/newsfirstlive-kannada/media/post_attachments/wp-content/uploads/2025/04/PANDYA_HARDHIK.jpg)
2025ರ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಕೇವಲ 12 ರನ್ಗಳ ಅಂತರದಿಂದ ಹೀನಾಯವಾಗಿ ಸೋತು ಹೋಗಿದೆ. ಮುಂಬೈ ಇಂಡಿಯನ್ಸ್ ಸೋತರೂ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮಾತ್ರ ಐಪಿಎಲ್ ಇತಿಹಾಸದಲ್ಲೇ ವಿಶೇಷವಾದ ದಾಖಲೆ ಬರೆದಿದ್ದಾರೆ.
ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡದ ಕ್ಯಾಪ್ಟನ್ ಪಾಂಡ್ಯ ಟಾಸ್ ಗೆದ್ದು, ಲಕ್ನೋ ಆಟಗಾರರನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಈ ವೇಳೆ ಲಕ್ನೋ ಉತ್ತಮ ಆರಂಭದಿಂದ 20 ಓವರ್ಗಳಲ್ಲಿ 8 ವಿಕೆಟ್ಗೆ 204 ರನ್ಗಳ ಟಾರ್ಗೆಟ್ ನೀಡಿತ್ತು. ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಪಂದ್ಯದ ದಿಕ್ಕನ್ನೇ ಬದಲಿಸಿದ್ದರು.
ಇದನ್ನೂ ಓದಿ:ಕೇವಲ 7 ಪಂದ್ಯ.. RCB ಪ್ರಯಾಣ ಮಾಡೋದು ಎಷ್ಟು ಸಾವಿರ ಕಿಲೋ ಮೀಟರ್ ಗೊತ್ತಾ?
ರನ್ಗಳ ವೇಗ ಪಡೆದಾಗ ಕೈಗೆ ಬಾಲ್ ಎತ್ತಿಕೊಂಡ ಪಾಂಡ್ಯ ಲಕ್ನೋ ಬ್ಯಾಟ್ಸ್ಮನ್ಗಳಿಗೆ ಕಾಡಿದರು. 4 ಓವರ್ ಬಾಲ್ ಮಾಡಿದ ಪಾಂಡ್ಯ ಕೇವಲ 36 ರನ್ಗಳನ್ನು ನೀಡಿ, ಪ್ರಮುಖವಾದ 5 ವಿಕೆಟ್ಗಳನ್ನು ಕಬಳಿಸಿದರು. ಐಡೆನ್ ಮಾರ್ಕರಮ್, ಪೂರನ್, ರಿಷಭ್ ಪಂತ್, ಡೇವಿಡ್ ಮಿಲ್ಲರ್ ಹಾಗೂ ಅಕ್ಷ್ ದೀಪ್ ಅವರ ವಿಕೆಟ್ಗಳನ್ನು ಪಾಂಡ್ಯ ಉರುಳಿಸಿದರು. ಇದರಿಂದ ಲಕ್ನೋದ ತಂಡದ ರನ್ಗಳಿಗೆ ದೊಡ್ಡ ಬ್ರೇಕ್ ಬಿದ್ದಿತ್ತು.
ಐಪಿಎಲ್ ತಂಡದ ಕ್ಯಾಪ್ಟನ್ ಒಬ್ಬರು ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ಗಳ ಗೊಂಚಲು ಪಡೆದಿರುವುದು ಇದೇ ಮೊದಲು. ಇಡೀ ಐಪಿಎಲ್ ಇತಿಹಾಸದಲ್ಲಿ ಯಾವ ತಂಡದ ನಾಯಕ ಮಾಡದ ಸಾಧನೆಯನ್ನು ಲಕ್ನೋ ವಿರುದ್ಧ ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ. ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಹಾರ್ದಿಕ್, 5 ವಿಕೆಟ್ ಪಡೆದ ಮೊದಲ ಐಪಿಎಲ್ ತಂಡದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ