newsfirstkannada.com

‘ಜೈ ಶ್ರೀರಾಂ’ ಎಂದು ವಿಶೇಷ ವಿಡಿಯೋ ಸಂದೇಶ ಕಳುಹಿಸಿದ ಟೀಂ ಇಂಡಿಯಾದ ಮಾಜಿ ಸ್ಟಾರ್ ಹರ್ಭಜನ್​​ ಸಿಂಗ್

Share :

Published January 15, 2024 at 10:55am

Update January 15, 2024 at 11:09am

  ಅಯೋಧ್ಯೆಗೆ ಒಟ್ಟು 7000 ಗಣ್ಯರಿಗೆ ಆಹ್ವಾನ

  ಸಚಿನ್, ರೋಹಿತ್ ಶರ್ಮಾ ಕೂಡ ಭಾಗಿ ಸಾಧ್ಯತೆ

  ಮಾಜಿ ಸ್ಪಿನ್ನರ್ ಕಳುಹಿಸಿದ ಸಂದೇಶದಲ್ಲಿ ಏನಿದೆ..?

ಅಯೋಧ್ಯೆಯಲ್ಲಿರುವ ರಾಮ ಮಂದಿರವು ಜನವರಿ 22 ರಂದು ಲೋಕಾರ್ಪಣೆ ಆಗಲಿದೆ. ಈ ಕ್ಷಣಕ್ಕಾಗಿ ಕೋಟ್ಯಾಂತರ ಭಾರತೀಯರು ಕಾದು ಕೂತಿದ್ದಾರೆ. ಮತ್ತೊಂದು ಕಡೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ಜೋರಾಗಿದ್ದು, ಒಟ್ಟು 7000 ವಿಐಪಿಗಳಿಗೆ ಆಹ್ವಾನ ನೀಡಲಾಗಿದೆ. ಒಟ್ಟು 3000 ಗಣ್ಯರು ಆಗಮಿಸುವ ನಿರೀಕ್ಷೆ ಇದೆ.

ಅಯೋಧ್ಯೆ ಕಾರ್ಯಕ್ರಮಕ್ಕೆ ಆಹ್ವಾನ ಸ್ವೀಕರಿಸಿದ ಬಳಿಕ ಮಾತನಾಡಿರುವ ಟೀಂ ಇಂಡಿಯಾದ ಮಾಜಿ ಸ್ಟಾರ್ ಕ್ರಿಕೆಟರ್​, ವೀಕ್ಷಕ ವಿವರಣೆಗಾರ ಹರ್ಭಜನ್ ಸಿಂಗ್.. ಕೆಲವೇ ದಿನಗಳಲ್ಲಿ ನಾನೂ ಕೂಡ ನಿಮ್ಮಂತೆ ರಾಮಲಲ್ಲಾನ ಭೇಟಿ ಆಗುತ್ತೇನೆ. ಇದು ನಮ್ಮೆಲ್ಲ ಭಾರತೀಯರಿಗೆ ದೊಡ್ಡ ದಿನ. ರಾಮನ ಭಕ್ತರಿಗೆ ದೊಡ್ಡ ನಮಸ್ಕಾರಗಳು. ಜನವರಿ 22 ರಂದು ರಾಮಲಲ್ಲಾ ಜೀವನವು ಪವಿತ್ರ ಆಗಲಿದೆ. ನಿಮ್ಮಂತೆಯೇ ನಾನು ಕೂಡ ಆ ದಿನಕ್ಕಾಗಿ ಕಾಯುತ್ತಿದ್ದೇನೆ.

ಇದೊಂದು ಐತಿಹಾಸಿಕ ದಿನ. ಇಡೀ ಜಗತ್ತಿನ ಕನಸು ನನಸಾಗಲಿದೆ. ಇಡೀ ಭಾರತೀಯರಲ್ಲಿ ಸಂತಸದ ಅಲೆ ಇದೆ. ಮೊದಲನೆಯದಾಗಿ ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತೇನೆ. ನಂತರ ನಿಮ್ಮೆಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು.

ರಾಮ ಮಂದಿರ ಐತಿಹಾಸಿಕ ಸ್ಥಳವಾಗಲಿದೆ. ರಾಮ ಜನ್ಮಭೂಮಿಯಲ್ಲಿ ರಾಮ್ ಜಿಯನ್ನು ನೋಡಿದ ನಂತರ ಅನೇಕ ಜನ ಬಂದು ಆನಂದಿಸುತ್ತಾರೆ. ಮತ್ತೊಮ್ಮೆ ನಾನು ನಿಮಗೆ ಶುಭ ಹಾರೈಸುತ್ತೇನೆ. ಬಹಳಷ್ಟು ಪ್ರೀತಿ ಮತ್ತು ಭಗವಾನ್ ರಾಮನು ನಿಮ್ಮೆಲ್ಲರನ್ನು ಆಶೀರ್ವದಿಸಲಿ. ಜೈ ಶ್ರೀ ರಾಮ್ –ಹರ್ಭಜನ್ ಸಿಂಗ್, ಮಾಜಿ ಕ್ರಿಕೆಟಿಗ

ಶ್ರೀರಾಮ ಜನ್ಮಭೂಮಿ ಟ್ರಸ್ಟ್​ ಹರ್ಭಜನ್ ಸಿಂಗ್ ಮಾತ್ರವಲ್ಲ. ಮಾಜಿ ಆಟಗಾರ ಸಚಿನ್ ತೆಂಡುಲ್ಕರ್, ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿದಂತೆ ಅನೇಕ ಸ್ಟಾರ್ ಕ್ರಿಕೆಟರ್​ಗೆ ಆಹ್ವಾನ ನೀಡಲಾಗಿದೆ. ವರದಿಗಳ ಪ್ರಕಾರ ರೋಹಿತ್ ಶರ್ಮಾ ಕೂಡ ಅಂದಿನ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಜೈ ಶ್ರೀರಾಂ’ ಎಂದು ವಿಶೇಷ ವಿಡಿಯೋ ಸಂದೇಶ ಕಳುಹಿಸಿದ ಟೀಂ ಇಂಡಿಯಾದ ಮಾಜಿ ಸ್ಟಾರ್ ಹರ್ಭಜನ್​​ ಸಿಂಗ್

https://newsfirstlive.com/wp-content/uploads/2023/11/Harbhajan-Singh.jpg

Load More