ ಸ್ಪರ್ಧಿಗಳಿಗೆ ಟಾಂಗ್​ ಕೊಡುತ್ತಿದ್ದ ಹನುಮಂತ ಈಗ ಮಸ್ತ್​ ಆಗಿ ಆಟ ಆಡುವ ಮೂಲಕ ಮತ್ತೆ ದಾಖಲೆ ನಿರ್ಮಿಸಿದ್ದಾರೆ. ವೈಲ್ಡ್ ಕಾರ್ಡ್​ ಸ್ಪರ್ಧಿಯಾಗಿ ಬಿಗ್​ಬಾಸ್​ ಮನೆಗೆ ಬಂದ ಹನುಮಂತ ಉತ್ತಮವಾಗಿ ಆಟ ಆಡುತ್ತಿದ್ದರು. ಹನುಮಂತನ ತುಂಟಾಟ, ಟಾಸ್ಕ್​ ಆಡುವ ಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಇದನ್ನೂ ಓದಿ:BBK11; ಶರಣ್, ಅದಿತಿ ಫಿನಾಲೆ ಟಿಕೆಟ್ ಕೊಟ್ಟಿರುವುದು ಯಾರಿಗೆ..? ಫುಲ್ ಸಸ್ಪೆನ್ಸ್​

publive-image

ಬಳಿಕ ಬಿಗ್​ಬಾಸ್​ಗೆ ಬರುತ್ತಿದ್ದಂತೆ ಕ್ಯಾಪ್ಟನ್​ ಪಟ್ಟ ಗಿಟ್ಟಿಸಿಕೊಂಡಿದ್ದರು. ಇದೀಗ ಮತ್ತೆ ಫಿನಾಲೆ ವಾರದ ಕೊನೆಯಲ್ಲಿ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ. ವಿಶೇಷ ಹಾಗೂ ಅಚ್ಚರಿ ಎಂದರೆ ಈ ಸೀಸನ್​ನ ಅಲ್ಟಿಮೇಟ್ ಕ್ಯಾಪ್ಟನ್ ಹಾಗೂ ಕೊನೆಯ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ ಹನುಮಂತ. ಹನುಮಂತ ದಿಢೀರ್ ಫೈರ್ ಆಗಿದ್ದು ಕಾರಣ ಅವರ ಪೋಷಕರು. ಕಳೆದ ವಾರ ಬಿಗ್​ಬಾಸ್​ ಮನೆಗೆ ಬಿಗ್​ಬಾಸ್​ ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದರು. ಕೊನೆಯದಾಗಿ ಹನುಮಂತ ಅವರ ಪೋಷಕರು ಬಂದು ಮಗನಿಗೆ ಧೈರ್ಯ ತುಂಬಿದ್ದರು. ಗೆದ್ದು ಬಾ ಮಗನೇ ಅಂತ ಕೂಡ ಹಾರೈಸಿದ್ದರು. ಅಲ್ಲದೆ ವಾರದ ಕೊನೆಯಲ್ಲೂ ಕಿಚ್ಚ ಸುದೀಪ್​ ಅವರು ಕೂಡ ಎಲ್ಲರಿಗೂ ಅಲರ್ಟ್​ ಮಾಡಿದ್ದರು.

publive-image

ಬಿಗ್​ಬಾಸ್​ ಟಿಕೆಟ್​ ಟು ಫಿನಾಲೆ ಟಾಸ್ಕ್​ಗೆ ಭವ್ಯಾ ಗೌಡ, ರಜತ್​, ತ್ರಿವಿಕ್ರಮ್​ ಹಾಗೂ ಹನುಮಂತ ಸೆಲೆಕ್ಟ್​ ಆಗಿದ್ದರು. ಹೀಗಾಗಿ ಈ ನಾಲ್ಕು ಸ್ಪರ್ಧಿಗಳಿಗೆ  ಬಿಗ್​ಬಾಸ್ ಟ್ರಂಕ್​ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿದೆ. ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್​ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕಿತ್ತು. ಹನುಮಂತ 2 ನಿಮಿಷ 27 ಸೆಕೆಂಡ್​ನಲ್ಲಿ ಇದೇ ಟಾಸ್ಕ್​ನಲ್ಲಿ ಗೆದ್ದು ಟಿಕೆಟ್​ ಟು ಫಿನಾಲೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ. ಜೊತೆಗೆ ಈ ವಾರದ ಕೊನೆಯ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ.

ಜಸ್ಟ್​ 2 ಸೆಕೆಂಡ್​ನಲ್ಲಿ ಪಾಸ್ ಮಿಸ್​ ಮಾಡಿಕೊಂಡ ತ್ರಿವಿಕ್ರಮ್

ಕೊನೆಯ ಕ್ಷಣದಲ್ಲಿ ಅಂದ್ರೆ ಕೇವಲ 2 ಸೆಕೆಂಡ್​ಗಳಲ್ಲೇ ಟು ಫಿನಾಲೆ ಪಾಸ್​ ಮಿಸ್ ಮಾಡಿಕೊಂಡಿದ್ದಾರೆ ತ್ರಿವಿಕ್ರಮ್​. ಹೌದು, ಮೊದಲು ಈ ಟಾಸ್ಕ್​ ಆಡಲು ಭವ್ಯಾ ಗೌಡ ಹೋಗಿದ್ದರು. ಈ ಟಾಸ್ಕ್​ ಆಡಲು ಭವ್ಯಾ ಗೌಡ ತೆಗೆದುಕೊಂಡ ಸಮಯ 3 ನಿಮಿಷ 22 ಸೆಕೆಂಡುಗಳು. ಇದಾದ ಬಳಿಕ ರಜತ್​ ಟಾಸ್ಕ್​ ಆಡಲು ಹೋಗಿದ್ದರು. ಆಗ ರಜತ್ ತೆಗೆದುಕೊಂಡ ಸಮಯ 3 ನಿಮಿಷ 49 ಸೆಕೆಂಡುಗಳು. ಇನ್ನೂ ಇದಾದ ಬಳಿಕ ತ್ರಿವಿಕ್ರಮ್ ಟಾಸ್ಕ್​ ಆಡಲು ಹೋಗಿ ತೆಗೆದುಕೊಂಡ ಸಮಯ 2 ನಿಮಿಷ 29 ಸೆಕೆಂಡುಗಳು. ಇನ್ನೂ 2 ಸೆಕೆಂಡ್​ಗಳಲ್ಲಿ ಗ್ರ್ಯಾಂಡ್ ಫಿನಾಲೆಗೆ ಹೋಗುವ ಅವಕಾಶವನ್ನು ಮಿಸ್​ ಮಾಡಿಕೊಂಡು ಬೇಸರ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment