/newsfirstlive-kannada/media/post_attachments/wp-content/uploads/2024/05/hardik-pandya.jpg)
ಟೀಂ ಇಂಡಿಯಾದ ಕ್ರಿಕೆಟಿ ಹಾರ್ದಿಕ್​ ಪಾಂಡ್ಯ ಮತ್ತು ಪತ್ನಿ ನತಾಶಾ ನಡುವೆ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಜೋಡಿ ಈಗಾಗಲೇ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ಪಾಂಡ್ಯ ತನ್ನ ಶೇ70ರಷ್ಟು ಆಸ್ತಿಯನ್ನ ಆಕೆಯ ಹೆಸರಿಗೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಒಂದೆಡೆ ಪಾಂಡ್ಯ ಮತ್ತು ನತಾಶಾ ವಿಚ್ಛೇದನ ಸುದ್ದಿ ಹರಿದಾಡುತ್ತಿದ್ದರೆ ಮತ್ತೊಂದೆಡೆ ಅಭಿಮಾನಿಗಳೂ ಈ ಜೋಡಿಯ ಮೊದಲ ಭೇಟಿ ಎಲ್ಲಿ? ಲವ್​ ಸ್ಟೋರಿ ಶುರುವಾಗಿದ್ದು ಎಲ್ಲಿಂದ? ಎಂಬ ಬಗ್ಗೆ ಹುಡುಕಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ನೈಟ್​ಕ್ಲಬ್​ನಲ್ಲಿ ಸಿಕ್ಕ ಚೆಲುವೆ
ನತಾಶಾ ಸ್ಟಾಂಕೋವಿಕ್​ ಭಾರತದವಳು ಅಲ್ಲ, ಸೆರ್ಬೀಯಾದವಳು. ಹಾರ್ದಿಕ್​ ಪಾಂಡ್ಯಕೆ ಆಕೆ 2018ರಲ್ಲಿ ಸಿಕ್ಕಳು. ಮುಂಬೈ ನೈಟ್​ಕ್ಲಬ್​ನಲ್ಲಿ ಇಬ್ಬರು ಜೊತೆಯಾದರು. ಆ ಬಳಿಕ ಇಬ್ಬರ ನಡುವೆ ಸಂಪರ್ಕ ಹುಟ್ಟಿಕೊಂಡಿತು.
/newsfirstlive-kannada/media/post_attachments/wp-content/uploads/2024/05/hardik-pandya-1.jpg)
‘ಬೆಸ್ಟ್​ ಫ್ರೆಂಡ್​’ ಎಂದ ಪಾಂಡ್ಯ
ಪರಿಚಯ ಸ್ನೇಹವಾಗಿ ಹಾರ್ದಿಕ್​ ಮತ್ತು ನತಾಶಾ ನಡುವಿನ ಒಡನಾಟ ಜಾಸ್ತಿಯಾಯಿತು. ಮಾತ್ರವಲ್ಲದೆ ಅನೇಕರು ಇವರಿಬ್ಬರ ಓಡಾಟದ ಬಗ್ಗೆ ಅನುಮಾನವು ಹುಟ್ಟುಕೊಂಡಿತು. ಕೊನೆಗೆ 2019ರಲ್ಲಿ ಹಾರ್ದಿಕ್​ ತನ್ನ ಇನ್​ಸ್ಟಾದಲ್ಲಿ ‘ಬೆಸ್ಟ್​ ಫ್ರೆಂಡ್​’ ಎಂದು ಕರೆಯುವ ಮೂಲಕ ಇಬ್ಬರ ಸ್ನೇಹವನ್ನು ಎತ್ತಿತೋರಿಸಿದರು.
/newsfirstlive-kannada/media/post_attachments/wp-content/uploads/2024/05/dhoni-7.jpg)
ಸ್ನೇಹ ಪ್ರೀತಿಯಾಯ್ತು
2020ರಲ್ಲಿ ಹಾರ್ದಿಕ್​ ಆಕೆಗೆ ಪ್ರಪೋಸ್​​ ಮಾಡಬೇಕು ಎಂದು ಬಯಸಿದ್ದರು. ಅದರಂತೆಯೇ ಜನವರಿ 1 ರಂದು ಹಾರ್ದಿಕ್​ ಆಕೆಯನ್ನು ಪ್ರಪೋಸ್​ ಮಾಡಿದರು. ಬಳಿಕ ಇಬ್ಬರು ನಡುವಿನ ಸ್ನೇಹ ಪ್ರೀತಿಗೆ ತಿರುಗಿರುವ ವಿಚಾರ ಎಲ್ಲೆಡೆ ಹಬ್ಬಿತು.
/newsfirstlive-kannada/media/post_attachments/wp-content/uploads/2024/05/hardik-pandya-3-1.jpg)
ಗರ್ಭಿಣಿಯಾದ ನತಾಶಾ
ಬಳಿಕ ಅದೇ ವರ್ಷ ಮೇ ತಿಂಗಳಿನಲ್ಲಿ ನತಾಶಾ ಗರ್ಭಿಣಿಯಾದಳು. ನಂತರ ಈ ಜೋಡಿ ಅಗಸ್ತ್ಯ ಎಂಬ ಮುಂದಾದ ಮಗನನ್ನು ಜುಲೈ ತಿಂಗಳಿನಲ್ಲಿ ಬರಮಾಡಿಕೊಂಡರು. ಮಗನ ಜನನದ ಬಳಿಕ ಹಾರ್ದಿಕ್​ ಮತ್ತು ನತಾಶಾ ಇಬ್ಬರು ಸಾಂಪ್ರದಾಯಿಕವಾಗಿ ವಿವಾಹವಾಗಲು ಬಯಸುತ್ತಾರೆ. ಫೆಬ್ರವರಿ 14, 2023ರಂದು ಉಯದಪುರದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗುತ್ತಾರೆ. ಕುಟುಂಬ ಮತ್ತು ಸ್ನೇಹಿತರ ಜೊತೆ ಈ ಜೋಡಿ ವಿವಾಹವಾಗುತ್ತಾರೆ.
/newsfirstlive-kannada/media/post_attachments/wp-content/uploads/2024/05/hardik-pandya-2-1.jpg)
ಆದರೀಗ ಈ ಜೋಡಿ ನಡುವೆ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಅದಕ್ಲೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಕೂಡ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಉತ್ತರ ಕ್ರಿಕೆಟಿಗ ಪಾಂಡ್ಯ ಮತ್ತು ಮಾಡೆಲ್​ ನತಾಶಾ ಉತ್ತರ ನೀಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us