newsfirstkannada.com

ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್​?

Share :

Published August 26, 2024 at 9:59am

    ತಮ್ಮ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದ ಹಾರ್ದಿಕ್

    ಮಾಜಿ ಪತ್ನಿಯ ವಿಚಾರದಲ್ಲಿ ಆಲ್​ರೌಂಡರ್​ ಆಲೋಚನೆ ಹೇಗಿತ್ತು..?

    ಪಾಂಡ್ಯ-ನತಾಶಾ ದಾಂಪತ್ಯ ಜೀವನದ ಬಿರುಕಿಗೆ ಮುಖ್ಯ ಕಾರಣ ಇದೆ!

ಹಾರ್ದಿಕ್​ ಪಾಂಡ್ಯ-ನತಾಶಾ ಸ್ಟಾಂಕೋವಿಕ್​​​ರ ಸುಂದರ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದೇಕೆ?. ಡಿವೋರ್ಸ್​​ಗೆ ಕಾರಣ ಏನು?. ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆಗಳಿವು. ಈ ಉತ್ತರವಿಲ್ಲದ ಪ್ರಶ್ನೆಗಳ ಹುಡುಕಾಟದ ನಡುವೆ ನತಾಶಾರ ಆಪ್ತ ವಲಯ ಹಾರ್ದಿಕ್​ ಪಾಂಡ್ಯ ಮೇಲೆ ಸ್ಫೋಟಕ ಆರೋಪ ಮಾಡಿದೆ. ನತಾಶಾ ಆಪ್ತರು ಮಾಡಿರೋ ಆರೋಪದ ಏನು?.

ಇದನ್ನೂ ಓದಿ: ಕಾನ್​​ಸ್ಟೆಬಲ್ ಹುದ್ದೆಗಳಿಗೆ ಕಾಲ್​ಫಾರ್ಮ್​.. PUC ಪಾಸ್ ಆದವರಿಗೆ ಗುಡ್​ನ್ಯೂಸ್​

ಜುಲೈ 18, 2024.. ಸ್ಟಾರ್​ ಜೋಡಿ ಹಾರ್ದಿಕ್​ ಪಾಂಡ್ಯ-ನತಾಶಾ ಸ್ಟಾನ್ಕೋವಿಕ್​ ಅಧಿಕೃತವಾಗಿ ಬೇರ್ಪಟ್ಟ ಸುದ್ದಿ ಕೊಟ್ಟು ಶಾಕ್​ ನೀಡಿದ್ರು. ಅಸಲಿಗೆ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಕಳೆದ ಐಪಿಎಲ್​ ವೇಳೆ ಸಖತ್ ಸದ್ದು ಮಾಡಿತ್ತು. ಆದ್ರೆ, ಹಾರ್ದಿಕ್ -ನತಾಶಾ ಮಾತ್ರ ಈ ವಿಚಾರದಲ್ಲಿ ಮೌನಕ್ಕೆ ಜಾರಿದ್ರು. ಎಲ್ಲೂ ಕೂಡ ತುಟಿಪಿಟಿಕ್​ ಅಂದಿರಲಿಲ್ಲ. ಅಂತಿಮವಾಗಿ ಜುಲೈ 18ರಂದು ಅಧಿಕೃತ ಘೋಷಣೆ ಮಾಡಿದ್ರು. ಆದ್ರೆ, ಡಿವೋರ್ಸ್​ಗೆ​ ಕಾರಣ ಏನು ಅನ್ನೋದನ್ನ ಮಾತ್ರ ರಿವೀಲ್​ ಮಾಡಿರಲಿಲ್ಲ. ಇದೀಗ ಒಂದೊಂದೆ ಕಾರಣಗಳು ಹೊರ ಬರ್ತಿವೆ.

ಹಾರ್ದಿಕ್​ ಪಾಂಡ್ಯ – ನತಾಶಾ ಸ್ಟಾಂಕೋವಿಕ್.. ಹಲವು ವರ್ಷಗಳ ಕಾಲ ಸ್ನೇಹ, ಆ ಬಳಿಕ ಡೇಟಿಂಗ್​, ಅದಾದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು ಈ ಜೋಡಿ. ಅಂದ್ರೆ, ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸುಮಾರು ವರ್ಷಗಳ ಸಮಯ ತೆಗೆದುಕೊಂಡಿದ್ರು. ಆದ್ರೆ, ಎಲ್ಲವೂ ನಾಲ್ಕೇ ವರ್ಷಗಳಲ್ಲಿ ಅಂತ್ಯ ಕಂಡಿದೆ. ಅದಕ್ಕೆ ಹಾರ್ದಿಕ್​ ಪಾಂಡ್ಯರ ನಡೆಯೇ ಕಾರಣವಂತೆ.

ಹಾರ್ದಿಕ್​ ಪಾಂಡ್ಯ ಸ್ವಾರ್ಥಿ, ದುರಹಂಕಾರಿ.!

ಹಾರ್ದಿಕ್​ -ನತಾಶಾ ಡಿವೋರ್ಸ್​ ಸುದ್ದಿ ಹಬ್ಬಿದ ದಿನದಿಂದಲೂ ಶಾಂತವಾಗಿದ್ದ ಸಂಸಾರ ನೌಕೆಯಲ್ಲಿ ಬಿರುಗಾಳಿ ಎದ್ದಿದ್ದೇಕೆ ಎಂಬ ಪ್ರಶ್ನೆ ಹುಟ್ಟಿತ್ತು. ಯಾರದ್ದು ತಪ್ಪು.? ಯಾರದ್ದು ಸರಿ.? ಅನ್ನೋ ಪ್ರಶ್ನೆಗೆ ಉತ್ತರದ ಹುಡುಕಾಟ ಸಿಕ್ಕಾಪಟ್ಟೆ ನಡೆದಿತ್ತು. ಇದೀಗ ಒಂದೊಂದೆ ಕಾರಣಗಳು ಹೊರ ಬರ್ತಿದ್ದು, ಡಿವೋರ್ಸ್​ ವಿಚಾರದಲ್ಲಿ ಪಾಂಡ್ಯ ಅಪರಾಧಿ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಪಾಂಡ್ಯ ಸ್ವಾರ್ಥಿ, ಹಾರ್ದಿಕ್​ ಪಾಂಡ್ಯ ದುರಹಂಕಾರಿ ಎಂಬ ನೇರಾ ನೇರ ಆರೋಪವನ್ನ ನತಾಶಾ ಆಪ್ತರು ಮಾಡಿದ್ದಾರೆ.

‘ಪಾಂಡ್ಯ ತಮ್ಮ ಬಗ್ಗೆ ಮಾತ್ರ ಯೋಚಿಸ್ತಿದ್ರು’

‘ಪಾಂಡ್ಯ ಯಾವಾಗಲೂ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಹಾರ್ದಿಕ್ ನಡೆದುಕೊಳ್ಳುತ್ತಿದ್ದನ್ನು ತಡೆದುಕೊಳ್ಳಲು ನತಾಶಾಗೆ ಸಾಧ್ಯವೇ ಆಗಲಿಲ್ಲ. ಇದ್ರಿಂದಾಗಿ ಇಬ್ಬರ ಮಧ್ಯೆ ಸಾಕಷ್ಟು ಅಂತರ ಏರ್ಪಟ್ಟಿತು. ಹಾರ್ದಿಕ್ ಜೊತೆ ಹೊಂದಿಕೊಂಡು ಹೋಗಲು ನತಾಶಾ ಪ್ರಯತ್ನಿಸಿದ್ರು. ಆದ್ರೆ, ಹಾರ್ದಿಕ್​ ಮಾತ್ರ ಬದಲಾಗಲಿಲ್ಲ. ತನ್ನ ಅಹಂ ಸಾಧಿಸಿದ್ರು. ಪರಿಸ್ಥಿತಿ ಕೈ ಮೀರಿದ ಬಳಿಕ ನತಾಶ ಈ ನಿರ್ಧಾರ ಮಾಡಿದ್ದು’

ನತಾಶಾ ಆಪ್ತರು

ಇಬ್ಬರ ನಡುವೆ ಮನಸ್ತಾಪ.. ಆಗಾಗ ಮನೆಯಲ್ಲಿ ಜಗಳ..!

ತಮ್ಮ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದ ಹಾರ್ದಿಕ್​ ಪಾಂಡ್ಯ, ನತಾಶಾರನ್ನ ಹಿಡಿತದಲ್ಲಿಟ್ಟುಕೊಳ್ಳೋ ಪ್ರಯತ್ನ ಮಾಡಿದ್ರಂತೆ. ತಾನು ಅಂದುಕೊಂಡಂತೆ ನತಾಶಾ ಇರಬೇಕು ಅನ್ನೋದು ಪಾಂಡ್ಯ ಮನಸ್ಥಿತಿಯಾಗಿತ್ತಂತೆ. ಈ ವಿಚಾರಕ್ಕೇ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಆಗಾಗ ಮನೆಯಲ್ಲಿ ಜಗಳವಾಗ್ತಿತ್ತಂತೆ. ಅಂತಿಮವಾಗಿ ಇದೇ ದಾಂಪತ್ಯ ಜೀವನದ ಬಿರುಕಿಗೆ ಪ್ರಮುಖ ಕಾರಣವಾಗಿ ಬಿಡ್ತಂತೆ.

ಡಿವೋರ್ಸ್​ ಬೆನ್ನಲ್ಲೇ ಮತ್ತೊಂದು ಡೇಟಿಂಗ್​ ವದಂತಿ.!

ನತಾಶಾ ಜೊತೆಗಿನ ದಾಂಪತ್ಯ ಜೀವನಕ್ಕೆ ಗುಡ್​ ಬೈ ಹೇಳಿದ ಬೆನ್ನಲ್ಲೇ, ಪಾಂಡ್ಯರ ಹೊಸ ಡೇಟಿಂಗ್​ ರೂಮರ್ಸ್​ ಕೂಡ ಹಲ್​ ಚಲ್​ ಎಬ್ಬಿಸಿದೆ. ಬ್ರಿಟಿಷ್​ ಸಿಂಗರ್​ ಕಮ್​ ನಟಿ ಜಾಸ್ಮಿನ್​ ವಾಲಿಯಾ ಜೊತೆಗೆ ಡೇಟಿಂಗ್​​ ನಡೆಸ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಇನ್​​ಸ್ಟಾಗ್ರಾಂನಲ್ಲಿ ಇಬ್ಬರೂ ಹಂಚಿಕೊಂಡಿರೋ ಸ್ಪೆನ್​ ಪ್ರವಾಸದ ಫೋಟೋಗಳು ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಹೊಸ ಟ್ವಿಸ್ಟ್.. ದರ್ಶನ್ ಫೋಟೋದಿಂದ ಜಾರ್ಜ್‌ಶೀಟ್‌ಗೂ ಮುನ್ನ ಕೋರ್ಟ್‌ನಲ್ಲಿ ಸಂಕಷ್ಟ?

ಇತ್ತ ಹಾರ್ದಿಕ್​ ಜಾಲಿ ಟ್ರಿಪ್​ನಲ್ಲಿ ಬ್ಯುಸಿಯಾಗಿದ್ರೆ, ಮಗ ಅಗಸ್ತ್ಯನೊಂದಿಗೆ ನತಾಶಾ ಸರ್ಬಿಯಾಗೆ ತೆರಳಿದ್ದಾರೆ. ಮಗನೊಂದಿಗೆ ಕಾಲ ಕಳೀತಿದ್ದಾರೆ. ಆದ್ರೆ, ಯಾರೊಬ್ಬರೂ ಕೂಡ ಡಿವೋರ್ಸ್​​ ಬಗ್ಗೆ ಎಲ್ಲೂ ತುಟಿ ಬಿಚ್ಚಿಲ್ಲ. ಇದೀಗ ನತಾಶ ಆಪ್ತವಲಯ ಹಾರ್ದಿಕ್​​ ನಡತೆ ಇದಕ್ಕೆ ಕಾರಣ ಎಂದು ಆರೋಪಿಸ್ತಿದೆ. ಈ ವಿಚಾರದಲ್ಲೂ ಪಾಂಡ್ಯ -ನತಾಶಾ ಇಬ್ಬರೂ ಮೌನಕ್ಕೆ ಶರಣಾಗಿದ್ದಾರೆ. ಇವರಿಬ್ಬರು ತುಟಿ ಬಿಚ್ಚಿದ್ರಷ್ಟೇ ಅಸಲಿ ಸತ್ಯ ಅನಾವರಣವಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್​?

https://newsfirstlive.com/wp-content/uploads/2024/07/HARDHIK_PANDYA-6.jpg

Load More