Advertisment

‘ಏಕಾಂಗಿ ಪಾಂಡ್ಯ’ರ ಭಾವುಕ ಪೋಸ್ಟ್ ಹೇಳ್ತಿದೆ ನೂರು ನೋವಿನ ಕತೆ..!

author-image
Ganesh
Updated On
‘ಏಕಾಂಗಿ ಪಾಂಡ್ಯ’ರ ಭಾವುಕ ಪೋಸ್ಟ್ ಹೇಳ್ತಿದೆ ನೂರು ನೋವಿನ ಕತೆ..!
Advertisment
  • ಹಾರ್ದಿಕ್​ ಪಾಂಡ್ಯಗೆ ಮಗ ಅಗಸ್ತ್ಯನೇ ಸ್ಫೂರ್ತಿ
  • ಮಗನೇ ಪಾಂಡ್ಯಗೆ ಸರ್ವಸ್ವ.. ಜೀವನಕ್ಕೆ ಚೇತನ
  • ಹೀರೋ ಆಗಬೇಕು ಅನ್ನೋದೇ ಪಾಂಡ್ಯ ಬಯಕೆ

ಹಾರ್ದಿಕ್ ಪಾಂಡ್ಯ. ರಿಯಲ್ ಫೈಟರ್. ಟೀಮ್ ಇಂಡಿಯಾದ ಸೂಪರ್ ಸ್ಟಾರ್​. ಟಿ20 ವಿಶ್ವಕಪ್ ಗೆಲುವಿನ ಮ್ಯಾಚ್ ವಿನ್ನರ್​. ಇವರ ಜೀವನ ಹಲವರಿಗೆ ಪಾಠವೂ ಹೌದು. ಮಾದರಿಯೂ ಹೌದು. ಎಲ್ಲವನ್ನು ಕಂಡಿರುವ ಹಾರ್ದಿಕ್​​ಗೆ ಮಾತ್ರ, ಆತನೊಬ್ಬನೇ ನಿಜವಾದ ಚೇತನ.

Advertisment

ಈ ವರ್ಷ ಹಾರ್ದಿಕ್, ಆನ್​ಫೀಲ್ಡ್​ ಪರ್ಫಾಮೆನ್ಸ್​ ಸುದ್ದಿಗಿಂತ ಆಪ್​ ದಿ ಫೀಲ್ಡ್​ ಸುದ್ದಿಯೇ ಸೌಂಡ್ ಮಾಡಿದ್ದೇ ಹೆಚ್ಚು. ಐಪಿಎಲ್​​​​​​​​​ನಲ್ಲಿ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ ಪಟ್ಟ. ಅಭಿಮಾನಿಗಳ ಟೀಕೆಗಳ ಸುರಿಮಳೆ. ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ಬಳಿಕ ಅಭಿಮಾನಿಗಳ ಜೈಕಾರ. ಇದೆಲ್ಲದರ ನಡುವೆಯೇ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆಗಿನ ಡೈವೋರ್ಸ್. ಈಗ ಎಲ್ಲವನ್ನು ಕಳೆದುಕೊಂಡ ಹಾರ್ದಿಕ್ ಏಕಾಂಗಿಯಾಗಿದ್ದಾರೆ. ಏಕಾಂಗಿಯಾಗಿದ್ದರೂ ಹಾರ್ದಿಕ್, ಎಂದಿಗೂ ಕುಗ್ಗಲಿಲ್ಲ. ಆನ್​ಫೀಲ್ಡ್​ನಲ್ಲಿ ಹಂಡ್ರೆಡ್​ ಪರ್ಸೆಟ್ ಎಫರ್ಟ್ ಹಾಕುವುದು ಮರೆಯಲಿಲ್ಲ. ತಂಡಕ್ಕಾಗಿ ಹೋರಾಡುವ ಛಲ ನಿಲ್ಲಲಿಲ್ಲ. ಇದಕ್ಕೆಲ್ಲ ಕಾರಣ ಆ ಒಬ್ಬ. ಆ ಒಬ್ಬನೇ ಹಾರ್ದಿಕ್​ಗೆ ಸ್ಫೂರ್ತಿ.

ಇದನ್ನೂ ಓದಿ:ಟಿ-20 ವಿಶ್ವಕಪ್​, ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತ ಕೌರ್ ಪಡೆ

publive-image

ಮೈ ಬಿಗ್ಗೆಸ್ಟ್​ ಮೋಟಿವೇಶನ್
ಇನ್ಸ್​ಟಾದಲ್ಲಿ ಮಗನ ಫೋಟೋ ಹಂಚಿಕೊಂಡಿರುವ ಪಾಂಡ್ಯ, ಈತನೇ ನನ್ನ ಬಿಗ್ಗೆಸ್ಟ್​ ಮೋಟಿವೇಶನ್​​ ಎಂಬ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಇದಕ್ಕೆ ಬರೋಬ್ಬರಿ 21 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿದೆ.

ಮಗನೇ ಪಾಂಡ್ಯಗೆ ಸರ್ವಸ್ವ..
ಹಾರ್ದಿಕ್ ಜೀವನ ಹಳ್ಳ ಹಿಡಿದಿದೆ. ವೈಯಕ್ತಿಕ ಜೀವನದಲ್ಲಿ ಏಕಾಂಗಿಯಾಗಿರುವ ಹಾರ್ದಿಕ್​​ಗೆ, ವೃತ್ತಿ ಜೀವನದಲ್ಲೂ ಒಂದಿಲ್ಲೊಂದು ಪೆಟ್ಟು ಬೀಳ್ತಿದೆ. ಇದ್ಯಾವುದಕ್ಕೂ ಕೇರ್ ಮಾಡದ ಹಾರ್ದಿಕ್, ನಗು ಮುಖದಲ್ಲೇ ಜೀವನ ಸಾಗಿಸ್ತಿದ್ದಾರೆ. ಹೃದಯ ಬೆಂದು, ನೊಂದಿದ್ದರು. ಕಾಲಾಯ ತಸ್ಮೈ ನಮಃ ಎನ್ನುತ್ತಲೇ ಹೆಜ್ಜೆ ಹಾಕ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಆ ಒಬ್ಬ. ಆತನೇ ಪುತ್ರ ಅಗಸ್ತ್ಯ.

Advertisment

ವೈಯಕ್ತಿಕ ಜೀವನದಲ್ಲಿ ಏನೇ ಆಗಿದ್ದರೂ ವೃತ್ತಿ ಜೀವನದಲ್ಲಿ ಟಿ20 ನಾಯಕತ್ವ ಸಿಗದಂತಾಗಿದ್ದರು. ಕನಿಷ್ಠ ಉಪ ನಾಯಕನ ಸ್ಥಾನವೂ ಕೈಗೆಟುಕದಿದ್ದರು, ಹಾರ್ದಿಕ್​​​​​ ಗುರಿ ಮಾತ್ರ, ಭವಿಷ್ಯದ ಕಡೆಯಾಗಿದೆ. ಇದಕ್ಕೆಲ್ಲ ಕಾರಣ ಪುತ್ರ ಅಗಸ್ತ್ಯ ಮೇಲಿನ ಪ್ರೀತಿಯೇ ಆಗಿದೆ.

ಮಗನಿಗೆ ಹೀರೋ ಆಗಬೇಕು ಅನ್ನೋದೇ ಪಾಂಡ್ಯ ಬಯಕೆ
ವೈಯಕ್ತಿಕ ಜೀವನದಲ್ಲಿ ಹಾರ್ದಿಕ್, ಪತ್ನಿ ನತಾಶಾ ಪಾಲಿಗೆ ವಿಲನ್ ಆಗಿರಬಹುದು. ಪುತ್ರನ ಪಾಲಿಗೆ ಹೀರೋ ಆಗಿ ಕಾಣಬೇಕು ಅನ್ನೋದು ಪ್ರತಿ ಅಪ್ಪನ ಕನಸು. ಇದೇ ಕನಸು ಅಪ್ಪನಾಗಿರೋ ಹಾರ್ದಿಕ್ ಪಾಂಡ್ಯಗೂ ಇದೆ. ಇದೇ ಕಾರಣಕ್ಕೆ ಏನಾದರೂ ಮಾಡಬೇಕೆಂಬ ತುಡಿತ, ಹಸಿವು ಹಾರ್ದಿಕ್​ ಕಾಡ್ತಿದೆ. ಮತ್ತೆ ಅಂಗಳಕ್ಕಿಳಿದು ಹೋರಾಡುವ ಮನೋಭಾವ ಬೆಳೆಸಿದೆ.

ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಒಟ್ಟು ಆಸ್ತಿ ಎಷ್ಟು ಕೋಟಿ? ಅಮ್ಮನ ಹೆಸರಲ್ಲಿರೋದು ನಿಜಾನಾ?

Advertisment

ಹಾರ್ದಿಕ್, ರೆಡ್ ಬಾಲ್ ಕ್ರಿಕೆಟ್ ಆಡಿ 6 ವರ್ಷಗಳೇ ಉರುಳಿವೆ. ಹೀಗಾಗಿ ಹಾರ್ದಿಕ್ ಪಾಂಡ್ಯ, ಟೆಸ್ಟ್​ ಕಮ್​ಬ್ಯಾಕ್ ಯಕ್ಷಪ್ರಶ್ನೆಯೇ ಆಗಿದೆ. ಟೆಸ್ಟ್​ ಕ್ರಿಕೆಟ್​ನಿಂದ ಕಳೆದು ಹೋಗುವ ಹಂತದಲ್ಲೇ ಮತ್ತೆ ಪುಟಿದೇಳಲು ಸನ್ನದ್ಧರಾಗಿದ್ದಾರೆ. ಇದಕ್ಕಾಗಿ ರೆಡ್ ಬಾಲ್ ಹಿಡಿದು ಅಖಾಡಕ್ಕೂ ಇಳಿದಿದ್ದಾರೆ. ಸ್ಪೆಷಲ್ ಕೋಚ್ ಜೊತೆ ಟ್ರೈನಿಂಗ್ ಕೂಡ ಮಾಡಿದ್ದಾರೆ. ಹಾರ್ದಿಕ್, ವೃತ್ತಿ ಜೀವನವೇ ಆಗಲಿ, ವೈಯಕ್ತಿಕ ಜೀವನವೇ ಕಲ್ಲು ಮುಳ್ಳಿನ ಹಾದಿಯನ್ನೇ ಕಂಡವರೇ ಆಗಿದ್ದಾರೆ. ಛಲ ಹೋರಾಟದ ಬದುಕೆ ಆಗಿದೆ ಅನ್ನೋದು ಮರೆಯುವಂತಿಲ್ಲ.

ಇದನ್ನೂ ಓದಿ:9 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಹೊರಟ ಭಾರತದ ಸಚಿವರು; ಎಸ್​ ಜೈ ಶಂಕರ್​ ಪಾಕ್​ ಭೇಟಿಯ ಹಿಂದಿನ ರಹಸ್ಯವೇನು?

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment