ನಟಾಶಾಗೆ ಬೈ ಬೈ.. ಚೆಂದುಳ್ಳಿ ಚೆಲುವೆಗೆ ಹಾಯ್ ಹಾಯ್..?
ಹಾರ್ದಿಕ್ ಪ್ರೇಮದ ಬಲೆಗೆ ಬಿದ್ದ ಆ ಚೋರಿ ಯಾರು..?
ಪ್ರಾಚಿ ಸೋಲಂಕಿ ಮೇಲೆ ಹಾರ್ದಿಕ್ ಪಾಂಡ್ಯಗೆ ಪ್ಯಾರ್..?
ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನಟಾಶಾ ಸ್ಟಾಂಕೋವಿಕ್ ವಿಚ್ಛೇದನ ಕಥೆ ನಿಗೂಢವಾಗಿದೆ. ರೂಮರ್ಸ್ ಹರಿದಾಡೋಕೆ ಶುರುವಾಗಿ ತಿಂಗಳೇ ಉರುಳಿದ್ರೂ ಇಬ್ಬರೂ ಈ ಬಗ್ಗೆ ತುಟಿ ಬಿಚ್ಚಿ ಮಾತನಾಡ್ತಿಲ್ಲ. ನಡುವೆ ಹಾರ್ದಿಕ್ ಮಿಲ್ಕಿ ಬ್ಯೂಟಿ ಜೊತೆ ಡೇಟಿಂಗ್ ನಡೆಸ್ತಿದ್ದಾರೆ ಅನ್ನೋ ಗಾಸಿಪ್ ಹಬ್ಬಿದೆ.
ಹಾರ್ದಿಕ್ ಪಾಂಡ್ಯ..! ಕಳೆದ ಮೂರ್ನಾಲ್ಕು ತಿಂಗಳಲ್ಲಿ ಟೀಮ್ ಇಂಡಿಯಾದ ಈ ಸ್ಟಾರ್ ಆಲ್ರೌಂಡರ್ ಅನುಭವಿಸಿದಷ್ಟು ನೋವು, ಅಪಮಾನ, ಯಾತನೆ ಹಾಗೂ ಯಶಸ್ಸನ್ನ ಯಾರೊಬ್ಬರು ಅನುಭವಿಸಿಲ್ಲ. ಐಪಿಎಲ್ನಲ್ಲಿ ಸಾಲು ಸಾಲು ಟೀಕೆ,ದಾಂಪತ್ಯ ಜೀವನದಲ್ಲಿ ಬಿರುಕು ಅಂತಾ ನೋವಿನ ಮೇಲೆ ನೋವುಂಡ್ರು. ಇದೇ ನೋವಲ್ಲಿ ಟಿ20 ವಿಶ್ವಕಪ್ ತೆರಳಿದ್ದ ಹಾರ್ದಿಕ್ ಎಲ್ಲವನ್ನೂ ಮೆಟ್ಟಿನಿಂತು ದೇಶಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟು ಎಲ್ಲರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ರು.
ಇದನ್ನೂ ಓದಿ:ಅಪರ್ಣಾ ತಮ್ಮ ಬದುಕಲ್ಲಿ ಅಳವಡಿಸಿಕೊಂಡಿದ್ದ ಮೂರು ಸೂತ್ರಗಳು.. ಆ ಮುತ್ತಿನಂಥ ಮಾತುಗಳು ಏನು ಗೊತ್ತಾ..?
ನಟಾಶಾಗೆ ಬೈ ಬೈ..?
ಎಲ್ಲಾ ಯಶಸ್ಸನ್ನ ಕಂಡು ವಿಶ್ವಕಪ್ ಗೆದ್ದು ದೇಶಕ್ಕೆ ಆಗಮಿಸಿದ್ರೂ ಹಾರ್ದಿಕ್ ಪತ್ನಿ ನಟಾಶಾ ಮಾತ್ರ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಟೀಮ್ ಇಂಡಿಯಾದ ಎಲ್ಲ ಆಟಗಾರರು ತಮ್ಮ ಪತ್ನಿಯರ ಜೊತೆ ವಾಂಖೆಡೆ ಮೈದಾನದಲ್ಲಿ ಸಂಭ್ರಮದಲ್ಲಿ ಮುಳುಗಿದ್ರು. ಹಾರ್ದಿಕ್ ಮಾತ್ರ ಒಂಟಿಯಾಗಿದ್ರು. ಇದೀಗ ಪತ್ನಿ ನತಾಶಾ ಸ್ಕಾಂಕೋವಿಕ್ ಜತೆಗಿನ ವಿಚ್ಛೇದನದ ಗಾಸಿಪ್ ಮಧ್ಯೆ ಹಾರ್ದಿಕ್, ಮಿಲ್ಕಿ ಬ್ಯೂಟಿ ಜತೆ ಲವ್ನಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.
ಇದನ್ನೂ ಓದಿ:KL ರಾಹುಲ್ ಟಿ-20 ಕರಿಯರ್ ಖತಂ..? ಕೋಚ್ ಗಂಭೀರ್ ಕೂಡ ರಾಹುಲ್ ಎಂಟ್ರಿಗೆ ಅಡ್ಡಿ..!
ಪ್ರಾಚಿ ಸೋಲಂಕಿಗೆ ಪಾಂಡ್ಯ ಬೋಲ್ಡ್..?
ನಟಾಶಾಳದಿಂದ ದಿನೇ ದಿನೆ ಅಂತರ ಕಾಯ್ತುಕೊಳ್ತಿರೋ ಹಾರ್ದಿಕ್ ಪಾಂಡ್ಯ ಪ್ರಾಚಿ ಸೋಲಂಕಿ ಅನ್ನೋ ಮುದ್ದಾದ ಮಾಯಾವಿ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಅನ್ನೋ ಸುದ್ದಿ ಸದ್ಯ ಸಖತ್ ಸೌಂಡ್ ಮಾಡ್ತಿದೆ. ಅಂದ್ಹಾಗೆ ಆ ಚೆಂದುಳ್ಳಿ ಚೆಲುವೆಯ ಹೆಸರು ಪ್ರಾಚಿ ಸೋಲಂಕಿ. ವಿಶ್ವಕಪ್ ಗೆದ್ದು ಭಾರತಕ್ಕೆ ಬಂದ ಬಳಿಕ ಈ ಮಿಸ್ಟ್ರಿ ಗರ್ಲ್ನ ಹಾರ್ದಿಕ್ ಪಾಂಡ್ಯ ಭೇಟಿಯಾಗಿದ್ರು.
ಆತ್ಮೀಯವಾಗಿ ಮಾತನಾಡಿದ್ದಲ್ಲದೇ ನಗೆ ಬೀರುತ್ತಾ ಕೈ ಕುಲುಕಿದ್ರು. ಈ ವಿಡಿಯೋವನ್ನ ಪ್ರಾಚಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 3 ದಿನಗಳ ಹಿಂದೆ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ಮ್ಯಾಚಿಂಗ್ ಬಟ್ಟೆ ತೊಟ್ಟು ಮಿಂಚಿದ್ದಾರೆ. ಈ ವಿಡಿಯೋ ಹೊರಬಂದ ಮೇಲೆ ಹಾರ್ದಿಕ್ ಲವ್ವಲ್ಲಿ ಬಿದ್ದಿದ್ದಾರೆ. ಪ್ರಾಚಿ ಜೊತೆ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಮಾತುಗಳು ಹರಿದಾಡ್ತಿದೆ.
ಯಾರು ಈ ಚೆಂದುಳ್ಳಿ..?
ಹಾರ್ದಿಕ್ ಭೇಟಿಯಿಂದ ಸೆನ್ಷೆಷನ್ ಸೃಷ್ಟಿಸಿರೋ ಪ್ರಾಚಿ ಸೋಲಂಕಿ ಫೇಮಸ್ ಮೇಕಪ್ ಆರ್ಟಿಸ್ಟ್ ಹಾಗೂ ಡಿಜಿಟಲ್ ಕ್ರಿಯೇಟರ್. ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರೋ ಈ ಸುಂದರಿ ಇನ್ಸ್ಟಾಗ್ರಾಮ್ನಲ್ಲಿ 546K ಫಾಲೋವರ್ಸ್ ಹೊಂದಿದ್ದಾಳೆ. ಈಕೆ ಒಂದು ಪೋಸ್ಟ್ ಹಾಕಿದ್ರೆ ಸಾಕು, ಲೈಕ್ಸ್, ಕಮೆಂಟ್ಗಳ ಸುರಿಮಳೆ ಸುರಿಸ್ತಾರೆ.
ಇದನ್ನೂ ಓದಿ:ಗಂಭೀರ್ ಕೋಚ್ ಆದ ಬೆನ್ನಲ್ಲೇ ಟೆನ್ಷನ್ ಟೆನ್ಷನ್.. ಆತಂಕ ಹುಟ್ಟಿಸಿದ ಆ ಮೂರು ಘಟನೆಗಳು..!
ಪ್ರಾಚಿ-ಹಾರ್ದಿಕ್ ಡೇಟಿಂಗ್ ಗಾಸಿಪ್..!
ಹಾರ್ದಿಕ್-ಪ್ರಾಚಿ ಡೇಟಿಂಗ್ ಬಗ್ಗೆ ಗಾಸಿಪ್ ಹಬ್ಬಿದ ಬೆನ್ನಲ್ಲೆ ಹಾರ್ದಿಕ್ ಪಾಂಡ್ಯ ಪತ್ನಿ ನಟಾಶಾ ಸ್ಟಾಂಕೋವಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಮಾರ್ಮಿಕವಾಗಿ ಮಾತನಾಡಿದ್ದಾರೆ. ಹಾರ್ದಿಕ್ ಜೊತೆಗಿನ ಬ್ರೇಕ್ ಸುದ್ದಿಯ ಬೆನ್ನಲ್ಲೇ ನಟಾಶಾ ಗೆಳೆಯನೊಂದಿಗೆ ತಿರುಗಾಡಿದ್ರು. ಆಗ ತೀವ್ರ ಟೀಕೆಗಳು ವ್ಯಕ್ತವಾಗಿದ್ವು. ಇದೀಗ ನಟಾಶಾ ಮಾತನಾಡಿರೋದು ತಮ್ಮನ್ನ ಸಮರ್ಥನೆ ಮಾಡಿಕೊಂಡ್ರೋ ಅಥವಾ ಹಾರ್ದಿಕ್-ಪ್ರಾಚಿ ಗಾಸಿಪ್ ಬಗ್ಗೆ ಮಾತನಾಡಿದ್ರೂ ಅನ್ನೋ ಕನ್ಫೂಶನ್ ಹುಟ್ಟಿಸಿದೆ.
ಜನರು ಎಷ್ಟು ವೇಗವಾಗಿ ನಿರ್ಣಯಿಸ್ತಾರೆ. ಯಾರಾದ್ರೂ ನಮಗೆ ಅನಿಸದಂತೆ ನಡೆದುಕೊಳ್ಳದಿದ್ರೆ, ನಾವು ಅವರಿಗೆ ಏನಾಗ್ತಿದೆ ಎಂದು ಯೋಚಿಸಲ್ಲ. ನಾವು ಅವರ ಬಗ್ಗೆ ನಿರ್ಧರಿಸಿ ಬಿಡ್ತೀವಿ. ಇದ್ರಿಂದ ಅವರಿಗೆ ಏನಾಗುತ್ತೆ ಅಂತಾ ಯಾರೂ ಯೋಚಿಸಲ್ಲ. ಇದರ ಹಿಂದೆ ಏನಾಗಿದೆ. ಸಂದರ್ಭ ಹೇಗಿತ್ತು ಎಂದು ಚಿಂತಿಸಲ್ಲ. ಇಡೀ ಘಟನೆ ಹಿಂದೆ ನಡೆದಿರೋದು, ಯಾರಿಗೂ ಗೊತ್ತಿರಲ್ಲ. ನಿರ್ಣಯಕ್ಕೆ ಬರೋದನ್ನ ನಿಲ್ಲಿಸಿ, ತಾಳ್ಮೆ ಬೆಳೆಸಿಕೊಳ್ಳಿ-ನಟಾಶಾ, ಹಾರ್ದಿಕ್ ಪತ್ನಿ
ಒಂದೆಡೆ ಹಾರ್ದಿಕ್ ಪಾಂಡ್ಯ-ಪ್ರಾಚಿ ಸೋಲಂಕಿ ಜೊತೆ ಡೇಟಿಂಗ್ ಗಾಸಿಪ್ ಸುದ್ದಿ ಗಟ್ಟಿಯಾಗಿ ಕೇಳಿ ಬರ್ತಿದ್ರೆ, ಇನ್ನೊಂದೆಡೆ ಇಷ್ಟು ದಿನ ಸೈಲೆಂಟಾಗಿದ್ದ ನಟಾಶಾ ಇದೀಗ ತುಟಿ ಬಿಚ್ಚಿದ್ದಾರೆ. ಹಾರ್ದಿಕ್ ಮತ್ತು ತಮ್ಮ ನಡುವೆ ಏನಾಗಿದೆ? ಡಿವೋರ್ಸ್ ಸುದ್ದಿ ಸುಳ್ಳೋ-ನಿಜವೋ ಎಂಬ ಬಗ್ಗೆ ಮಾತನಾಡಿಲ್ಲ. ಹಾರ್ದಿಕ್ ಕೂಡ ಎಲ್ಲೂ ಈ ಬಗ್ಗೆ ಮಾತಾಡ್ತಿಲ್ಲ. ಇದು ಹಾರ್ದಿಕ್ ನಟಾಶಾಗೆ ಗುಡ್ಬೈ ಹೇಳಿ ಪ್ರಾಚಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡ್ತಿರೋದಂತೂ ಸುಳ್ಳಲ್ಲ.
ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್