/newsfirstlive-kannada/media/post_attachments/wp-content/uploads/2025/03/HARDIK_PANDYA.jpg)
ಮುಂಬೈ ಇಂಡಿಯನ್ಸ್​ಗೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿರುತ್ತದೆ. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮಾತ್ರ ಇದರಿಂದ ಯಾವ ರೀತಿಯಲ್ಲಿ ಹೊರ ಬರಬೇಕೆಂದು ಆಲೋಚನೆಯಲ್ಲಿದ್ದಾರೆ ಎನ್ನಬಹುದು. ಏಕೆಂದರೆ ಗುಜರಾತ್​ ಟೈಟನ್ಸ್​ ವಿರುದ್ಧದ ಐಪಿಎಲ್​ ಪಂದ್ಯ ಸೋತಿರುವ ನೋವಲ್ಲಿರುವ ಹಾರ್ದಿಕ್ ಪಾಂಡ್ಯಗೆ ಈಗ ದಂಡ ಕೂಡ ಹಾಕಲಾಗಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಹಾರ್ದಿಕ್ ಪಾಂಡ್ಯ ಎದುರಾಳಿಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಆದರೆ ಮುಂಬೈ ಇಂಡಿಯನ್ಸ್​ ಯೋಜನೆಗಿಂತ ಗುಜರಾತ್​ ಟೈಟನ್ಸ್​ 197 ರನ್​ಗಳ ದೊಡ್ಡ ಮೊತ್ತದ ಟಾರ್ಗೆಟ್ ನೀಡಿತು. ಗುಜರಾತ್ ಬ್ಯಾಟಿಂಗ್ ಮಾಡುವಾಗ ಮುಂಬೈ ಇಂಡಿಯನ್ಸ್​ ತಂಡ ನಿಧಾನವಾಗಿ ಬೌಲಿಂಗ್ ಮಾಡಿ ಸಮಯ ವ್ಯರ್ಥ ಮಾಡಿದೆ ಎನ್ನಲಾಗಿದೆ.
ಐಪಿಎಲ್​ ನಿಯಮದಂತೆ ಒಂದು ಇನ್ನಿಂಗ್ಸ್​ನ 20 ಓವರ್​ಗಳನ್ನು 1 ಗಂಟೆ 30 ನಿಮಿಷದಲ್ಲಿ ಪೂರ್ಣಗೊಳಿಸಬೇಕು. ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡು ಬೌಲಿಂಗ್ ಮಾಡಿದರೆ ಆ ತಂಡದ ಕ್ಯಾಪ್ಟನ್​ಗೆ ದಂಡ ವಿಧಿಸಲಾಗುತ್ತದೆ. ಕೆಲವೊಮ್ಮೆ ಶಿಕ್ಷೆಯಂತೆ ಫೀಲ್ಡಿಂಗ್ ಮಾಡುವಾಗ 11 ಪ್ಲೇಯರ್ಸ್​ಗಳಲ್ಲಿ ಒಬ್ಬ ಪ್ಲೇಯರ್​​ ಅನ್ನು ಕಡಿತ ಮಾಡಲಾಗುತ್ತದೆ. ಸದ್ಯ ಗುಜರಾತ್ ಟೈಟನ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಸ್ಲೋ ಓವರ್​ ರೇಟ್ ಮಾಡಿದ್ದರಿಂದ ನಾಯಕ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
2024ರಲ್ಲೂ ಗುಜರಾತ್​ ಟೈಟನ್ಸ್​ ಜೊತೆ ಆಡುವಾಗ ಇದೇ ರೀತಿ ಮಾಡಿದ್ದಕ್ಕಾಗಿ ಮೊದಲ ಪಂದ್ಯದಿಂದ ಹಾರ್ದಿಕ್ ಪಾಂಡ್ಯರನ್ನು ನಿಷೇಧ ಮಾಡಲಾಗಿತ್ತು. ಇದೀಗ ಮತ್ತೆ ಅಂತಹದ್ದೇ ತಪ್ಪು ಮಾಡಿರುವ ಪಾಂಡ್ಯ 12 ಲಕ್ಷ ರೂಪಾಯಿಗಳ ದಂಡ ಪಾವತಿ ಮಾಡಬೇಕಾಗಿದೆ. ಮಾಧ್ಯಮದವರ ಜೊತೆ ಮಾತನಾಡುವಾಗ ಪಾಂಡ್ಯ ಅವರು ಸ್ಲೋ ಓವರ್ ರೇಟ್​​ನಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ರ್ಯಾಂಕಿಂಗ್​ನಲ್ಲಿ ಮುಂಬೈ ಇಂಡಿಯನ್ಸ್​ 2ಕ್ಕೂ ಎರಡು ಪಂದ್ಯಗಳನ್ನು ಸೋತು 9ನೇ ಸ್ಥಾನದಲ್ಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ