Advertisment

ನಮ್ಮ ನಡುವಿನ ಗಾಸಿಪ್​​ ನಿಜ.. ಒಟ್ಟಾಗಿ ಬದುಕಲು ಆಗಲಿಲ್ಲ- ನಟಾಶಾ ಬಗ್ಗೆ ಹಾರ್ದಿಕ್ ಏನಂದರು?

author-image
Bheemappa
Updated On
ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್​?
Advertisment
  • 4 ವರ್ಷದ ದಾಂಪತ್ಯ ಅಂತ್ಯ, ಪಾಂಡ್ಯ- ನತಾಶಾ ದೂರ.. ದೂರ..
  • ನಟಾಶಾ ಸ್ಟಾನ್ಕೋವಿಕ್​​, ಹಾರ್ದಿಕ್ ಪಾಂಡ್ಯ ನಡುವೆ ವೈಮನಸ್ಸು
  • ಡಿವೋರ್ಸ್​ ರೂಮರ್ಸ್ ಕುರಿತು ಹಾರ್ದಿಕ್ ಪಾಂಡ್ಯ ಏನಂದರು?

ಮನದೊಳಗೆ ಇಷ್ಟು ದಿನದಿಂದ ಇದ್ದ ನೋವನ್ನು ಕೊನೆಗೂ ಹಾರ್ದಿಕ್​ ಪಾಂಡ್ಯ ಹೊರ ಹಾಕಿದ್ದಾರೆ. ಇಷ್ಟು ದಿನ ಹಬ್ಬಿದ್ದ ಗಾಸಿಪ್​​ಗೆ​ ಕೊನೆಗೂ ನಿಜವಾಗಿದೆ. ಇಷ್ಟ ಪಟ್ಟು ಕೈಹಿಡಿದ ಮಡದಿ ಕೊನೆಗೂ ಕೈ ಕೊಟ್ಟಿದ್ದಾರೆ. ಭಾರವಾದ ಹೃದಯದೊಂದಿಗೆ ಟೀಮ್​ ಇಂಡಿಯಾ ಆಲ್​​ರೌಂಡರ್​​ ಹಾರ್ದಿಕ್​, ಡಿವೋರ್ಸ್​ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ.

Advertisment

ಇದನ್ನೂ ಓದಿ:ಗುಡ್​​ನ್ಯೂಸ್.. ಕೆಆರ್​​ಎಸ್​ ಡ್ಯಾಂ ತುಂಬಲು ಕೆಲವೇ ಅಡಿಗಳು ಮಾತ್ರ ಬಾಕಿ..

ಐಪಿಎಲ್​​ ಸೀಸನ್​ 17 ಅಂತ್ಯ ಕಂಡ ಬೆನ್ನಲ್ಲೇ ಹಾರ್ದಿಕ್​ ಪಾಂಡ್ಯ ಬಾಳಲ್ಲಿ ಬಿರುಗಾಳಿ ಎದ್ದ ಸುದ್ದಿ ಹೊರಬಿದ್ದಿತ್ತು. ಪತ್ನಿ ನಟಾಶಾ ಸ್ಟಾನ್ಕೋವಿಕ್​​, ಹಾರ್ದಿಕ್ ಪಾಂಡ್ಯ ನಡುವೆ ವೈಮನಸ್ಸು ಶುರುವಾಗಿದ್ದು, ಇಬ್ಬರೂ ಪರಸ್ಪರ ದೂರ ಉಳಿದಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಹಾರ್ದಿಕ್​ ಮನೆ ತೊರೆದಿರುವ ನತಾಶಾ, ಪ್ರತ್ಯೇಕವಾಗಿ ವಾಸಿಸ್ತಿದ್ದ ರೂಮರ್ಸ್​, ಹಾರ್ದಿಕ್​ ಬಿಟ್ಟು ಬಾಯ್​ಫ್ರೆಂಡ್​ ಜೊತೆ ನಟಾಶಾ ಸುತ್ತಾಡ್ತಿದ್ದಿದ್ದು ಎಲ್ಲವೂ ವರದಿಯಾಗಿತ್ತು. ಈ ವಿಚಾರದಲ್ಲಿ ಹಾರ್ದಿಕ್​ ಪಾಂಡ್ಯ ಮಾತ್ರ ಮೌನಕ್ಕೆ ಶರಣಾಗಿದ್ದರು.

ಇದನ್ನೂ ಓದಿ: ಹಿಟ್ ಅಂಡ್​ ರನ್​​ಗೆ ASI ಬಲಿ.. ಅಪಘಾತದ ಹೊಡೆತಕ್ಕೆ ಅಧಿಕಾರಿಯ ತಲೆ ನಜ್ಜುಗುಜ್ಜು..

Advertisment

publive-image

ಕೊನೆಗೂ ಮೌನ ಮುರಿದ ಹಾರ್ದಿಕ್​ ಪಾಂಡ್ಯ.!

ಮನದಾಳದಲ್ಲಿ ನುಂಗಲಾರದ ನೋವು ಇದ್ರೂ ಹಾರ್ದಿಕ್​ ಪಾಂಡ್ಯ ಮಾತ್ರ ಏನೋ ಆಗೇ ಇಲ್ಲ ಎಂಬಂತೆ ಕಾಣಿಸಿಕೊಂಡಿದ್ರು. ವಿಶ್ವಕಪ್​ ಟೂರ್ನಿಯಲ್ಲಿ ಆಡಿ ಭಾರತದ ಗೆಲುವಿನಲ್ಲೂ ಮಹತ್ವದ ಪಾತ್ರ ನಿರ್ವಹಿಸಿದ್ರು. ಅಪ್ಪಿ ತಪ್ಪಿಯೂ ಪತ್ನಿ ನಟಾಶಾ ಜೊತೆಗಿನ ಸಂಬಂಧದ ಬಗ್ಗೆ ಎಲ್ಲಿಯು ತುಟಿ ಪಿಟಿಕ್​ ಅಂದಿರಲಿಲ್ಲ. ವಿಶ್ವಕಪ್​​ ಗೆದ್ದ ಸಂಭ್ರಮದಲ್ಲಿ ಪಾಂಡ್ಯ ಬಿಕ್ಕಿ ಬಿಕ್ಕಿ ಅತ್ತಾಗ, ಗೆದ್ದ ಸಂಭ್ರಮಕ್ಕಿಂತ, ಮನದಾಳದಲ್ಲಿದ್ದ ನೋವನ್ನ ಕಣ್ಣುಗಳೇ ಹೇಳ್ತಿದ್ವು. ಏನೇ ಆಗಲಿ.., ಎಷ್ಟು ದಿನ ಅಂತಾ ನೋವನ್ನ ನುಂಗಿಕೊಂಡಿರಲು ಸಾಧ್ಯ. ಒಂದಲ್ಲ ಒಂದು ದಿನ ನೋವು ಹೊರಹಾಕಿದ್ರಷ್ಟೇ ಮನಸ್ಸಿಗೆ ಸಮಾಧಾನ. ಇದೀಗ ಕೊನೆಗೂ ಪತ್ನಿಯ ವಿಚಾರದಲ್ಲಿ ಹಾರ್ದಿಕ್​​ ಮೌನ ಮುರಿದಿದ್ದಾರೆ.

ಡಿವೋರ್ಸ್​ ಸುದ್ದಿಗೆ ಹಾರ್ದಿಕ್​ ಅಧಿಕೃತ ಮುದ್ರೆ.!

ಭಾರವಾದ ಮನಸ್ಸಿನೊಂದಿಗೆ ಕೊನೆಗೂ ಡಿವೋರ್ಸ್​ ರೂಮರ್ಸ್​ ಬಗ್ಗೆ ಹಾರ್ದಿಕ್​ ಪಾಂಡ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇನ್ಸ್​​ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿರುವ ಹಾರ್ದಿಕ್​, ನಟಾಶಾ ಜೊತೆಗಿನ ಸಂಬಂಧ ಮುರಿದುಕೊಂಡಿರೋ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇಷ್ಟು ದಿನದಿಂದ ಇದ್ದ ರೂಮರ್ಸ್​​ ನಿಜ ಎಂದಿದ್ದಾರೆ.

ಇದನ್ನೂ ಓದಿ: ಭಾರೀ ಮಳೆ-ಗಾಳಿ.. ಅಪಾಯದ ಮಟ್ಟ ಮೀರಿದ ಕಾವೇರಿ.. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

Advertisment

publive-image

'ನಟಾಶಾ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ'

4 ವರ್ಷಗಳ ಒಟ್ಟಿಗೆ ಬಾಳಿದ ನಂತರ, ನಟಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ಒಟ್ಟಾಗಿ ಬಾಳಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ನಮ್ಮಿಬ್ಬರ ಹಿತದೃಷ್ಟಿಯಿಂದ, ನಾವು ಒಟ್ಟಾಗಿ ಅನುಭವಿಸಿದ ಸಂತೋಷ, ಪರಸ್ಪರ ಗೌರವ, ಒಡನಾಟ ಮತ್ತು ನಾವು ಕುಟುಂಬವಾಗಿ ಬೆಳೆದ ರೀತಿಯನ್ನ ನೋಡಿದಾಗ ಇದು ನಮಗೆ ಕಠಿಣ ನಿರ್ಧಾರವಾಗಿತ್ತು. ನಮ್ಮ ಮಗ ಅಗಸ್ತ್ಯ ಇಬ್ಬರ ಜೀವನದಲ್ಲೂ ಇನ್ಮುಂದೆ ಇರಲಿದ್ದಾನೆ. ಅವನ ಸಂತೋಷಕ್ಕಾಗಿ ನಾವು ಅವನಿಗೆ ಸಾಧ್ಯವಿರುವ ಎಲ್ಲವನ್ನೂ ನೀಡುವ ಪೋಷಕರಾಗಿರುತ್ತೇವೆ.

ಹಾರ್ದಿಕ್​ ಪಾಂಡ್ಯ, ಕ್ರಿಕೆಟಿಗ

ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್.. ಬೆಳ್ಳಂಬೆಳಗ್ಗೆ ರಾಜ್ಯದ 54 ಕಡೆಗಳಲ್ಲಿ ರೇಡ್; ಎಲ್ಲೆಲ್ಲಿ?​

Advertisment

ಹಾರ್ದಿಕ್​ ಹೇಳಿದ ಒಟ್ಟಾಗಿ ಬಾಳಲು ನಮ್ಮ ಕೈಲಿ ಸಾಧ್ಯವಾದಷ್ಟು ಪ್ರಯತ್ನ ಪಟ್ಟೆವು ಎಂಬ ಮಾತೇ ಇವರಿಬ್ಬರ ದಾಂಪತ್ಯ ಜೀವನ ಹೇಗಿತ್ತು ಅನ್ನೋದನ್ನ ಹೇಳ್ತಿದೆ. ಇಷ್ಟ ಪಟ್ಟು ಇರೋದಕ್ಕೂ, ಕಷ್ಟ ಪಟ್ಟು ಇರೋದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಷ್ಟು ದಿನ ಕಷ್ಟ ಪಟ್ಟ ಜೀವನ ದೂಡಿದ ಹಾರ್ದಿಕ್​ ಬಾಳಲ್ಲಿ ಮುಂದಾದ್ರೂ ನೆಮ್ಮದಿ ನೆಲೆಸಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment