/newsfirstlive-kannada/media/post_attachments/wp-content/uploads/2024/07/HARDIK-PANDYA-12.jpg)
ಕುಬೇರ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಮದುವೆ ಕಾರ್ಯಕ್ರಮ ನಡೆದಿದೆ.
ಈ ಅದ್ದೂರಿ ಮದುವೆಗೆ ಭಾರತ ಮತ್ತು ವಿದೇಶಗಳಿಂದ ಅತಿಥಿಗಳು ಆಗಮಿಸಿದ್ದರು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕುಣಿದು ಕುಪ್ಪಳಿಸಿದ್ದು, ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಮಿಸ್ಟ್ರಿ ಗರ್ಲ್ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್? ಮಾರ್ಮಿಕವಾಗಿ ಟಾಂಗ್ ಕೊಟ್ಟ ನಟಾಶಾ..!
Hardik Pandya showing his dancing shoes with Ananya Pandey. 😄pic.twitter.com/YTdrNcCCXS
— Mufaddal Vohra (@mufaddal_vohra) July 12, 2024
ಸಹೋದರ ಮತ್ತು ಅತ್ತಿಗೆಯೊಂದಿಗೆ ಪಾಂಡ್ಯ ಮದುವೆಗೆ ಆಗಮಿಸಿದ್ದರು. ತಿಳಿ ಗುಲಾಬಿ ಬಣ್ಣದ ಕುರ್ತಾ ಧರಿಸಿದ್ದ ಪಾಂಡ್ಯ ತುಂಬಾ ಡ್ಯಾಶಿಂಗ್ ಆಗಿ ಕಾಣುತ್ತಿದ್ದರು. ಮದುವೆಯಲ್ಲಿ ಬಾಲಿವುಡ್ ನಟಿ ಅನನ್ಯ ಪಾಂಡೆ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಪಾಂಡ್ಯ ತಮ್ಮ ಸ್ನೇಹಿತರೊಂದಿಗೆ ಖುಷಿಯಿಂದ ನೆಲದ ಮೇಲೆ ಮಲಗಿ ಡ್ಯಾನ್ಸ್ ಮಾಡ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದು. ರಣವೀರ್ ಸಿಂಗ್ ಕೂಡ ಪಾಂಡ್ಯಗೆ ಸಖತ್ ಸಾಥ್ ನೀಡಿದ್ದಾರೆ.
View this post on Instagram
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್