/newsfirstlive-kannada/media/post_attachments/wp-content/uploads/2024/03/Rohit_Kohli-IPL1.jpg)
2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಭಾರತ ತಂಡದ ದಿಗ್ಗಜರಾದ ಕ್ಯಾಪ್ಟನ್​ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ರು. ಸದ್ಯ ಇವರು ಟೀಮ್ ಇಂಡಿಯಾದ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಇದರ ಮಧ್ಯೆ ರೋಹಿತ್ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ.
ಈ ಸಂದರ್ಭದಲ್ಲೇ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ರೋಹಿತ್ ಮತ್ತು ವಿರಾಟ್ ಕ್ರಿಕೆಟ್​ ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯ ಶೇರ್​ ಮಾಡಿಕೊಂಡಿದ್ದಾರೆ. ಹರ್ಭಜನ್ ಮಾತು ಕೇಳಿ ಕೊಹ್ಲಿ, ರೋಹಿತ್​ ಫ್ಯಾನ್ಸ್​​ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹರ್ಭಜನ್​ ಸಿಂಗ್​ ಹೇಳಿದ್ದೇನು..?
ರೋಹಿತ್ ಇನ್ನೂ 2 ವರ್ಷ ಸುಲಭವಾಗಿ ಆಡಬಹುದು. ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಗೆ ಯಾರನ್ನು ಹೋಲಿಸಲು ಸಾಧ್ಯವಿಲ್ಲ. ಹಾಗಾಗಿ ಮುಂದಿನ 5 ವರ್ಷಗಳ ಕಾಲ ಆಡುವ ಸಾಮರ್ಥ್ಯ ಕೊಹ್ಲಿಗೆ ಇದೆ. ಕೊಹ್ಲಿ ಇಡೀ ಭಾರತ ತಂಡದಲ್ಲೇ ಅತ್ಯಂತ ಫಿಟ್ ಆಟಗಾರ ಎಂದರು.
ಹರ್ಭಜನ್ ಅಭಿಪ್ರಾಯದ ಪ್ರಕಾರ ಕೊಹ್ಲಿ ಅವರನ್ನು ಫಿಟ್ನೆಸ್​ ವಿಚಾರದಲ್ಲಿ 19 ವರ್ಷದ ಯುವ ಕ್ರಿಕೆಟರ್​ ಕೂಡ ಸೋಲಿಸಲು ಸಾಧ್ಯವಿಲ್ಲ. ಅಷ್ಟು ಫಿಟ್​ ಆಗಿ ಕೊಹ್ಲಿ ಇದ್ದಾರೆ. ಕೊಹ್ಲಿ ಇನ್ನೂ ಸಾಕಷ್ಟು ವರ್ಷ ಕ್ರಿಕೆಟ್​ ಆಡಬಹುದು ಎಂದಿದ್ದಾರೆ ಭಜ್ಜಿ. ಇವರ ಪ್ರಕಾರ ಇಬ್ಬರ ಕ್ರಿಕೆಟ್​ ನಿರ್ಧರಿಸುವುದು ಫಿಟ್ನೆಸ್​ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ