/newsfirstlive-kannada/media/post_attachments/wp-content/uploads/2025/07/ASHWIN.jpg)
ಆಫ್ ಸ್ಪಿನ್ನರ್ ಆರ್.ಅಶ್ವಿನ್ (R.Ashwin) ಅಂದ್ರೆ ಹರ್ಭಜನ್ ಸಿಂಗ್ಗೆ (Harbhajn Singh) ಹೊಟ್ಟೆ ಕಿಚ್ಚಿದೆಯಾ? ಅಶ್ವಿನ್ ಆಗಮನವೇ ಹರ್ಭಜನ್ ಕರಿಯರ್ಗೆ ಮುಳ್ಳಾಯ್ತಾ? ಈ ಡಿಬೆಟ್ ತುಂಬಾ ವರ್ಷದಿಂದ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಶ್ವಿನ್, ಹರ್ಭಜನ್ ಸಿಂಗ್ ತುಟಿ ಬಿಚ್ಚಿದ್ದಾರೆ.
2010-2011ರ ತನಕ ಟೀಮ್ ಇಂಡಿಯಾದ ಮೇನ್ ಪ್ಲೇಯರ್ ಆಗಿದ್ದ ಹರ್ಭಜನ್, ಆರ್.ಅಶ್ವಿನ್ ಎಂಟ್ರಿಯಿಂದ ನಿಧಾನಕ್ಕೆ ತೆರೆಮರೆಗೆ ಸರಿಯಬೇಕಾಯ್ತು. ಧೋನಿಯ ಕೃಪಾಕಟಾಕ್ಷದ ಕಾರಣಕ್ಕೆ ಆರ್.ಅಶ್ವಿನ್ಗೆ ಪ್ರಾಶಸ್ತ್ಯ ಸಿಕ್ತು. ಹರ್ಭಜನ್ ಸಿಂಗ್ ಸೈಡ್ ಲೈನ್ ಆಗಿಬಿಟ್ರು, ಸ್ಥಾನ ಕಳೆದುಕೊಂಡರೆಂಬ ಮಾತುಗಳು ಇವೆ. ಅಶ್ವಿನ್ ಅಂದ್ರೆ ಭಜ್ಜಿಗೆ ಜಲಸ್ ಅನ್ನೋ ಮಾತಿದೆ. ಇದೀಗ ಆರ್.ಅಶ್ವಿನ್ ನಡೆಸಿಕೊಡುವ ಕುಟ್ಟಿ ಸ್ಟೋರಿಸ್ನಲ್ಲಿ ಸತ್ಯ ರಿವೀಲ್ ಆಗಿದೆ.
ಇದನ್ನೂ ಓದಿ: ಅಚ್ಚರಿ ಮೂಡಿಸಿದ ಧನಕರ್ ದಿಢೀರ್ ರಾಜೀನಾಮೆ.. ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಏನಿದೆ..?
ಇದು ಸಂಪೂರ್ಣ ಅಸೂಯೆ ವಿಷಯ. ನೀವು ಅದಕ್ಕೆ ಉತ್ತರಿಸುವ ಮೊದಲು, ನಾನು ಒಂದು ವಿಷಯ ಸ್ಪಷ್ಟಪಡಿಸ್ತೇನೆ. ಜನ ಎಲ್ಲವನ್ನೂ ತಮ್ಮ ದೃಷ್ಟಿಕೋನದಿಂದ ನೋಡುತ್ತಾರೆ. ಉದಾಹರಣೆಗೆ ನನ್ನ ಬಗ್ಗೆ ಒಂದು ಕಾಮೆಂಟ್ ಮಾಡ್ತಿದ್ದರೆ ಇತರರು ತಮ್ಮ ಕಣ್ಣುಗಳ ಮೂಲಕ ಜಗತ್ತನ್ನು ನೋಡ್ತಾರೆ. ಇಂದು ನಿಮ್ಮನ್ನು ಸಂದರ್ಶಿಸುತ್ತಿರುವ ಈ ವ್ಯಕ್ತಿಯ ಬಗ್ಗೆ ನೀವು ಅಸೂಯೆ ಪಟ್ಟಿದ್ದೀರಿ ಎಂಬ ಈ ಕಾಮೆಂಟ್. ಅದು ಯಾವುದರ ಬಗ್ಗೆ ಆಗಿರಬಹುದು? -ಹರ್ಭಜನ್ ಸಿಂಗ್, ಟೀಂ ಇಂಡಿಯಾ ಮಾಜಿ ಆಟಗಾರ
ಅಶ್ವಿನ್ರ ಈ ಪ್ರಶ್ನೆಗೆ ಹರ್ಭಜನ್ ಸಿಂಗ್ ಮರು ಪ್ರಶ್ನೆ ಹಾಕಿದ್ರು. ನೀವು, ನಾನು ಜಲಸ್ ಆಗಿದ್ದೀನಿ ಎಂದು ಭಾವಿಸ್ತೀರಾ ಎಂದು ಕೇಳಿದ್ರು. ಇದಕ್ಕೆ ಅಶ್ವಿನ್ ಉತ್ತರ ಹೀಗಿತ್ತು.
ನೀವು.. ನಾನು ಜಲಸ್ ಆಗಿದ್ದೀನಿ ಎಂದು ಭಾವಿಸ್ತೀರಾ? ನೀವು ನನ್ನೊಂದಿಗೆ ಕುಳಿತಿದ್ದೀರಿ. ಬಹಳ ಸಮಯದಿಂದ ಮಾತನಾಡಿದ್ದೇವೆ. ನಾನು ಆ ರೀತಿಯ ವ್ಯಕ್ತಿ ಎಂದು ಭಾವಿಸ್ತೀರಾ? ನೀವು ಒಂದು ಹಂತದಲ್ಲಿ ಅಸೂಯೆ ಪಟ್ಟಿದ್ದರೂ ಸಹ, ಅದು ಸಮರ್ಥನೀಯ. ಅದು ತಪ್ಪು ಅಲ್ಲ. ಏಕೆಂದರೆ ನಾವೆಲ್ಲರೂ ಮನುಷ್ಯರು. ಸ್ವಾಭಾವಿಕವಾಗಿ ಅದು ಇರಬೇಕು. ಕೆಲವರು ನಾನು ವಾಷಿಂಗ್ಟನ್ ಸುಂದರ್ ಕಾರಣ ನಿವೃತ್ತಿ ಹೊಂದಿದ್ದೇನೆ ಎಂದು ನಂಬ್ತಾರೆ. ಇದೆಲ್ಲವೂ ಜನರ ದೃಷ್ಟಿಕೋನ. ಅದು ಇತರರ ದೃಷ್ಟಿಕೋನ-ಆರ್ ಅಶ್ವಿನ್, ಟೀಂ ಇಂಡಿಯಾದ ಮಾಜಿ ಆಟಗಾರ
ನೀವು ಹೊಟ್ಟೆ ಕಿಚ್ಚು ಪಟ್ಟಿದ್ರೂ ಅದು ಸರಿಯೇ ಎಂದ ಅಶ್ವಿನ್, ಸುಂದರ್ ಕಾರಣಕ್ಕಾಗಿಯೇ ನಿವೃತ್ತಿಯ ನಿರ್ಧಾರ ಕೈಗೊಂಡಿಲ್ಲ ಎಂಬ ವಿಚಾರವನ್ನ ಸ್ಪಷ್ಟಪಡಿಸಿದರು. ಈ ನಂತರ ಮಾತನಾಡಿದ ಹರ್ಭಜನ್ ಸಿಂಗ್, ಮೆಚ್ಯುರಿಟಿಯ ಮಾತುಗಳನ್ನಾಡಿದರು. ಕ್ರಿಕೆಟ್ ಎಂಬ ಜಂಟಲ್ಮನ್ ಗೇಮ್ನಲ್ಲಿ ಇದು ಸಹಜ ಪ್ರಕ್ರಿಯೆ ಎಂಬ ಅನ್ಸರ್ ನೀಡಿದರು.
ಇದನ್ನೂ ಓದಿ: ಶಾಲೆ ಮೇಲೆ ಬಿದ್ದ ಯುದ್ಧ ವಿಮಾನ.. ಮಕ್ಕಳು ಶಿಕ್ಷಕರು ಸೇರಿ 20 ಮಂದಿಯ ದಾರುಣ ಅಂತ್ಯ..
ನಾನು ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ನೀವು ತಂಡಕ್ಕೆ ಬಂದಾಗ ಇಬ್ಬರು ಆಡುತ್ತಿದ್ದೆವು. ಆಗ ನೀವು ದೀರ್ಘ ಕಾಲದ ತನಕ ಆಡ್ತೀರಾ ಎಂಬ ನಂಬಿಕೆ ನನಗಿತ್ತು. ಇಲ್ಲಿ ಕಾಂಪಿಟೇಷನ್ ಇದೆ ಎಂದು ತಿಳಿದಿತ್ತು. ಆ ಟೈಮ್ನಲ್ಲಿ 400 ವಿಕೆಟ್ ಪಡೆದಿರುವ ಹಿರಿಯ ಆಟಗಾರನ ದೃಷ್ಟಿಯಲ್ಲಿ ನಾನು ಯೋಚಿಸಿದ್ದೇನೆ. ನಾವು ಇಂದು ಕುಳಿತಿದ್ದೇವೆ. ಇದೆಲ್ಲವೂ ಒಂದು ಕಾರಣಕ್ಕಾಗಿಯೇ ನಡೆಯುತ್ತೆ. ನಾನು ಕೂಡ ಮತ್ತೊಬ್ಬರ ರಿಪ್ಲೇಸ್ಮೆಂಟ್ ಆಗಿಯೇ ಬಂದಿದ್ದೇನೆ. ಇದು ಶಾಶ್ವತ ಸ್ಥಾನ ಅಲ್ಲ. ಶಾಶ್ವತವಾಗಿರಲು ಸಾಧ್ಯವೂ ಇಲ್ಲ. ಯಾರಾದರೂ ಬಂದು ನಿಮಗಿಂತ ಉತ್ತಮವಾಗಿ ಆಡಿದ್ರೆ. ಮೇಲಕ್ಕೇರುತ್ತಾರೆ. ನಂತರ ಮತ್ತೊಬ್ಬರು ಬರುತ್ತಾರೆ-ಹರ್ಭಜನ್ ಸಿಂಗ್
ಕ್ರಿಕೆಟ್ ಎಂಬ ಜಂಟಲ್ಮನ್ ಗೇಮ್ನಲ್ಲಿ ಇಂದು ಮೇಲೇರಿದ ಆಟಗಾರ. ನಾಳೆ ಕೆಳಗಿಳಿಯಬೇಕು. ಟ್ಯಾಲೆಂಟೆಟ್ ಆಟಗಾರರು ಆಗಮನದ ನಂತರ ಲೆಜೆಂಡರಿ ಕ್ರಿಕೆಟರ್ಗಳೆ ಆಗಲಿ, ಈತನಿಲ್ಲದ ಟೀಮ್ ಇಂಡಿಯಾ ಇಲ್ಲ ಎಂಬ ಆಟಗಾರನೇ ಆಗಲಿ, ಜಾಗ ಖಾಲಿ ಮಾಡಬೇಕು. ಇದು ಸಹಜ ಧರ್ಮ. ಇದೇ ಹರ್ಭಜನ್ ಕರಿಯರ್ನಲ್ಲೂ ಆಗಿದ್ದು, ಅಶ್ವಿನ್ ಕರಿಯರ್ನಲ್ಲೂ ಆಗಿದ್ದು, ಮುಂದೆ ಪ್ರತಿಯೊಬ್ಬರ ಕರಿಯರ್ನಲ್ಲೂ ಆಗುವ ಪ್ರಕ್ರಿಯೆ.
ಇದನ್ನೂ ಓದಿ: ಸರ್ಫರಾಜ್ ಖಾನ್ಗೆ ಚಾಲೆಂಜ್; ಅಪ್ಪ-ಮಗ ಮಧ್ಯೆ ಫೈಟ್..! ಯಾವ ವಿಚಾರಕ್ಕೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ