newsfirstkannada.com

ಕೊಹ್ಲಿ ಅಲ್ಲ, ರೋಹಿತ್​ ಅಲ್ಲ.. ‘ಈತ ಟೀಂ ಇಂಡಿಯಾದ ಸೂಪರ್​ ಸ್ಟಾರ್​’ ಎಂದ ಹಾರ್ದಿಕ್​ ಪಾಂಡ್ಯ!

Share :

27-05-2023

    ವಿರಾಟ್​​​ ಕೊಹ್ಲಿ ಅಲ್ಲ, ರೋಹಿತ್​ ಅಲ್ಲವೇ ಅಲ್ಲ..

    ‘ಈ ಆಟಗಾರ ಟೀಂ ಇಂಡಿಯಾದ ಸೂಪರ್​ ಸ್ಟಾರ್​’

    ಟೀಂ ಇಂಡಿಯಾದ ಆಟಗಾರರನ್ನು ಹೊಗಳಿದ ಪಾಂಡ್ಯ

ಸದ್ಯ ನಡೆಯುತ್ತಿರೋ ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಸೀಸನ್​​ 16 ಕೊನೇ ಹಂತ ತಲುಪಿದೆ. ಇತ್ತೀಚೆಗೆ ನಡೆದ ಕ್ವಾಲಿಫಯರ್​​​ 2 ಹೈವೋಲ್ಟೇಜ್​ ಪಂದ್ಯದಲ್ಲಿ ಶುಭ್ಮನ್​​ ಗಿಲ್​​​ ಅಮೋಘ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್​​ ವಿರುದ್ಧ ಗೆದ್ದು ಬೀಗುವ ಮೂಲಕ ಫೈನಲ್​ ಪ್ರವೇಶಿಸಿದೆ. ಈ ಪಂದ್ಯ ಗೆಲುವಿಗೆ ಕಾರಣರಾದ ಶುಭ್ಮನ್​​ ಗಿಲ್​​ ಬಗ್ಗೆ ಗುಜರಾತ್​ ಟೈಟಾನ್ಸ್​​​ ಕ್ಯಾಪ್ಟನ್ ಹಾರ್ದಿಕ್​​ ಪಾಂಡ್ಯ ಮನಬಿಚ್ಚಿ ಮಾತಾಡಿದ್ದಾರೆ.

ಶುಭ್ಮನ್​​​ ಗಿಲ್​ ಸೂಪರ್ ಸ್ಟಾರ್. ಟೀಂ ಇಂಡಿಯಾದ ಸ್ಟ್ರಾಂಗ್​​ ವೆಪನ್​​. ಕಳೆದ ಬಾರಿ ಸಾಧಾರಣ ಪ್ರದರ್ಶನ ನೀಡಿದ್ದ ಗಿಲ್​ ಕೇವಲ 483 ರನ್‌ ಸಿಡಿಸಿದ್ದರು. ಆದರೆ, ಈ ಸೀಸನ್​​ನಲ್ಲಿ ತನ್ನ ಸ್ಟ್ರೈಕ್​ ರೇಟ್​​ ಅನ್ನು 150ಕ್ಕೆ ಹೆಚ್ಚಿಸಿಕೊಂಡಿರೋ ಗಿಲ್​​​ 850 ರನ್​ ಕಲೆ ಹಾಕಿದ್ದಾರೆ ಎಂದರು.

ಗಿಲ್​​ಗೆ ಇರುವ ಕ್ಲಾರಿಟಿ ಯಾರಿಗೂ ಇಲ್ಲ. ಇತ್ತೀಚಿನ ದಿನಗಳಲ್ಲಿ ನಾನು ಕಂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಗಳಲ್ಲಿ ಇವರದ್ದು ಒಂದು. ಗಿಲ್​ ಎಂದೂ ಬ್ಯಾಟಿಂಗ್​ ಮಾಡುವಾಗ ಆತುರಪಡುವುದಿಲ್ಲ. ಬದಲಿಗೆ ನಿಯಂತ್ರದಲ್ಲೇ ಇದ್ದು ರನ್​ ಕಲೆ ಹಾಕುತ್ತಾರೆ. ಆತ ಟೀಂ ಇಂಡಿಯಾದ ಸೂಪರ್​ ಸ್ಟಾರ್​ ಎಂದು ಕೊಂಡಾಡಿದ್ದಾರೆ.

ಕಳೆದ ನಾಲ್ಕು ಪಂದ್ಯಗಳಲ್ಲಿ ಗಿಲ್​​ ಮೂರು ಶತಕ ಸಿಡಿಸಿದ್ದಾರೆ. ಮುಂಬೈ ಇಂಡಿಯನ್ಸ್​​ ವಿರುದ್ಧದ ಪಂದ್ಯದಲ್ಲಂತೂ ಬರೋಬ್ಬರಿ 10 ಸಿಕ್ಸರ್​​, 7 ಫೋರ್​​ನೊಂದಿಗೆ ಗಿಲ್​​ 125ಕ್ಕೂ ಹೆಚ್ಚು ರನ್​ ಸಿಡಿಸಿದರು. ಈ ಮೂಲಕ ಗಿಲ್​ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಕೊಹ್ಲಿ ಅಲ್ಲ, ರೋಹಿತ್​ ಅಲ್ಲ.. ‘ಈತ ಟೀಂ ಇಂಡಿಯಾದ ಸೂಪರ್​ ಸ್ಟಾರ್​’ ಎಂದ ಹಾರ್ದಿಕ್​ ಪಾಂಡ್ಯ!

https://newsfirstlive.com/wp-content/uploads/2023/05/Rohit_KL-Rahul.jpg

Load More