ಟೀಮ್ ಇಂಡಿಯಾದ ಯುವ ಆಟಗಾರ್ತಿಗೆ ಬ್ಯಾಟ್​ ಗಿಫ್ಟ್ ಮಾಡಿದ ಹಾರ್ದಿಕ್ ಪಾಂಡ್ಯ​.. ಈಕೆ ಯಾರು? -Video

author-image
Bheemappa
Updated On
ಟೀಮ್ ಇಂಡಿಯಾದ ಯುವ ಆಟಗಾರ್ತಿಗೆ ಬ್ಯಾಟ್​ ಗಿಫ್ಟ್ ಮಾಡಿದ ಹಾರ್ದಿಕ್ ಪಾಂಡ್ಯ​.. ಈಕೆ ಯಾರು? -Video
Advertisment
  • ಹಾರ್ದಿಕ್ ಪಾಂಡ್ಯ ಕೊಟ್ಟಿರುವ ಬ್ಯಾಟ್ ಎಷ್ಟು ತೂಕ ಇದೆ?
  • ಮುಂಬೈ ತಂಡದ ಕ್ಯಾಪ್ಟನ್​​ನಿಂದ ಬ್ಯಾಟ್ ಪಡೆದ ಪ್ಲೇಯರ್​
  • ಡಬ್ಲುಪಿಎಲ್​ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆಟಗಾರ್ತಿ

ಐಪಿಎಲ್ ಆರಂಭದಿಂದಲೂ ಮುಂಬೈ ಇಂಡಿಯನ್ಸ್ ತಂಡ ಮಾತ್ರ ಪಂದ್ಯ ಗೆಲ್ಲಲು ಹರಸಾಹಸ ಮಾಡುತ್ತಿದೆ. ನಾಯಕ ಹಾರ್ದಿಕ್ ಪಾಂಡ್ಯ ಮಾತ್ರ ಸಿಡಿಲಬ್ಬರದ ಬ್ಯಾಟಿಂಗ್, ಮಿಂಚಿನ ಬೌಲಿಂಗ್ ಮಾಡಿದರೂ ಗೆಲ್ಲುವ ಹಂತಕ್ಕೆ ಬಂದು ತಂಡ ಸೋಲುತ್ತಿದೆ. ಸದ್ಯ ಐಪಿಎಲ್​ನಲ್ಲಿ ಬ್ಯುಸಿ ಇರುವ ಹಾರ್ದಿಕ್ ಪಾಂಡ್ಯ ಅವರು, ತನ್ನನ್ನು ಆದರ್ಶವಾಗಿ ತೆಗೆದುಕೊಂಡ ಮಹಿಳಾ ಆಟಗಾರ್ತಿಗೆ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ನ ಉದಯೋನ್ಮುಖ ತಾರೆ ಕಾಶ್ವಿ ಗೌತಮ್, ಡಬ್ಲುಪಿಎಲ್​ನಲ್ಲಿ ಅಮೋಘವಾದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ಆಟಗಾರ್ತಿ. ಅತ್ಯುತ್ತಮ ಪ್ರದರ್ಶನ ಹಿನ್ನೆಲೆಯಲ್ಲಿ ಕಾಶ್ವಿ ಗೌತಮ್ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಯುವ ಆಟಗಾರ್ತಿಗೆ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್, ಬ್ಯಾಟಿಂಗ್ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ಕ್ರಿಕೆಟ್​ನಲ್ಲಿ ಪಾಂಡ್ಯರನ್ನೇ ತನ್ನ ಆರಾಧ್ಯ ದೈವ ಎಂದು ಕಾಶ್ವಿ ಭಾವಿಸಿದ್ದಾರೆ.

ಇದನ್ನೂ ಓದಿ:ಕನ್ನಡಿಗನಿಗೆ ಬಿಗ್ ಶಾಕ್​; ಟಾಸ್ ಗೆದ್ದ RCB ಪ್ಲೇಯಿಂಗ್​- 11ರಲ್ಲಿ ಯಾರಿಗೆಲ್ಲಾ ಸ್ಥಾನ? ​

publive-image

ಮುಂದಿನ ತಿಂಗಳಿನಿಂದ ಶ್ರೀಲಂಕಾದಲ್ಲಿ ನಡೆಯುವ ತ್ರಿಕೋನ ಸರಣಿಗೆ ಟೀಮ್ ಇಂಡಿಯಾದಲ್ಲಿ ಕಾಶ್ವಿ ಗೌತಮ್ ಸ್ಥಾನ ಪಡೆದಿದ್ದಾರೆ. 2025ರ ಡಬ್ಲುಪಿಎಲ್​ನಲ್ಲಿ ಗುಜರಾತ್ ಜೈಂಟ್ಸ್ ತಂಡದಲ್ಲಿ ಆಡಿದ್ದ ಈಕೆ ಅತಿ ಹೆಚ್ಚು ವಿಕೆಟ್ (11)​ ಪಡೆದ ಆಟಗಾರ್ತಿ ಎನಿಸಿದ್ದಾರೆ. ಇನ್ನು ಇಂದು ಐಪಿಎಲ್ ಡಬಲ್​ ಹೆಡ್ಡರ್ ಮ್ಯಾಚ್​ಗಳು ನಡೆಯುತ್ತಿವೆ. 2ನೇ ಪಂದ್ಯ ಸಂಜೆ 7:30ಕ್ಕೆ ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಸೆಣಸಾಟ ನಡೆಸಲಿವೆ.

ಈ ಹಿನ್ನೆಲೆಯಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ಅಭ್ಯಾಸ ಮಾಡುವಾಗ ಕಾಶ್ವಿ ಗೌತಮ್ ಎಂಟ್ರಿ ಕೊಟ್ಟಿದ್ದಾರೆ. ಕಾಶ್ವಿ ಗೌತಮ್ ಮೈದಾನಕ್ಕೆ ಬಂದ ಹಿನ್ನೆಲೆಯಲ್ಲಿ ಪಾಂಡ್ಯ ಅಭ್ಯಾಸ ಬಿಟ್ಟು ಬಂದು ಸ್ನೇಹದಿಂದ ಆಟಗಾರ್ತಿಯನ್ನ ಮಾತನಾಡಿಸಿದ್ದಾರೆ. ಇದೇ ವೇಳೆ ಯುವ ಆಟಗಾರ್ತಿ ಆಲ್​​ರೌಂಡರ್​ ಆಗಿದ್ದರಿಂದ ಬ್ಯಾಟ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಬ್ಯಾಟ್ ಪಡೆದುಕೊಂಡ ಕಾಶ್ವಿ ಗೌತಮ್ ಫುಲ್ ಹ್ಯಾಪಿಯಾಗಿದ್ದಾರೆ. ಇನ್ನು ಈ ಬ್ಯಾಟ್ 1100 ಗ್ರಾಂ ಇದೆ ಎಂದು ಹೇಳಲಾಗುತ್ತಿದೆ.


">April 13, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment