Advertisment

ಪಾಂಡ್ಯ-ನಟಾಶಾ ಇನ್ಮುಂದೆ ಬೇರೆ ಬೇರೆ.. ಪುತ್ರ ಅಗಸ್ತ್ಯ ಯಾರ ಜೊತೆಗೆ ಇರುತ್ತಾನೆ..?

author-image
Ganesh
Updated On
ಪಾಂಡ್ಯ-ನಟಾಶಾ ಇನ್ಮುಂದೆ ಬೇರೆ ಬೇರೆ.. ಪುತ್ರ ಅಗಸ್ತ್ಯ ಯಾರ ಜೊತೆಗೆ ಇರುತ್ತಾನೆ..?
Advertisment
  • ಡಿವೋರ್ಸ್​ ವದಂತಿ ಅಧಿಕೃತ ಮಾಡಿದ ಪಾಂಡ್ಯ
  • 2020ರಲ್ಲಿ ಪಾಂಡ್ಯ-ನಟಾಶಾ ಮದುವೆ ಆಗಿದ್ದರು
  • ಕಳೆದ ಕೆಲವು ತಿಂಗಳಿಂದ ಡಿವೋರ್ಸ್ ವದಂತಿ ಇತ್ತು

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನಟಾಶಾ ಸ್ಟಾಂಕೋವಿಕ್ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಪಾಂಡ್ಯ ವಿಚ್ಛೇದನದ ಸುದ್ದಿಯನ್ನು ನಿನ್ನೆ ಖಚಿತಪಡಿಸಿದ್ದಾರೆ. ಈ ಜೋಡಿಗೆ ಇರುವ ಏಕೈಕ ಪುತ್ರ ಅಗಸ್ತ್ಯ ಯಾರೊಂದಿಗೆ ಇರುತ್ತಾನೆ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.

Advertisment

ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!

ಡಿವೋರ್ಸ್​ ಪಡೆದ ಜೋಡಿ ಹೇಳಿಕೊಂಡಿರುವ ಮಾಹಿತಿ ಪ್ರಕಾರ, ಅಗಸ್ತ್ಯನನ್ನು ಒಬ್ಬರು ಒಟ್ಟಿಗೆ ಬೆಳೆಸುತ್ತಾರೆ. ಇದಕ್ಕೆ ಇಬ್ಬರ ಸಹಮತ ಕೂಡ ಇದೆ. ಅಗಸ್ತ್ಯ ನಮ್ಮಿಬ್ಬರ ಜೀವನದ ಪ್ರಮುಖ ಭಾಗವಾಗಿ ಉಳಿಯುತ್ತಾನೆ. ನಾವಿಬ್ಬರು ಅವನಿಗೆ ಪೋಷಕರಾಗುತ್ತೇವೆ. ಅವನ ಪ್ರತಿಯೊಂದು ಸಂತೋಷವನ್ನು ನೋಡಿಕೊಳ್ಳುತ್ತೇವೆ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ. ಹಾರ್ದಿಕ್ ಮತ್ತು ನಟಾಶಾ 2020ರಲ್ಲಿ ವಿವಾಹವಾದರು ಮತ್ತು ಅಗಸ್ತ್ಯ ಅದೇ ವರ್ಷದಲ್ಲಿ ಜನಿಸಿದ್ದಾನೆ.

ಸೆರ್ಬಿಯಾಗೆ ತೆರಳಿದ ನಟಾಶಾ..!
ನಟಾಶಾ ಅವರ ಪೋಷಕರು ಸೆರ್ಬಿಯಾದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಮಂಗಳವಾರ ನಟಾಶಾ ಮುಂಬೈನಿಂದ ಸರ್ಬಿಯಾಗೆ ಪ್ರಯಾಣ ಬೆಳೆಸಿದ್ದಾರೆ. ಮಗ ಅಗಸ್ತ್ಯ ಕೂಡ ಅವರ ಜೊತೆಗಿದ್ದ ಅನ್ನೋದು ವಿಶೇಷ.

Advertisment

ಇದನ್ನು ಓದಿ:ಜಿಯೋ-ಏರ್‌ಟೆಲ್​​ಗೆ ನೆಲ ಕಚ್ಚುವ ಆತಂಕ; ಸಂಚಲನ ಸೃಷ್ಟಿಸಿದ TATA-BSNL ಒಪ್ಪಂದ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment