/newsfirstlive-kannada/media/post_attachments/wp-content/uploads/2024/07/HARDIK-PANDYA-13.jpg)
ಟಿ-20 ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಜಬರ್ದಸ್ತ್ ಪ್ರದರ್ಶನ ನೀಡಿದ್ದರು. ಟಿ-20 ವಿಶ್ವಕಪ್ ಗೆಲ್ಲಲು ಪಾಂಡ್ಯ ಅವರ ಅದ್ಭುತ ಪ್ರದರ್ಶನ ಕೂಡ ಹೌದು. ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತ ತಂಡ ಜಿಂಬಾಬ್ವೆ ಪ್ರವಾಸ ಮುಗಿಸಿ ಲಂಕಾ ಪ್ರವಾಸಕ್ಕೆ ಅಣಿಯಾಗ್ತಿದೆ.
ಶಾಕಿಂಗ್ ವಿಚಾರ ಏನೆಂದರೆ ಹಾರ್ದಿಕ್ ಪಾಂಡ್ಯ ಲಂಕಾ ಪ್ರವಾಸಕ್ಕೆ ಬರಲ್ಲ ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ.. ಪಾಂಡ್ಯ ಅವರು ವೈಯಕ್ತಿಕ ಕಾರಣಗಳಿಂದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಆಡುವುದಿಲ್ಲ ಎಂದು ತಿಳಿಸಿದ್ದಾರಂತೆ.
ಇದನ್ನೂ ಓದಿ: ಆರ್ಸಿಬಿಯಲ್ಲಿ ಸ್ಟಾರ್ ಆಟಗಾರರಿಗೆ ಮಾತ್ರ ಬೆಲೆ, ನಮಗೆ ಕಿಮ್ಮತ್ತೇ ಇರಲಿಲ್ಲ- RCB ಮಾಜಿ ಪ್ಲೇಯರ್ ಆಕ್ರೋಶ
ಫಿಟ್ನೆಸ್ ಕಾರಣದಿಂದಾಗಿ ಹಾರ್ದಿಕ್ ಏಕದಿನ ಸರಣಿಯಿಂದ ಹೊರಗುಳಿಯಬಹುದು ಎನ್ನಲಾಗುತ್ತಿದೆ. ಏಕದಿನ ಸರಣಿಯ ಬಗ್ಗೆ ಮಾತ್ರ ಪಾಂಡ್ಯ ಆಡಲ್ಲ ಎನ್ನಲಾಗಿದೆ. ಏಕದಿನ ಪಾಂಡ್ಯ ಜೊತೆಗೆ ಟಿ-20 ಸರಣಿ ಕೂಡ ನಡೆಯಲಿದೆ. ಇದು ಸೂಕ್ಷ್ಮ ವಿಷಯ. ಎರಡು ಕಡೆಯಿಂದ ಚರ್ಚೆ ಆಗ್ತಿದೆ. ಹಾರ್ದಿಕ್ಗೆ ಫಿಟ್ನೆಸ್ ಸಮಸ್ಯೆ ಆಗಿದೆ. ಆದರೆ ಈ ಬಗ್ಗೆ ಅಧಿಕೃತ ವರದಿ ಇಲ್ಲ.
ಲಂಕಾ ಪ್ರವಾಸ ಯಾವಾಗ?
ಜುಲೈ 27 ರಿಂದ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸವನ್ನು ಪ್ರಾರಂಭಿಸಲಿದೆ. ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 27, ಜುಲೈ 28 ಮತ್ತು ಜುಲೈ 30 ರಂದು ನಡೆಯಲಿದೆ. ಆಗಸ್ಟ್ 02 ರಿಂದ ಏಕದಿನ ಸರಣಿ ಆರಂಭವಾಗಲಿದೆ. ನಂತರ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳು ಆಗಸ್ಟ್ 04 ಮತ್ತು ಆಗಸ್ಟ್ 07 ರಂದು ನಡೆಯಲಿದೆ.
ಇದನ್ನೂ ಓದಿ:ರೋಹಿತ್, ರಾಹುಲ್ರನ್ನೇ ಸೈಡಿಗೆ ನಿಲ್ಲಿಸಿದ ಜೈಸ್ವಾಲ್.. ಈ ಯಂಗ್ಗನ್ನ ಸ್ಪೆಷಲ್ಲೇ ಬೇರೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್