Advertisment

ಹಾರ್ದಿಕ್​ ಪಾಂಡ್ಯ ಮಾಜಿ ಪತ್ನಿ ನತಾಶ ಮಾಡಿದ್ದೇನು, ಫ್ಯಾನ್ಸ್​ ಆಕ್ರೋಶಕ್ಕೆ ಕಾರಣ?

author-image
Bheemappa
Updated On
ಹಾರ್ದಿಕ್​ ಪಾಂಡ್ಯ ಮಾಜಿ ಪತ್ನಿ ನತಾಶ ಮಾಡಿದ್ದೇನು, ಫ್ಯಾನ್ಸ್​ ಆಕ್ರೋಶಕ್ಕೆ ಕಾರಣ?
Advertisment
  • ಸ್ಟಾಂಕೋವಿಕ್ ಜತೆಗಿರುವ ಅಲೆಕ್ಸಾಂಡರ್​ ಲಿಕ್​ ಯಾರು.?
  • ಹೊಸ ಹುಡುಗನ ಜೊತೆಗೆ ಸರ್ಬಿಯಾ ಬೆಡಗಿಯ ಸುತ್ತಾಟ
  • ನತಾಶ ಸ್ಟಾಂಕೋವಿಕ್, ಪಾಂಡ್ಯ​​​ ದಾಂಪತ್ಯ ಬಿರುಕಿಗೆ ಕಾರಣ? ​

ಹಾರ್ದಿಕ್​ ಪಾಂಡ್ಯ ಮಾಜಿ ಪತ್ನಿ ನತಾಶ ಸ್ಟಾಂಕೋವಿಕ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೆಂಡಿಂಗ್​ನಲ್ಲಿದ್ದಾರೆ. ಹಾರ್ದಿಕ್​ ಪಾಂಡ್ಯ ಫ್ಯಾನ್ಸ್​ ಅಂತೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸರ್ಬಿಯಾ ಬೆಡಗಿಯನ್ನ ಮೋಸಗಾತಿ ಎಂದೇ ಕೂಗುತ್ತಿದ್ದಾರೆ. ಅಷ್ಟಕ್ಕೂ ಹಾರ್ದಿಕ್​ ಅವರ ಮಾಜಿ ಪತ್ನಿ ನತಾಶ ಮಾಡಿದ್ದೇನು, ಫ್ಯಾನ್ಸ್​ ಆಕ್ರೋಶಕ್ಕೆ ಕಾರಣ ಏನು?.

Advertisment

ಜಂಟಿಯಾಗಿದ್ದ ಟೀಮ್​ ಇಂಡಿಯಾ ಆಲ್​​ರೌಂಡರ್ ಹಾರ್ದಿಕ್​ ಪಾಂಡ್ಯ​​ ಒಂಟಿಯಾಗಿ 5 ತಿಂಗಳುಗಳೇ ಉರುಳಿದ್ದವು. ಬಹುವಾಗಿ ಪ್ರೀತಿಸಿ, ಇಷ್ಟಪಟ್ಟು ವಿವಾಹವಾದ ನತಾಶ ಸ್ಟಾಂಕೋವಿಕ್​ ದೂರಾದ ಹತಾಶೆ, ಬೇಸರ ಹಾರ್ದಿಕ್​ರನ್ನ ಇಂದಿಗೂ ಕಾಡುತ್ತಿದೆ. ಪ್ರತಿ ಹೆಜ್ಜೆಯಲ್ಲೂ ಹಾರ್ದಿಕ್​ ಮನದಲ್ಲಿರೋ ನೋವು ಜಗತ್ತಿಗೆ ಗೊತ್ತಾಗುತ್ತಿದೆ. ಇಷ್ಟಪಟ್ಟ ಜೀವ ದೂರಾದ ಬೇಸರದಲ್ಲೇ ಪಾಂಡ್ಯ ದಿನದೂಡುತ್ತಿದ್ದಾರೆ. ಆದ್ರೆ, ಅತ್ತ ನತಾಶ ಫುಲ್​ ಜಾಲಿ ಮೂಡ್​ನಲ್ಲಿ ಮಸ್ತಿ ಮಾಡ್ತಿದ್ದಾರೆ.

ಇದನ್ನೂ ಓದಿ: ಪಾಂಡ್ಯ ಬದುಕು ಬದಲಿಸಿದ ಆ ಘಟನೆಯಾದ್ರೂ ಏನು.. ಸ್ಟಾರ್ ಆಲ್​ರೌಂಡರ್​ನ ಸಖತ್ ಸ್ಟೋರಿ!

publive-image

ಅಲೆಕ್ಸಾಂಡರ್​ ಲಿಕ್​​​​ ಜೊತೆಗೆ ನತಾಶ ಫುಲ್​ ಮೋಜು-ಮಸ್ತಿ.!

ಅನ್ಯೋನ್ಯವಾಗಿದ್ದ ಹಾರ್ದಿಕ್​​ ಪಾಂಡ್ಯ ಹಾಗೂ ನತಾಶ ಜೀವನದಲ್ಲಿ ಬಿರುಗಾಳಿ ಎದ್ದಿದ್ದೇಕೆ, ಇಬ್ಬರ ಡಿವೋರ್ಸ್​ಗೆ ಕಾರಣ ಯಾರು, ತಪ್ಪು ಪಾಂಡ್ಯದಾ ಅಥವಾ ನತಾಶಾದಾ ಈ ಪ್ರಶ್ನೆಗಳು ಡಿವೋರ್ಸ್​ ಬಳಿಕ ಎಲ್ಲರನ್ನೂ ಕಾಡಿದ್ದವು. ಇದೀಗ ಫ್ಯಾನ್ಸ್​ ನತಾಶನೇ ದಾಂಪತ್ಯದ ಬಿರುಕಿಗೆ ಕಾರಣ ಎಂದು ಬೊಟ್ಟು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ.

Advertisment

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹಲ್​ ಚಲ್​ ಎಬ್ಬಿಸಿರುವ ವಿಡಿಯೋ ಎಲ್ಲದಕ್ಕೂ ಉತ್ತರ ಹೇಳುತ್ತಿದೆ. ಇವರಿಬ್ಬರ ಈ ಕ್ಲೋಸ್​​ನೆಸ್​ನ ನೋಡಿ. ನತಾಶ ಹಾಕಿಕೊಂಡಿರೋ ಬಟ್ಟೆಯನ್ನೇ ಹೋಲಿಯೋದು, ಸೀರೆ ಉಡಿಸೋದು ಎಂತಾ ಆತ್ಮೀಯತೆ. ಏನು ಆಪ್ತತೆ. ಗಂಡ-ಹೆಂಡತಿಯರೂ ಹೀಗೆ ಇರ್ತಾರೋ, ಇಲ್ವೋ ಅನಿಸುತ್ತದೆ.

ಅಂದ್ಹಾಗೆ ನತಾಶ ಜೊತೆಗಿರೋ ರೂಮರ್ಡ್​ ಬಾಯ್​ಫ್ರೆಂಡ್​ ಹೆಸರು ಅಲೆಕ್ಸಾಂಡರ್​ ಲಿಕ್​ ಅಂತ. ಸರ್ಬಿಯಾದ ನಟ ಹಾಗೂ ಮಾಡೆಲ್​. ಈ ಸ್ಯಾರಿ ಉಡಿಸೋ ವಿಡಿಯೋ ನೋಡಿ ಫ್ಯಾನ್ಸ್​ ನತಾಶನೇ ಡಿವೋರ್ಸ್​ಗೆ ಕಾರಣ ಅನ್ನೋ ತಿರ್ಮಾನಕ್ಕೆ ಬಂದಿಲ್ಲ. ಇವರಿಬ್ಬರ ಇನ್ನೂ ಹಲವು ವಿಡಿಯೋಗಳು ಫ್ಯಾನ್ಸ್​ ನಿರ್ಧಾರಕ್ಕೆ ಕಾರಣವಾಗಿವೆ. ಸ್ಯಾರಿ ಉಡಿಸೋದನ್ನ ಇಬ್ಬರೂ ಡಾನ್ಸ್​ ಮಾಡಿ ಒಂದು ರೀಲ್ಸ್​ ಕೂಡ ಮಾಡಿದ್ದಾರೆ.

ಡಿವೊರ್ಸ್​ ರೂಮರ್ಸ್​ ನಡುವೆ ಅಲೆಕ್ಸ್​​ ಜೊತೆ ಸುತ್ತಾಟ

ಆಗಿನ್ನೂ ಹಾರ್ದಿಕ್​- ನತಾಶ ದಾಂಪತ್ಯ ಜೀವನದಲ್ಲಿ ಎಲ್ಲಾ ಸರಿಯಿಲ್ಲಾ ಅನ್ನೋ ರೂಮರ್ಸ್​ ಹಬ್ಬಿತ್ತು. ಆ ಸಮಯದಲ್ಲೇ ನತಾಶ, ಅಲೆಕ್ಸಾಂಡರ್​ ಲಿಕ್​ ಜೊತೆಗೆ ಕಾಣಿಸಿಕೊಂಡಿದ್ರು. ಇವರಿಬ್ಬರ ಆಗಿನ ಸುತ್ತಾಟದ ವಿಡಿಯೋ ಸಖತ್​ ವೈರಲ್​ ಆಗಿತ್ತು. ಆಗಲೇ ನತಾಶ ನಡೆಯ ಬಗ್ಗೆ ಫ್ಯಾನ್ಸ್​ ಅನುಮಾನ ವ್ಯಕ್ತಪಡಿಸಿದ್ರು.

Advertisment

ಸರ್ಬಿಯಾದಿಂದ ವಾಪಾಸ್ಸಾದ ಬಳಿಕ ಒಟ್ಟಾಗಿ ಓಡಾಟ

ಹಾರ್ದಿಕ್​ ಜೊತೆ ಡಿವೋರ್ಸ್​ ಆದ ಬೆನ್ನಲ್ಲೇ ಸರ್ಬಿಯಾಗೆ ಹಾರಿದ್ದ ನತಾಶ, ಕಳೆದ ತಿಂಗಳು ಭಾರತಕ್ಕೆ ವಾಪಾಸ್ಸಾಗಿದ್ರು. ವಾಪಾಸ್ಸಾದ ಬೆನ್ನಲ್ಲೇ ಮಗನನ್ನ ಹಾರ್ದಿಕ್​ ಕುಟುಂಬಸ್ಥರಿಗೆ ನೀಡಿದ ನತಾಶ, ಕೆಲವೇ ಸಮಯದಲ್ಲಿ ಬಾಯ್​ ಫ್ರೆಂಡ್​ ಜೊತೆಗೆ ಓಡಾಟ ನಡೆಸಿದರು.

ಇದನ್ನೂ ಓದಿ: IND vs SA: ಇಬ್ಬರು ಆರ್​ಸಿಬಿ ಬೌಲರ್​ ಪದಾರ್ಪಣೆ.. ಯಾರು ಅವರು..?

publive-image

ಸ್ವಿಮ್ಮಿಂಗ್​ಪೂಲ್​ನಲ್ಲಿ ಬಾಯ್​​ಫ್ರೆಂಡ್ ಜೊತೆ ಮಸ್ತಿ

ಇಷ್ಟೇ ಅಲ್ಲ.. ಜಾಲಿ ಮೂಡ್​ನಲ್ಲಿ ಸ್ವಿಮ್ಮಿಂಗ್​ಫೂಲ್​ನಲ್ಲೂ ಅಲೆಕ್ಸಾಂಡರ್​ ಹಾಗೂ ನತಾಶ ಕಾಣಿಸಿಕೊಂಡಿದ್ದರು. ಈ ವೇಳೆ ನತಾಶನ ನೀರಿಗೆ ತಳ್ಳಿ ಅಲೆಕ್ಸಾಂಡೆರ್​ ಮಸ್ತಿ ಮಾಡಿದರು. ಇಷ್ಟೇ ಅಲ್ಲ.. ಕೆಲ ದಿನಗಳ ಹಿಂದೆ ಒಂದು ಪಾರ್ಟಿಯಲ್ಲೂ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಈ ಸಾಲು ಸಾಲು ವಿಡಿಯೋಗಳೇ ನತಾಶ ನಡೆ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿವೆ. ದಾಂಪತ್ಯದ ಬಿರುಕಿಗೆ ನತಾಶನೇ ಕಾರಣ ಎಂಬ ಆರೋಪಗಳು ಫ್ಯಾನ್ಸ್​ ವಲಯದಿಂದ ಕೇಳಿ ಬರುತ್ತಿವೆ. ಜೊತೆಗೆ ಈ ವಿಡಿಯೋಗಳನ್ನ ಸ್ವತಃ ಅಲೆಕ್ಸಾಂಡೆರ್​ ಲಿಕ್​ ಹಂಚಿಕೊಂಡಿರೋದ್ರಿಂದ ಅಭಿಮಾನಿಗಳ ಸಂಶಯ ಸತ್ಯ ಅನ್ನೋ ಮಾತುಗಳು ಹರಿದಾಡುತ್ತಿವೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment