/newsfirstlive-kannada/media/post_attachments/wp-content/uploads/2024/10/Team-India_Win.jpg)
ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರನ್ನು ಕಳಪೆ ಪ್ರದರ್ಶನ ನೀಡಿದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್​ನಿಂದ ಕೈ ಬಿಡಲಾಗಿತ್ತು. ರೋಹಿತ್​​ ಶರ್ಮಾ ಅನುಪಸ್ಥಿತಿಯಲ್ಲಿ ಸ್ಟಾರ್​ ವೇಗಿ ಬುಮ್ರಾ ಟೀಮ್​ ಇಂಡಿಯಾ ಮುನ್ನಡೆ ಸಾಧಿಸಿದ್ರು. ಮುಂಬರುವ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ವೇಳೆಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.
ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಈಗ 37 ವರ್ಷ. ಐಸಿಸಿ ಚಾಂಪಿಯನ್ ಟ್ರೋಫಿ ನಂತರ ಇವರು 38 ವರ್ಷಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಇವರಿಗೆ ಭಾರತ ಏಕದಿನ ತಂಡದ ಕ್ಯಾಪ್ಟನ್ಸಿಯಿಂದ ಕೊಕ್​​ ನೀಡುವ ಸಾಧ್ಯತೆ ಇದೆ. ಇವರ ಬಳಿಕ ಟೀಮ್​ ಇಂಡಿಯಾ ಏಕದಿನ ಕ್ಯಾಪ್ಟನ್​​ ಯಾರಾಗಬಹುದು? ಅನ್ನೋ ಚರ್ಚೆ ಶುರುವಾಗಿದೆ.
ಈ ವರ್ಷ ನಡೆಯಲಿರೋ ಚಾಂಪಿಯನ್ ಟ್ರೋಫಿಗೆ ಈಗಿನಿಂದಲೇ ಟೀಮ್​ ಇಂಡಿಯಾ ತಯಾರಿ ನಡೆಸಿಕೊಂಡಿದೆ. ಈಗಾಗಲೇ ಐಸಿಸಿ ಮೆಗಾ ಟೂರ್ನಿ ತಾತ್ಕಾಲಿಕ ವೇಳಾಪಟ್ಟಿ ರಿಲೀಸ್​ ಆಗಿದ್ದು, ಮಾರ್ಚ್ 1ನೇ ತಾರೀಕಿನಂದು ಭಾರತ- ಪಾಕಿಸ್ತಾನ ನಡುವಣ ಪಂದ್ಯ ನಿಗದಿಪಡಿಸಲಾಗಿದೆ. ಆದರೆ, ಬಿಸಿಸಿಐ ಮಾತ್ರ ಈ ತಾತ್ಕಾಲಿಕ ವೇಳಾಪಟ್ಟಿಗೆ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಐಸಿಸಿ ತಿಳಿಸಿದೆ. ಇದರ ಮಧ್ಯೆ ಟೀಮ್​ ಇಂಡಿಯಾ ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​ ಇದ್ದು, ರೋಹಿತ್​ಗೆ ಕೊಕ್​ ನೀಡಿ ಗಿಲ್​​ಗೆ ಕ್ಯಾಪ್ಟನ್ಸಿ ಕೊಡುವುದು ಪಕ್ಕಾ ಆಗಿದೆ.
ಹಾರ್ದಿಕ್​ ಪಾಂಡ್ಯಗೆ ಕ್ಯಾಪ್ಟನ್ಸಿ
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸುತ್ತಿದ್ದಾರೆ. ಈಗ ಏಕದಿನ ನಾಯಕತ್ವದಿಂದ ರೋಹಿತ್ ಶರ್ಮಾ ಕೆಳಗಿಳಿದರೆ, ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್​ ಆಗಬಹುದು ಎನ್ನುವ ಮಾತುಗಳು ಕೇಳಿ ಬಂದಿದೆ.
ಹಾರ್ದಿಕ್​ ಪಾಂಡ್ಯ ಸಮರ್ಥ ಆಟಗಾರ
ಇನ್ನು, ಹಾರ್ದಿಕ್ ಭಾರತ ತಂಡದ ಕ್ಯಾಪ್ಟನ್​ ಆಗಲು ಸಮರ್ಥ ಆಟಗಾರ. ಇವರು ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಐಪಿಎಲ್‌ನಲ್ಲೂ ಕ್ಯಾಪ್ಟನ್​ ಆಗಿ ಪಾಂಡ್ಯ ಯಶಸ್ಸು ಕಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹೊರೆ ತಗ್ಗಿಸಲು ಬಿಸಿಸಿಐ ನಿರ್ಧರಿಸಿದರೆ, ಹಾರ್ದಿಕ್ ಅವರನ್ನು ಏಕದಿನ ಕ್ಯಾಪ್ಟನ್​ ಮಾಡಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us