/newsfirstlive-kannada/media/post_attachments/wp-content/uploads/2024/05/hardik-pandya-12.jpg)
ಹಾರ್ದಿಕ್ ಪಾಂಡ್ಯ ಮತ್ತು ನಟಾಶಾ ಸ್ಟಾಂಕೋವಿಕ್ ಡಿವೋರ್ಸ್ ಪಡೆದುಕೊಂಡು ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ವಿಚ್ಛೇದನದ ಹಿಂದಿನ ನಿಜವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ.
ಆದರೆ ಡಿವೋರ್ಸ್ ಸುದ್ದಿ ಹೊರಬೀಳುವ ಮುನ್ನವೇ ಪಾಂಡ್ಯ ಹೆಸರು ಇಬ್ಬರು ಹೆಣ್ಮಕ್ಕಳ ಜೊತೆ ತಳುಕು ಹಾಕಿಕೊಂಡಿದೆ. ರಷ್ಯಾದ ಮಾಡೆಲ್ ಎಲೆನಾ ಟುತೇಜಾ (Elena Tuteja) ಜೊತೆಗೆ ಪಾಂಡ್ಯ ಹೆಸರು ತಳುಕು ಹಾಕಿಕೊಂಡಿದೆ. ಜೊತೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಪಾಂಡ್ಯಾ ಅನನ್ಯಾ ಪಾಂಡೆ ಜೊತೆ ಕಾಣಿಸಿಕೊಂಡರು. ಹೀಗಾಗಿ ಈ ಇಬ್ಬರು ವ್ಯಕ್ತಿಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಭರ್ಜರಿ ಮಳೆ.. ಬೆಂಗಳೂರಿಗೆ ಬಿಸಿಲು ಬರೋದು ಯಾವಾಗ ಗೊತ್ತಾ..?
ಪಾಂಡ್ಯ ಮತ್ತು ನಟಾಶಾ ವಿಚ್ಛೇದನದ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಕಳೆದ ಗುರುವಾರದ ವರೆಗೂ ಇಬ್ಬರೂ ತುಟಿ ಪಿಟಿಕ್ ಎಂದಿರಲಿಲ್ಲ. ಈಗ ವಿಚ್ಛೇದನ ವಿಷಯ ದೃಢಪಟ್ಟಿದೆ. ಈ ನಡುವೆ ಪಾಂಡ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಪಾಂಡ್ಯ, ರಷ್ಯಾದ ಮಾಡೆಲ್ ಎಲೆನಾ ತುತೇಜಾ ಜೊತೆ ಕಾಣಿಸಿಕೊಂಡಿದ್ದರು. ಪಾಂಡ್ಯ ಜತೆಗಿನ ಸಂಬಂಧಕ್ಕೆ ಸಂಬಂಧಿಸಿ ಹಲವು ರೀತಿಯ ಪೋಸ್ಟ್‌ಗಳು ಹರಿದಾಡುತ್ತಿವೆ. ಪಾಂಡ್ಯ ಎಲೆನಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಇದನ್ನೂ ಓದಿ:ಗಂಭೀರ್ ಮೇಲೆ ಹಳೇ ದ್ವೇಷ ಸಾಧಿಸಿದ ಅನುಮಾನ.. 12 ವರ್ಷಗಳ ಹಿಂದಿನ ನಡೆಗೆ ಇಂದು ರಿವೇಂಜ್..!
ಇತ್ತೀಚೆಗಷ್ಟೇ ಅನಂತ್-ರಾಧಿಕಾ ಮದುವೆಯಲ್ಲಿ ಪಾಂಡ್ಯ ಪಾಲ್ಗೊಂಡಿದ್ದರು. ಈ ವೇಳೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಜೊತೆ ಡ್ಯಾನ್ಸ್ ಮಾಡಿದ್ದರು. ಎಲೆನಾ ತುತೇಜಾ ಜೊತೆ ಪಾಂಡ್ಯ ಹೆಸರೂ ಕೇಳಿಬರುತ್ತಿದೆ. ಪಾಂಡ್ಯ 2020ರಲ್ಲಿ ನಟಾಶಾ ಅವರನ್ನು ಮದುವೆ ಆಗಿದ್ದರು. ಇಬ್ಬರಿಗೂ ಒಬ್ಬ ಮಗನಿದ್ದಾನೆ. ಪತ್ರ ಅಗಸ್ತ್ಯನನ್ನು ಒಬ್ಬರೂ ನೋಡಿಕೊಳ್ಳಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ತಮ್ಮ ಜೈಲಿಗೆ ಹೋಗಿದ್ದಕ್ಕೆ ಅಮ್ಮ ನರಳಿ ನರಳಿ ಪ್ರಾಣಬಿಟ್ಟರು-ದರ್ಶನ್ ಕೇಸ್ನ ರಘು ಸಹೋದರಿ ಕಣ್ಣೀರು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್