Advertisment

ಮಹೇಂದ್ರ ಸಿಂಗ್​ ಧೋನಿ ನನ್ನ ಸ್ನೇಹಿತನಲ್ಲ; ಬಹಿರಂಗವಾಗಿ ಹೇಳಿಕೆ ನೀಡಿದ್ದೇಕೆ ಸ್ಪಿನ್ ಮಾಂತ್ರಿಕ ?

author-image
Gopal Kulkarni
Updated On
ಮಹೇಂದ್ರ ಸಿಂಗ್​ ಧೋನಿ ನನ್ನ ಸ್ನೇಹಿತನಲ್ಲ; ಬಹಿರಂಗವಾಗಿ ಹೇಳಿಕೆ ನೀಡಿದ್ದೇಕೆ ಸ್ಪಿನ್ ಮಾಂತ್ರಿಕ ?
Advertisment
  • ಕೂಲ್ ಕ್ಯಾಪ್ಟನ್ ಧೋನಿ ವಿರುದ್ಧ ಹರ್ಭಜನ್ ಸ್ಪೋಟಕ ಹೇಳಿಕೆ..!
  • ಧೋನಿ ನನ್ನ ಸ್ನೇಹಿತ ಅಲ್ಲ ಅಂತ ಬಹಿರಂಗವಾಗಿ ಹೇಳಿದ್ದೇಕೆ ಭಜ್ಜಿ
  • 10 ವರ್ಷಗಳಿಂದ ಧೋನಿ ಹಾಗೂ ಹರ್ಭಜನ್​ ಸಿಂಗ್ ಮಾತಾಡಿಲ್ವಾ?

ಮಹೇಂದ್ರ ಸಿಂಗ್ ಧೋನಿಯನ್ನ ಇಷ್ಟಪಡದವರು ಯಾರಿದ್ದಾರೆ ಹೇಳಿ? ಹಿರಿಯ-ಕಿರಿಯ ಕ್ರಿಕೆಟಿಗರೆಲ್ಲರೂ, ಧೋನಿ ಜೊತೆ ಮಾತನಾಡೋಕೆ ತುದಿಗಾಲಲ್ಲಿ ನಿಲ್ತಾರೆ. ಆದ್ರೆ ಧೋನಿ ಜೊತೆ ಆಡಿದ ಆ ಇಬ್ಬರು ಕ್ರಿಕೆಟಿಗರಿಗೆ ಮಾತ್ರ, ಧೋನಿ ಅಂದ್ರೆ ಅದೇನೋ ಒಂಥರಾ. ವರ್ಷಾನುಗಟ್ಟಲೇ ಧೋನಿ ಜೊತೆ ಒಂದೇ ತಂಡದಲ್ಲಿ ಆಡಿದರೂ, ಅವರ ಸಂಬಂಧ ಅಷ್ಟಕಷ್ಟೆ. ಇಷ್ಟಕ್ಕೂ ಧೋನಿಗೂ ಆ ಇಬ್ಬರು ಕ್ರಿಕೆಟಿಗರಿಗೂ ಆಗಿದ್ದೇನು?

Advertisment

ಧೋನಿ ಅಂದ್ರೆ ಗ್ರೇಟ್ ಕ್ಯಾಪ್ಟನ್, ಧೋನಿ ಅಂದ್ರೆ ಕೂಲ್, ಧೋನಿ ಅಂದ್ರೆ ಫಿನಿಷರ್, ಧೋನಿ ಅಂದ್ರೆ ಫ್ರೆಂಡ್ಲಿ. ಧೋನಿ ಅಂದ್ರೆ ಮೆಂಟರ್. ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹೇಳ್ತಾ ಹೋದ್ರೆ, ದಿನಗಟ್ಟಲೇ ಹೇಳಬಹುದು. ಹಿರಿಯ, ಕಿರಿಯ ಕ್ರಿಕೆಟಿಗರಿಗೆ ಧೋನಿ ಬೇಕೇ ಬೇಕು. ಧೋನಿ ಬಗ್ಗೆ ಎಲ್ಲರಿಗೂ ಅಪಾರ ಪ್ರೀತಿ, ಗೌರವ ಇದೆ. ಧೋನಿ ಜೊತೆಯಲ್ಲಿದ್ದರೆ ಆಟಗಾರರಿಗೆ ಆನೆ ಬಲ ಬಂದಂತೆ. ಅದುವೇ ಧೋನಿ ಪವರ್.

ಆದ್ರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್​, ಧೋನಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ನಾಯಕನ ಬಗ್ಗೆ ಸ್ಪೋಟಕ ಹೇಳಿಕೆ ನೀಡಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

publive-image

ನಾನು ಧೋನಿ ಸ್ನೇಹಿತರಲ್ಲ! ನಾವು ಮಾತನಾಡಿ 10 ವರ್ಷಗಳಾಯ್ತು!
ಟರ್ಬನೇಟರ್ ಹರ್ಭಜನ್ ಸಿಂಗ್​ರ ಅವರ ಬಾಯಲ್ಲಿ ಬಂದ ಮಾತುಗಳು ಸದ್ಯ ಎಲ್ಲರಿಗೂ ಅಚ್ಚರಿ ಮೂಡಿಸಿರೋದು. ಆನ್​ ಫೀಲ್ಡ್​​ನಲ್ಲಿ ಇಬ್ಬರೂ ವಾರಿಯರ್​​ನಂತೆ ಎದುರಾಳಿಗಳ ವಿರುದ್ಧ ಹೋರಾಟ ನಡೆಸ್ತಿದ್ದರು. ಸೋಲು ಅನ್ನೋ ಪದ, ಈ ಇಬ್ಬರಿಗೂ ಹಿಡಿಸುತ್ತಿರಲಿಲ್ಲ. ಒಂದೇ ತಂಡದಲ್ಲಿ ಜೊತೆಯಾಗಿ ದೇಶಕ್ಕಾಗಿ ಹೋರಾಟ ನಡೆಸಿದವರು, ಈಗ ಸ್ನೇಹಿರಲ್ಲ ಅಂದ್ರೆ ನಂಬೋಕಾಗುತ್ತಾ? ಸತ್ಯವನ್ನ ನಂಬಲೇಬೇಕು.

Advertisment

publive-image

ಧೋನಿ ವಿರುದ್ಧ ಅಸಮಾಧಾನ ಯಾಕೆ..?
ನಾನು ಧೋನಿ ಜೊತೆ ಮಾತನಾಡೋದಿಲ್ಲ. ನಾನು ಧೋನಿ ಮಾತನಾಡಿ 10 ವರ್ಷಗಳಾಯ್ತು. ನಾನು, ಧೋನಿ ಜೊತೆ ಮಾತನಾಡದಿರಲು ಕಾರಣ ಇಲ್ಲ. ಧೋನಿಗೂ ನನ್ನ ಜೊತೆ ಮಾತನಾಡದಿರಲು ಕಾರಣವಿಲ್ಲ ಅಂದುಕೊಳ್ಳುತ್ತೇನೆ. ಏನಾದ್ರೂ ಇದ್ದಿದ್ರೆ, ಧೋನಿ ನನಗೆ ಫೋನ್ ಮಾಡಿ ನನ್ನ ಜೊತೆ ಮಾತನಾಡ್ತಿದ್ದರು. ಆದ್ರೆ ಧೋನಿಗೆ ನನ್ನ ಬಳಿ ಮಾತನಾಡಲು ಏನೂ ಇಲ್ಲ. ಹಾಗಾಗಿ ಇಬ್ಬರೂ ಮಾತನಾಡಿ ವರ್ಷಗಟ್ಟಲೇ ಆಯ್ತು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಹರ್ಭಜನ್ ಮಾತಲ್ಲಿ ಬೇಸರ ಇದೆ ನಿಜ. ಆದ್ರೆ ಭಜ್ಜಿಗೆ ಧೋನಿ ಮೇಲೆ ಏನಾದ್ರೂ ಬೇಸರ ಇದ್ದಿದ್ರೆ, ನೇರವಾಗಿ ಭೇಟಿಯಾಗಿ ಮಾತನಾಡಬಹುದಿತ್ತು. ಇಬ್ಬರ ನಡುವಿನ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬಹುದಿತ್ತು. ಆದ್ರೆ ಈ ಮಾಜಿ ಆಫ್​ಸ್ಪಿನ್ನರ್ ಕಾರಣವಿಲ್ಲದೆ, ಧೋನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸ್ತಿರೋದು ಎಷ್ಟು ಸರಿಯೋ ಗೊತ್ತಿಲ್ಲ

publive-image

CSK ತಂಡದಲ್ಲಿದ್ದಾಗಲೂ ಧೋನಿ, ನನ್ನ ನಡುವೆ ಅಷ್ಟಕಷ್ಟೇ!
CSK ತಂಡದಲ್ಲಿ ಆಡಬೇಕಾದ್ರೆ, ನಾನು ಧೋನಿ ಆನ್​ಫೀಲ್ಡ್​​ನಲ್ಲಿ ಮಾತ್ರ ಮಾತನಾಡುತ್ತಿದ್ದೇವು. ಆದ್ರೆ ಆಫ್ ದ ಫೀಲ್ಡ್​ನಲ್ಲಿ ನಾನ್ಯಾರೋ, ಧೋನಿ ಯಾರೋ. ನಾನು ಧೋನಿ ರೂಮ್​ಗೆ ಹೋಗ್ತಿರಲಿಲ್ಲ. ಧೋನಿ ಸಹ ನನ್ನ ರೂಮ್​ಗೆ ಬರ್ತಿಲಿಲ್ಲ. ಗ್ರೌಂಡ್​ನಲ್ಲಿ ಮಾತ್ರ ಇಬ್ಬರು ಎಷ್ಟು ಬೇಕೋ ಅಷ್ಟು ಮಾತನಾಡುತ್ತಿದ್ವಿ.! ಇಬ್ಬರ ಸಂಬಂಧ ಅಷ್ಟಕಷ್ಟೆ ಇತ್ತು ಎಂದು ಭಜ್ಜಿ ಹೇಳಿದ್ದಾರೆ.

Advertisment

publive-image

2 ವಿಶ್ವಕಪ್ ಗೆದ್ದ ಆಟಗಾರರ ನಡುವೆ ಏನಾಯ್ತು..?
2007ರಟಿ-ಟ್ವೆಂಟಿ ವಿಶ್ವಕಪ್ ಮತ್ತು 2011ರಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ, ಇಬ್ಬರೂ ಆಡಿದವರೇ. ದೇಶಕ್ಕೆ ಎರೆಡೆರೆಡು ವಿಶ್ವಕಪ್​ ಗೆಲ್ಲಿಸಿಕೊಟ್ಟ ಆಟಗಾರರು ಇವರು. ಆದ್ರೆ ಇಬ್ಬರ ನಡುವೆ ಮಿಸ್ ಕಮ್ಯುನಿಕೇಶನ್​​, ಅಸಮಾಧಾನಕ್ಕೆ ಕಾರಣವಾಗಿದೆ.

ಫೋನ್ ಮಾಡಿದ್ರೆ ಪಿಕ್ ಮಾಡಲ್ಲ..!
ನಾನು ಧೋನಿಗೆ ಸಾಕಷ್ಟು ಬಾರಿ ಫೋನ್ ಮಾಡಿದ್ದೆ. ಆದ್ರೆ ಧೋನಿ ನನ್ನ ಕಾಲ್ ಪಿಕ್ ಮಾಡಲಿಲ್ಲ. ಮತ್ತೆ ರಿಟರ್ನ್ ಕಾಲ್ ಸಹ ಮಾಡಲಿಲ್ಲ. ಯಾರು ನನ್ನ ಕಾಲ್ ಪಿಕ್ ಮಾಡ್ತಾರೋ ಅವರಿಗೆ ಮಾತ್ರ ನಾನು ಕಾಲ್ ಮಾಡ್ತೀನಿ. ಸಂಬಂಧ ಅಂದ್ರೆ ಕೊಡಬೇಕು ಮತ್ತು ತೆಗೆದುಕೊಳ್ಳಬೇಕು. ನೀನು ನನಗೆ ಗೌರವಿಸಿದ್ರೆ, ನಾನೂ ನಿನಗೆ ಗೌರವಿಸುತ್ತೇನೆ. ಇಲ್ಲದಿದ್ರೆ ನಾನು ಯಾರನ್ನೂ ನೋಡೋದಿಲ್ಲ, ಮಾತನಾಡೋದೂ ಇಲ್ಲ ಎಂದು ಭಜ್ಜಿ ಅಸಮಾಧಾನ ತೋಡಿಕೊಂಡಿದ್ದಾರೆ.

publive-image

ಅಂದು ಯುವರಾಜ್ ಸಿಂಗ್, ಇಂದು ಹರ್ಭಜನ್ ಸಿಂಗ್..!
ಹರ್ಭಜನ್ ಸಿಂಗ್ ಅಷ್ಟೇ ಅಲ್ಲ. ಈ ಹಿಂದೆ ಯುವರಾಜ್ ಸಿಂಗ್ ಸಹ, ಇದೇ ರೀತಿ ಮಾತನಾಡಿದ್ದರು. ನಾನೂ ಧೋನಿ ಕ್ಲೋಸ್ ಫ್ರೆಂಡ್ಸ್ ಅಲ್ಲ. ಇಬ್ಬರೂ ಒಂದೇ ತಂಡದಲ್ಲಿ ಆಡಿದ್ದರೂ, ಅದು ಮೈದಾನಕ್ಕೆ ಮಾತ್ರ ಸೀಮಿತ ಅಂತ ಹೇಳಿ, ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಅಲ್ಲದೇ ಯುವರಾಜ್ ಸಿಂಗ್ ತಂದೆ ಸಹ, ಹಾಗಾಗ ಧೋನಿ ವಿರುದ್ಧ ಸಿಡಿದೇಳ್ತಾನೇ ಇದ್ರು. ಹರ್ಭಜನ್ ಮತ್ತು ಯುವರಾಜ್ ಹೇಳಿಕೆಗಳು ನೋಡ್ತಿದ್ರೆ, ಧೋನಿ ಪಂಜಾಬ್ ಕ್ರಿಕೆಟಿಗರಿಗೆ ಅದೇನ ಮಾಡಿದ್ದಾರೋ ಗೊತ್ತಿಲ್ಲ.
ಹರ್ಭಜನ್ ಸಿಂಗ್​​ ಒಬ್ಬ ಲೆಜೆಂಡರಿ ಕ್ರಿಕೆಟರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಭಜ್ಜಿಗೆ ಧೋನಿ ಬಗ್ಗೆ ಅಸಮಾಧಾನ ಇದ್ರೆ, ತೆರೆಮರೆಯಲ್ಲಿ ಬಗೆಹರಿಸಿಕೊಳ್ಳಬಹುದಿತ್ತು. ಆದ್ರೆ ಈ ಮಾಜಿ ಆಫ್​ಸ್ಪಿನ್ನರ್​ ಬಹಿರಂಗವಾಗಿ ಧೋನಿ ವಿರುದ್ಧ ಹೇಳಿಕೆ ನೀಡ್ತಿರೋದು, ಕ್ರಿಕೆಟ್ ಅಭಿಮಾನಿಗಳಲ್ಲಿ ನಿಜಕ್ಕೂ ಬೇಸರ ತರಿಸಿರೋದಂತೂ ಸುಳ್ಳಲ್ಲ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment