ನನ್ನ ಬಳಿ ಹೆಚ್ಚು ಆಯ್ಕೆಗಳಿಲ್ಲ, ಸೋಲಿಗೆ ಹೊಣೆ ಯಾರು ಅಂತಾ ತಿಳಿಸಿದ ಹಾರ್ದಿಕ್ ಪಾಂಡ್ಯ

author-image
Ganesh
Updated On
ನನ್ನ ಬಳಿ ಹೆಚ್ಚು ಆಯ್ಕೆಗಳಿಲ್ಲ, ಸೋಲಿಗೆ ಹೊಣೆ ಯಾರು ಅಂತಾ ತಿಳಿಸಿದ ಹಾರ್ದಿಕ್ ಪಾಂಡ್ಯ
Advertisment
  • LSG ವಿರುದ್ಧ ಸೋಲು ಮುಂಬೈ ಇಂಡಿಯನ್ಸ್​ಗೆ ಸೋಲು
  • ಸೋಲುತ್ತಿದ್ದಂತೆಯೇ ನಿರಾಸೆಗೊಂಡ ಕ್ಯಾಪ್ಟನ್ ಪಾಂಡ್ಯ
  • ಮುಂಬೈ ಇಂಡಿಯನ್ಸ್​ ಸೋಲಿಕೆ ಪಾಂಡ್ಯ ಕೊಟ್ಟ ಕಾರಣ ಏನು?

ಎಲ್​ಎಸ್​ಜಿ (LSG) ವಿರುದ್ಧ ಮುಂಬೈ ಇಂಡಿಯನ್ಸ್ (MI)​ 12 ರನ್​ಗಳ ಅಂತರದಲ್ಲಿ ಸೋಲನ್ನು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ 203 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಮುಂಬೈ ಕೇವಲ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಸೋಲಿನ ಬಳಿಕ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನಿರಾಸೆಗೊಂಡರು. ಜೊತೆಗೆ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಮತ್ತೆ ಸೋಲ್ತಿದ್ದಂತೆಯೇ ಜೋರಾಗಿ ಅತ್ತ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ..!

publive-image

ಸೋಲಿನಿಂದ ನಿರಾಸೆಯಾಗಿದೆ. ಫೀಲ್ಡಿಂಗ್‌ನಲ್ಲಿ ನಾವು 10-12 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಿದ್ದೇವೆ. ಕೊನೆಯಲ್ಲಿ ನಾವು ದುರ್ಬಲರಾದೆವು. ನಮ್ಮ ಬ್ಯಾಟಿಂಗ್ ಘಟಕ ವಿಫಲವಾಗಿದೆ. ನಾವು ತಂಡವಾಗಿ ಗೆಲ್ಲುತ್ತೇವೆ, ತಂಡವಾಗಿ ಸೋಲುತ್ತೇವೆ. ಈ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಕೊನೆಯಲ್ಲಿ ನಮಗೆ ಕೆಲವು ಬಿಗ್ ಶಾಟ್​ಗಳು ಬೇಕಾಗಿದ್ದವು, ದುರಾದೃಷ್ಟವಶಾತ್ ಅವು ಬರಲಿಲ್ಲ ಎಂದರು.

ನಿನ್ನೆಯ ಪಂದ್ಯದಲ್ಲಿ ಪಾಂಡ್ಯ ಐದು ವಿಕೆಟ್ ಪಡೆದು ಸಾಧನೆ ಮಾಡಿದರು. ಐಪಿಎಲ್​​ ಇತಿಹಾಸದಲ್ಲಿ ನಾಯಕನೊಬ್ಬ ಐದು ವಿಕೆಟ್ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಂಡ್ಯ, ನಾನು ಯಾವಾಗಲೂ ನನ್ನ ಬೌಲಿಂಗ್ ಆನಂದಿಸಿದ್ದೇನೆ. ನನ್ನ ಬಳಿ ಹೆಚ್ಚಿನ ಆಯ್ಕೆಗಳಿಲ್ಲ, ಆದರೆ ನಾನು ವಿಕೆಟ್ ಉರುಳಿಸಲು ಆಯ್ಕೆಗಳನ್ನು ಬಳಸುತ್ತೇನೆ. ಬ್ಯಾಟ್ಸ್‌ಮನ್‌ಗಳು ತಪ್ಪುಗಳನ್ನು ಮಾಡುವಂತೆ ಪ್ರಯತ್ನಿಸುತ್ತೇನೆ ಎಂದರು.

ಇದನ್ನೂ ಓದಿ: Retired out! ತಿಲಕ್ ವರ್ಮಾಗೆ ದೊಡ್ಡ ಅವಮಾನ.. ಕ್ರೀಸ್​ನಿಂದ ವಾಪಸ್ ಕರೆಸಿದ ಮುಂಬೈ ಇಂಡಿಯನ್ಸ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment