/newsfirstlive-kannada/media/post_attachments/wp-content/uploads/2025/04/HARDIK-PANDYA-3.jpg)
ಮುಂಬೈನ ವಾಂಖೆಡೆ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ ಆಟವಾಡಿತು. ಆರ್ಸಿಬಿಯ ಅಬ್ಬರದ ಮುಂದೆ ಮುಂಬೈ ಬೌಲರ್ಗಳು ಅಕ್ಷರಶಃ ಕಕ್ಕಾಬಿಕ್ಕಿಯಾದ್ರು. ಬಿಗ್ ಟಾರ್ಗೆಟ್ ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್ 209 ರನ್ಗಳಿಸಿ 12 ರನ್ಗಳ ಅಂತರದಿಂದ ಸೋಲನ್ನು ಕಂಡಿತು..
ಪಂದ್ಯ ಮುಗಿದ ಬಳಿಕ ಮಾತನಾಡಿರುವ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಪಾಂಡ್ಯ.. ಇದು ರನ್ ಗಳಿಕೆಯ ಹಬ್ಬವಾಗಿತ್ತು. ವಿಕೆಟ್ ನಿಜವಾಗಿಯೂ ಚೆನ್ನಾಗಿತ್ತು. ನಾವು ಮತ್ತೆ ಎರಡು ಹಿಟ್‌ಗಳೊಂದಿಗೆ ವಿಫಲರಾದೆವು ಎಂದು ಭಾವಿಸುತ್ತೇನೆ. ಇಲ್ಲಿ ಬೌಲರ್‌ಗಳ ಪರಿಶ್ರಮ ಮರೆಯಲು ಸಾಧ್ಯವಿಲ್ಲ.
ಇದನ್ನೂ ಓದಿ: W W Wd 1 4 W 0! ಕೊನೆಯ ಓವರ್ನ ರೋಚಕತೆ ಹೇಗಿತ್ತು? ಕೃನಾಲ್ ಬಗ್ಗೆ ಪಾಟೀದಾರ್ ಏನಂದ್ರು..?
ತಿಲಕ್ ಅದ್ಭುತ! ಕೊನೆಯ ಪಂದ್ಯದಲ್ಲಿ ಬಹಳಷ್ಟು ವಿಷಯಗಳು ಸಂಭವಿಸಿದವು. ಜನ ಅದರ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು. ಅಂದು ನಡೆದದ್ದು ತಂಡದ ಗೆಲುವಿಗೆ ಮಾಡಿದ ತಂತ್ರವಾಗಿತ್ತು ಅಷ್ಟೇ. ನಮಗೆ ಪವರ್ ಪ್ಲೇಗಳು ಬಹಳ ಮುಖ್ಯ. ಒಂದೆರಡು ಓವರ್‌ಗಳನ್ನು ನಿರೀಕ್ಷಿತ ರನ್ ಬರಲಿಲ್ಲ. ಬುಮ್ರಾ ಇದ್ದರೆ ತಂಡದಲ್ಲಿ ವಿಶೇಷತೆ ಇರುತ್ತದೆ. ಅವರು ಬಂದು ತಮ್ಮ ಕೆಲಸ ಮಾಡಿದರು. ಅವರು ತಂಡದಲ್ಲಿ ಸೇರಿರೋದು ತುಂಬಾನೇ ಖುಷಿ ಇದೆ. ಜೀವನದ ಅತ್ಯುತ್ತಮ ಕ್ರಿಕೆಟ್ ಆಡಲು ಪ್ರಯತ್ನಿಸಿ ಮತ್ತು ನಿಮ್ಮನ್ನು ಬೆಂಬಲಿಸಿ. ನಾವೆಲ್ಲರೂ ಅವರನ್ನು ಬೆಂಬಲಿಸುತ್ತಿದ್ದೇವೆ. ಫಲಿತಾಂಶ ನಮ್ಮ ಕಡೆಗೆ ಬರುತ್ತದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪಾಂಡ್ಯ ಹೋರಾಟ ಮೆಚ್ಚಲೇಬೇಕು.. ಜಸ್ಟ್ 15 ಬಾಲ್ನಲ್ಲಿ 42 ರನ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್