ರೋಹಿತ್​ಗೆ ಮತ್ತೊಂದು ಬಿಗ್ ​ಶಾಕ್; ODI ಕ್ರಿಕೆಟ್​ಗೆ ಹೊಸ ನಾಯಕನ ಕಂಡುಕೊಂಡ BCCI

author-image
Ganesh
Updated On
T20 ವಿಶ್ವಕಪ್​ಗೆ ಮುನ್ನವೇ ಹಾರ್ದಿಕ್​ ಪಾಂಡ್ಯಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ!
Advertisment
  • ಸಿಡ್ನಿ ಟೆಸ್ಟ್​ನಿಂದ ಹೊರಗುಳಿದ ರೋಹಿತ್ ಶರ್ಮಾ
  • ಏಕದಿನ ಕ್ರಿಕೆಟ್​ನಿಂದಲೂ ರೋಹಿತ್​​ ಶರ್ಮಾಗೆ ಕೊಕ್
  • ಬಿಸಿಸಿಐ ಕಂಡುಕೊಂಡ ಹೊಸ ನಾಯಕ ಯಾರು?

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಿಂದ ಕ್ಯಾಪ್ಟನ್ ರೋಹಿತ್ ಶರ್ಮಾರನ್ನು ಕೈಬಿಡಲಾಗಿದೆ. ಬೆನ್ನಲ್ಲೇ ಶರ್ಮಾರ ರೆಡ್​ಬಾಲ್ ಕ್ರಿಕೆಟ್ ಜರ್ನಿ ಅಂತ್ಯಗೊಂಡಿದೆ ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಈ ನಡುವೆ ಕ್ಯಾಪ್ಟನ್ ರೋಹಿತ್​​ಗೆ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದೆ.

ಮುಂದಿನ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಬರಲಿದೆ. ಈ ಟೂರ್ನಿಯಲ್ಲಿ ಭಾರತ ತಂಡವನ್ನು ಹೊಸ ನಾಯಕನೊಂದಿಗೆ ಕಣಕ್ಕಿಳಿಸಲು ಬಿಸಿಸಿಐ ನಿರ್ಧರಿಸಿದೆ. ಆ ಮೂಲಕ ಶರ್ಮಾಗೆ ಏಕದಿನ ಕ್ರಿಕೆಟ್ ಕ್ಯಾಪ್ಟನ್ಸಿಯಿಂದಲೂ ಗೇಟ್​ಪಾಸ್ ನೀಡಲಾಗುತ್ತಿದೆ. ಈಗಾಗಲೇ ಟಿ20ಯಿಂದ ನಿವೃತ್ತಿಯಾಗಿರುವ ರೋಹಿತ್ ಸಿಡ್ನಿ ಟೆಸ್ಟ್‌ನಿಂದ ಹಿಂದೆ ಸರಿದಿದ್ದಾರೆ. ಟೆಸ್ಟ್ ವೃತ್ತಿಜೀವನ ಅಂತ್ಯಗೊಳ್ಳುವ ಸೂಚನೆಯೊಂದಿಗೆ ತಂಡವು ಹಲವು ಬದಲಾವಣೆಗಳತ್ತ ಹೆಜ್ಜೆ ಹಾಕುತ್ತಿದೆ. ಪ್ರಸ್ತುತ ಪಾಂಡ್ಯ ODI ಪಂದ್ಯಗಳನ್ನು ಮುನ್ನಡೆಸುವ ಪ್ರಮುಖ ಸಾರಥಿ ಆಗಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್; KEA ಇಂದ ಶೀಘ್ರವೇ 2,609 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

publive-image

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಹಾರ್ದಿಕ್ ಪಾಂಡ್ಯಗೆ ಒಳ್ಳೆಯ ಅನುಭವ ಇದೆ. ಒತ್ತಡದ ಸಂದರ್ಭದಲ್ಲಿ ತಂಡವನ್ನು ನಿಭಾಯಿಸುವ ಸ್ಕಿಲ್ ಇದೆ. ಸೂರ್ಯಕುಮಾರ್ ಯಾದವ್ ODIನಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ, ಹಾರ್ದಿಕ್​ರನ್ನು ನಾಯಕರನ್ನಾಗಿ ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಏಕದಿನ ಕ್ರಿಕೆಟ್​ ಕ್ಯಾಪ್ಟನ್ಸಿ ಮೇಲೆ ಕಣ್ಣಿಟ್ಟಿದ್ದ ಯುವ ಆಟಗಾರ ಗಿಲ್​ಗೂ ಕೊಕ್ ನೀಡಲು ಬಿಸಿಸಿಐ ಮುಂದಾಗಿದೆ.

ರೋಹಿತ್‌ಗೆ ಮುಂದಿನ ಕೆಲವು ತಿಂಗಳುಗಳು ತುಂಬಾನೇ ನಿರ್ಣಾಯಕ. ODIಗಳಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಫಾರ್ಮ್​​ಗೆ ಮರಳಬೇಕಿದೆ. ಜೊತೆಗೆ ಕಿರಿಯ ಆಟಗಾರರೊಂದಿಗೆ ಸ್ಪರ್ಧಿಸಲು ಸಿದ್ಧರಾಗಿರಬೇಕು. ಜೈಸ್ವಾಲ್ ಅವರಂತಹ ಆಟಗಾರರು ತಂಡದಲ್ಲಿರುವಾಗ ಟೀಂ ಇಂಡಿಯಾ ಬದಲಾವಣೆಗೆ ಸಜ್ಜಾಗಿದೆ.

ಇದನ್ನೂ ಓದಿ:ಟೆಸ್ಟ್​ ಕ್ರಿಕೆಟ್​​ಗೆ ಮತ್ತೆ ಕಿಂಗ್ ಕೊಹ್ಲಿ ಕ್ಯಾಪ್ಟನ್..? ಟೀಂ ಇಂಡಿಯಾದಲ್ಲಿ ಹೊಸ ಸಂಚಲನ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment