/newsfirstlive-kannada/media/post_attachments/wp-content/uploads/2024/07/Hardik_Rahul.jpg)
ಇತ್ತೀಚೆಗೆ ನಡೆದ ಐದು ಟಿ20 ಪಂದ್ಯಗಳ ಸೀರೀಸ್ನಲ್ಲಿ ಶುಭ್ಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ಆತಿಥೇಯ ಜಿಂಬಾಬ್ವೆ ತಂಡವನ್ನು 4-1 ಅಂತರದಿಂದ ಸೋಲಿಸಿ ಸರಣಿ ಕೈವಶ ಮಾಡಿಕೊಂಡಿದೆ. ಈ ಬೆನ್ನಲ್ಲೇ ಸದ್ಯದಲ್ಲೇ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.
ಇನ್ನು, ಜೂನ್ 27ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯಿಂದ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಬುಮ್ರಾಗೆ ರೆಸ್ಟ್ ನೀಡಲಾಗಿದೆ. ಹಾಗಾಗಿ ರೋಹಿತ್ ಅನುಪಸ್ಥಿತಿಯಲ್ಲಿ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ಕೆ.ಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್ಗೂ ಪ್ರತ್ಯೇಕ ನಾಯಕರನ್ನು ನೇಮಿಸೋ ಪ್ಲಾನ್ ಕೋಚ್ ಗೌತಮ್ ಗಂಭೀರ್ ಅವರದ್ದು.
Hardik pandya doesn't want to play under KL Rahul in ODIs that's why he opted out from ODI series with an excuse
As of Now Indian team is looking for different white ball Captains for the future but he want Captaincy in both formats
Let's see how it goes further#INDvsSLpic.twitter.com/2UZMDmSqEr
— ???? ✨ (@KLfied_)
Hardik pandya doesn't want to play under KL Rahul in ODIs that's why he opted out from ODI series with an excuse
As of Now Indian team is looking for different white ball Captains for the future but he want Captaincy in both formats
Let's see how it goes further#INDvsSLpic.twitter.com/2UZMDmSqEr— 𝙎. (@KLfied_) July 16, 2024
">July 16, 2024
ಮೊದಲು ಟಿ20 ಮತ್ತು ಏಕದಿನ ಕ್ರಿಕೆಟ್ನಲ್ಲೂ ಟೀಮ್ ಇಂಡಿಯಾ ಕ್ಯಾಪ್ಟನ್ ಆಗೋ ರೇಸ್ನಲ್ಲಿದ್ದರು ಹಾರ್ದಿಕ್ ಪಾಂಡ್ಯ. ಯಾವಾಗ ಟಿ20 ತಂಡಕ್ಕೆ ಮಾತ್ರ ನೀವು ಕ್ಯಾಪ್ಟನ್, ಏಕದಿನ ಮಾದರಿಯಲ್ಲಿ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸೆಲೆಕ್ಟರ್ಸ್ ಪಾಂಡ್ಯಗೆ ಹೇಳಿದ್ರೋ ಆಗಲೇ ಶುರುವಾಗಿದ್ದು ಸಮಸ್ಯೆ. ಈಗ ಹಾರ್ದಿಕ್ ಪಾಂಡ್ಯ ತನಗೆ ರಾಹುಲ್ ನಾಯಕತ್ವದಲ್ಲಿ ಆಡಲು ಇಷ್ಟವಿಲ್ಲ, ಹಾಗಾಗಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಿ ಎಂದು ಕೇಳಿಕೊಂಡಿದ್ದಾರಂತೆ. ಈ ವಿಚಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇದನ್ನೂ ಓದಿ:ಲಂಕಾ ವಿರುದ್ಧದ ODI ಪಂದ್ಯ ನಾನು ಆಡಲ್ಲ -ಗಂಭೀರ್ಗೆ ಬಿಗ್ ಶಾಕ್ ಕೊಟ್ಟ ಪಾಂಡ್ಯ.. ಆಗಿದ್ದೇನು..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್