Advertisment

ಪಾಂಡ್ಯ ಬದುಕು ಬದಲಿಸಿದ ಆ ಘಟನೆಯಾದ್ರೂ ಏನು.. ಸ್ಟಾರ್ ಆಲ್​ರೌಂಡರ್​ನ ಸಖತ್ ಸ್ಟೋರಿ!

author-image
Bheemappa
Updated On
ಪಾಂಡ್ಯ ಬದುಕು ಬದಲಿಸಿದ ಆ ಘಟನೆಯಾದ್ರೂ ಏನು.. ಸ್ಟಾರ್ ಆಲ್​ರೌಂಡರ್​ನ ಸಖತ್ ಸ್ಟೋರಿ!
Advertisment
  • ಟೀಮ್ ಇಂಡಿಯಾದ ಬಿಗ್ ಮ್ಯಾಚ್ ವಿನ್ನರ್ ಹಾರ್ದಿಕ್ ಪಾಂಡ್ಯ
  • ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಜೊತೆಗೆ ಲೆಗ್ ಸ್ಪಿನ್​​ ಮಾಡುತ್ತಿದ್ರಾ?
  • ಫಾಸ್ಟ್​ ಬೌಲಿಂಗ್ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿದ್ದು ಹೇಗೆ?

ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಬಿಗ್​ ಮ್ಯಾಚ್ ವಿನ್ನರ್ ಪ್ಲೇಯರ್. ಇವತ್ತು ಹಾರ್ದಿಕ್, ಸ್ಟಾರ್ ಆಲ್​ರೌಂಡರ್ ಆಗಿ ಬೆಳೆಯಲು ಕಾರಣ ಆ ಒಂದೇ ಒಂದು ಘಟನೆ. ಅವತ್ತು ಆ ಒಂದು ತಿರುವು ಪಡೆದುಕೊಳ್ಳಲಿಲ್ಲ ಟೀಮ್ ಇಂಡಿಯಾ ಎಂಟ್ರಿ ನಿಜಕ್ಕೂ ಸುಲಭವಾಗಿ ಇರ್ತಿರಲಿಲ್ಲ. ಹಾಗಾದ್ರೆ, ಪಾಂಡ್ಯ ಬದುಕು ಬದಲಿಸಿದ ಆ ಘಟನೆ ಏನು?.

Advertisment

publive-image

ಹಾರ್ದಿಕ್ ಪಾಂಡ್ಯ. ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್, ಟೀಮ್ ಇಂಡಿಯಾದ ಬಿಗ್ ಮ್ಯಾಚ್ ವಿನ್ನರ್. ಅದೆಷ್ಟೋ ಮ್ಯಾಚ್​​ಗಳನ್ನ ಸಿಂಗಲ್ ಹ್ಯಾಂಡ್​ನಲ್ಲೇ ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೆ, ಇವತ್ತು ಹಾರ್ದಿಕ್ ಯಶಸ್ವಿ ಫಾಸ್ಟ್​ ಬೌಲಿಂಗ್​​ ಆಲ್​ರೌಂಡರ್ ಆಗಿ ಬೆಳೆಯಲು ಒಂದೇ ಒಂದು ಘಟನೆ ಕಾರಣ.

ಇದನ್ನೂ ಓದಿ: ಕಿಚ್ಚ ಸುದೀಪ್​​ ಬಿಗ್​ಬಾಸ್​​ಗೆ ವಿದಾಯ; ಅಭಿಮಾನಿಗಳಿಗೆ ಭಾರೀ ಬೇಸರ, ಹೇಳ್ತಿರೋದು ಏನು..?

ಸೂರತ್​​ನಿಂದ ಬರೋಡಾಗೆ ಬಂದಿದ್ದ ಪಾಂಡ್ಯ ಬ್ರದರ್ಸ್​, ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಕಿರಣ್ ಮೋರ್ ಅಕಾಡೆಮಿಗೆ ಸೇರಿದ್ದರು. ಈ ಅಕಾಡೆಮಿಗೆ ಸೇರಿದಾಗ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಜೊತೆಗೆ ಲೆಗ್ ಸ್ಪಿನ್​​ ಬೌಲಿಂಗ್ ಮಾಡುತ್ತಿದ್ದರು. ಆದ್ರೆ, ಒಂದು ದಿನ ನೆಟ್​ ಸೆಷನ್​ನಲ್ಲಿ ಕೆಳ ಕ್ರಮಾಂಕದ ಆಟಗಾರರು ಬ್ಯಾಟಿಂಗ್​ ಅಭ್ಯಾಸ ನಡೆಸಬೇಕಾಗಿತ್ತು. ಅದಾಗಲೇ ವೇಗದ ಬೌಲರ್​ಗಳು, ಬೌಲಿಂಗ್ ನಡೆಸಿ ಸುಸ್ತಾಗಿದ್ದರು. ಈ ಕಾರಣಕ್ಕೆ ಕೋಚ್​ ಸನತ್​ ಕುಮಾರ್,​ ನೆಟ್ಸ್​ನಲ್ಲಿ ಬೌಲಿಂಗ್​ ಮಾಡುವಂತೆ ಹಾರ್ದಿಕ್​ ಪಾಂಡ್ಯಗೆ ಸೂಚಿಸಿದರು.

Advertisment

publive-image

ಈ ವೇಳೆ ವೇಗದ ಬೌಲಿಂಗ್​ ಮಾಡಿದ ಹಾರ್ದಿಕ್, ಗಂಟೆಗೆ 130 ಕಿ.ಮೀ ವೇಗದಲ್ಲಿ ಚೆಂಡನ್ನ ಎಸೆದಿದ್ದರು. ಇದಾದ ಬಳಿಕ ಕೋಚ್​ ಸನತ್ ಕುಮಾರ್ ಪಾಂಡ್ಯಗೆ ವೇಗದ ಬೌಲಿಂಗ್​ ತರಬೇತಿ ನೀಡಲಾರಂಭಿಸಿದರು. ಇದರ ಫಲಿತಾಂಶವಾಗಿ 2009ರ ಅಂಡರ್-19 ಕೂಚ್ ಬಿಹಾರ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪಾಂಡ್ಯ, ಫಾಸ್ಟ್​ ಬೌಲಿಂಗ್ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿದ್ದು ಅಲ್ಲದೇ ಟೀಮ್ ಇಂಡಿಯಾಗೂ ಎಂಟ್ರಿ ಕೊಡುವಂತೆ ಆಯಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment