newsfirstkannada.com

ಗಂಡನ ಕಿರುಕುಳ.. 2 ಹೆಣ್ಣು ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

Share :

Published January 18, 2024 at 6:57am

    26 ವರ್ಷದ ತಾಯಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ

    ಗಂಡನಿಂದಾಗಿ ಬಾವಿಗೆ ಹಾರಿ ಮೂವರು ಸೂಸೈಡ್​

    8 ತಿಂಗಳ ಹಿಂದೆ ತವರು ಮನೆ ಸೇರಿದ್ದ ತಾಯಿ, ಮಕ್ಕಳು

ಚಿಕ್ಕೋಡಿ: ಗಂಡನ ಕಿರುಕುಳದಿಂದ ಮನನೊಂದು 2 ಹೆಣ್ಣು ಮಕ್ಕಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. 26 ವರ್ಷದ ತಾಯಿ ಸರಸ್ವತಿ ಕಿರವೆ, 7 ವರ್ಷದ ದೀಪಿಕಾ, 4 ವರ್ಷದ ರೀತಿಕಾ ಮೃತ ದುರ್ದೈವಿಗಳು.

ಎರಡು ಹೆಣ್ಣು ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿದ ಮನಕುಲಕುವ ಘಟನೆ ನಡೆದಿದೆ. ಮಹಾರಾಷ್ಟ್ರ ಸಾಂಗ್ಲಿಯ ಕಿರಣ ಎಂಬುವವರ ಜೊತೆ ಸರಸ್ವತಿ ಅವರನ್ನು 2016ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಆದರೆ, ಗಂಡನ ಕಿರುಕುಳಕ್ಕೆ ಬೇಸತ್ತು ಸರಸ್ವತಿ 8 ತಿಂಗಳ ಹಿಂದೆ ತವರು ಮನೆ ಸುಲ್ತಾನಪುರಕ್ಕೆ ಬಂದಿದ್ದಳು. ಆಗಾಗ್ಗೆ ಫೋನ್‌ ಮಾಡಿ ಬಾಯಿಗೆ ಬಂದಂತೆ ಬೈದು ಕಿರುಕುಳ ನೀಡುತ್ತಿದ್ದನು. ಇದರಿಂದ ಮನನೊಂದು ಆಕೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ತವರು ಮನೆಯವರು ಆರೋಪಿಸಿದ್ದಾರೆ.

ಸ್ಥಳಕ್ಕೆ ಹಾರೂಗೇರಿ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡನ ಕಿರುಕುಳ.. 2 ಹೆಣ್ಣು ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

https://newsfirstlive.com/wp-content/uploads/2024/01/Chikkodi.jpg

Load More