newsfirstkannada.com

Breaking News: ಅದು ಕಟ್ಟಾ ಭ್ರಷ್ಟಾಚಾರದ ಸಮ್ಮೇಳನ -26 ವಿಪಕ್ಷಗಳ ‘ಬೆಂಗಳೂರು ಸಭೆ’ ಬಗ್ಗೆ ಪ್ರಧಾನಿ ಮೋದಿ ಗೇಲಿ

Share :

18-07-2023

    ಬೆಂಗಳೂರಲ್ಲಿ 26 ವಿಪಕ್ಷಗಳಿಂದ ಮಹತ್ವದ ಸಭೆ

    UPA ಒಕ್ಕೂಟಗಳ ವಿರುದ್ಧ ಮೋದಿ ಸಿಡಿಮಿಡಿ

    ಅವ್ರಿಗೆ ಕುಟುಂಬ ಮುಖ್ಯ, ದೇಶ ಅಗತ್ಯ ಇಲ್ಲ -ಮೋದಿ

ಬೆಂಗಳೂರಲ್ಲಿ ನಡೆಯುತ್ತಿರುವ 26 ವಿರೋಧ ಪಕ್ಷಗಳ ಸಭೆಯು ಕಟ್ಟಾ ಭ್ರಷ್ಟಾಚಾರ ಕಾನ್​​ಕ್ಲೇವ್ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಪೋರ್ಟ್ ಬ್ಲೇರ್‌ನ ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್​​ಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಉದ್ಘಾಟನೆ ಮಾಡಿದರು. ಈ ವೇಳೆ ಬೆಂಗಳೂರಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಸಭೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳ ಪ್ರಮುಖ ಗುರಿ ಕುಟುಂಬ. ಕುಟುಂಬಕ್ಕೆ ಮೊದಲ ಆದ್ಯತೆ. ಅವರಿಗೆ ರಾಷ್ಟ್ರ ಏನೂ ಅಲ್ಲ. ಅವರ ಸಭೆಯಲ್ಲಿ ಭ್ರಷ್ಟಾಚಾರದ ಕುರಿತು ಮೊಟಿವೇಷನ್ ಆಗಲಿದೆ. ಭ್ರಷ್ಟಾಚಾರ ಹಗರಣ ದೊಡ್ಡದಾಗಿದೆ. ಅವರ ಮಂತ್ರ ಕುಟುಂಬಕ್ಕಾಗಿ ಮಾಡಿಕೊಳ್ಳುವುದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನೇತೃತ್ವದಲ್ಲಿ ಬೆಂಗಳೂರಲ್ಲಿ ಸಭೆ ನಡೆಯುತ್ತಿದೆ. ನಿನ್ನೆಯಿಂದ ಶುರುವಾಗಿರುವ ಈ ಸಭೆಯಲ್ಲಿ ಲೋಕಸಭೆ ಚುನಾವಣೆಗಾಗಿ ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಿದ್ದಾರೆ. ಯುಪಿಎ ಒಕ್ಕೂಟಗಳ ಸಭೆ ಬೆನ್ನಲ್ಲೇ ಎನ್​​ಡಿಎ ಮಿತ್ರಪಕ್ಷ ಕೂಡ ಮಹತ್ವದ ಸಭೆ ಕರೆದಿದೆ. ಇಂದು ಸಂಜೆ ದೆಹಲಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಮಿತ್ರಪಕ್ಷಗಳ ಜೊತೆ ಸಭೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಅದು ಕಟ್ಟಾ ಭ್ರಷ್ಟಾಚಾರದ ಸಮ್ಮೇಳನ -26 ವಿಪಕ್ಷಗಳ ‘ಬೆಂಗಳೂರು ಸಭೆ’ ಬಗ್ಗೆ ಪ್ರಧಾನಿ ಮೋದಿ ಗೇಲಿ

https://newsfirstlive.com/wp-content/uploads/2023/07/MODI-13.jpg

Load More