/newsfirstlive-kannada/media/post_attachments/wp-content/uploads/2024/10/Team-India-2.jpg)
ಟೀಮ್ ಇಂಡಿಯಾ, ನ್ಯೂಜಿಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ಮುಗಿದಿದೆ. ಮಹತ್ವದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ನ್ಯೂಜಿಲೆಂಡ್ ಬೌಲರ್ಗಳ ಎದುರಿಸುವಲ್ಲಿ ಎಡವಿದ ಟೀಮ್ ಇಂಡಿಯಾಗೆ ತವರಿನಲ್ಲೇ ಕ್ಲೀನ್ ಸ್ವೀಪ್ ಸೋಲಾಗಿದೆ.
ಇನ್ನು, ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಲಿದೆ ಅನ್ನೋ ಭರವಸೆ ಇತ್ತು. ಭಾರತ ಕ್ರಿಕೆಟ್ ತಂಡಕ್ಕೆ ಅತಿಯಾದ ಆತ್ಮವಿಶ್ವಾಸದಿಂದಲೇ ಸೋಲಾಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ವೈಫಲ್ಯವೂ ಇದಕ್ಕೆ ಕಾರಣ ಎಂಬ ಟೀಕೆಗಳು ಕೇಳಿ ಬಂದಿವೆ. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಮಾತಾಡಿದ್ದಾರೆ.
ಸೋಲಿಗೆ ಇದುವೇ ಕಾರಣ ಎಂದ ಭಜ್ಜಿ
ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಪ್ರಮುಖ ಕಾರಣವೇನು? ಎಂದು ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಬಿಚ್ಚಿಟ್ಟಿದ್ದಾರೆ. ಭಾರತದ ಪಿಚ್‌ಗಳು ಸ್ಪಿನ್ ಬೌಲರ್‌ಗಳಿಗೆ ತುಂಬಾ ಅನುಕೂಲಕರ. ಒಂದು ಪಂದ್ಯ ಕೇವಲ ಮೂರು ದಿನದಲ್ಲಿ ಮುಗಿಯೋದು ಟೆಸ್ಟ್ ಕ್ರಿಕೆಟ್ಗೆ ಒಳ್ಳೆಯದಲ್ಲ ಎಂದರು.
ಟೆಸ್ಟ್ ಪಂದ್ಯ ಎಂದಮೇಲೆ 5 ದಿನಗಳ ಕಾಲ ನಡೆಯಬೇಕು. ಇದರಿಂದ 2 ತಂಡಗಳಿಗೂ ಉತ್ತಮ ಅವಕಾಶ ಸಿಗಲಿದೆ. ಐದು ದಿನಗಳು ಆಡೋ ರೀತಿ ಪಿಚ್ ತಯಾರಿಸಬೇಕು. ಭಾರತದ ಪಿಚ್‌ಗಳು ಯಾವಾಗಲೂ ಸ್ಪಿನ್ ಬೌಲರ್‌ಗಳಿಗೆ ತುಂಬಾ ಅನುಕೂಲಕರ. ನೀವು ಸರಿಯಾಗಿ ಪಿಚ್ ನಿರ್ಮಿಸದ ಕಾರಣ ಟೀಮ್ ಇಂಡಿಯಾ ಬ್ಯಾಟರ್ಗಳು ಕಳಪೆ ಪ್ರದರ್ಶನ ನೀಡಿದ್ರು. ಇದುವೇ ಸೋಲಿಗೆ ಕಾರಣ ಎಂದರು.
ಟೀಮ್ ಇಂಡಿಯಾವನ್ನು ನ್ಯೂಜಿಲೆಂಡ್ ತಂಡ 3-0 ಅಂತರದಲ್ಲಿ ಸೋಲಿಸಿ ಗೆದ್ದು ಬೀಗಿದೆ. ಬರೋಬ್ಬರಿ 24 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿ ನ್ಯೂಜಿಲೆಂಡ್ ತಂಡ ವೈಟ್ವಾಶ್ ಮಾಡಿದೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಬಿಗ್ ಶಾಕ್; ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಸ್ಟಾರ್ ಕ್ರಿಕೆಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ