Advertisment

ಮತ್ತೆ ಸುದ್ದಿಯಾದ ಪಾಂಡ್ಯ ಮತ್ತು ನಟಾಶಾ.. ಆ ಬಿಸಿಬಿಸಿ ಸುದ್ದಿ ಏನು..?

author-image
Ganesh
Updated On
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?
Advertisment
  • ಸೋಶಿಯಲ್ ಮೀಡಿಯಾದಲ್ಲಿ ಪಾಂಡ್ಯ, ನಟಾಶಾ ಬಗ್ಗೆ ಚರ್ಚೆ
  • ಡಿವೋರ್ಸ್​ ವದಂತಿಗೆ ಪುಷ್ಟಿ ನೀಡ್ತಿದೆ ಕೆಲವು ಸಂಗತಿಗಳು
  • ಮತ್ತೊಂದು ನಿಗೂಢ ಪೋಸ್ಟ್ ಮಾಡಿರುವ ಪಾಂಡ್ಯ ಪತ್ನಿ ನಟಾಶಾ

ಟೀಂ ಇಂಡಿಯಾದ ಸ್ಟಾರ್​ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಅವರ ಪತ್ನಿ ನಟಾಶಾ ನಡುವಿನ ಡಿವೋರ್ಸ್​ ವದಂತಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಜೋಡಿ ದೂರ ದೂರ ಎಂದು ಹೇಳಲಾಗುತ್ತಿದ್ದರೂ, ಅಧಿಕೃತ ಮಾಹಿತಿ ಸಿಕ್ಕಿಲ್ಲ.

Advertisment

ಪಾಂಡ್ಯ ಆಗಲಿ, ನಟಾಶಾ ಆಗಲಿ ಎಲ್ಲಿಯೂ ಕೂಡ ಡಿವೋರ್ಸ್​ ವದಂತಿಗೆ ಸ್ಪಷ್ಟನೆ ನೀಡದಿರೋದು ಅನುಮಾನಗಳು ಹಾಗೆಯೇ ಮುಂದುವರಿದಿದೆ. ಈ ಮಧ್ಯೆ ನಟಾಶಾ ಸೋಶಿಯಲ್ ಮೀಡಿಯಾದಲ್ಲಿ ಮಾಡ್ತಿರುವ ಕೆಲವು ಪೋಸ್ಟ್​ಗಳು ಡಿವೋರ್ಸ್ ಮಾಡಿರೋದನ್ನು ಕನ್ಫರ್ಮ್​​ ಮಾಡ್ತಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ವಿಶ್ವಕಪ್ ಗೆದ್ದ ಆಟಗಾರರಿಗೆ ನೀಡಿರುವ ಚಿನ್ನದ ಪದಕದ ಮೇಲೆ ಏನೆಂದು ಬರೆದಿದೆ ಗೊತ್ತಾ..?

publive-image

ನಟಾಶಾ ಅವರು ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಸ್​ನಲ್ಲಿ ತಾವು ಏನೋ ಕಳೆದುಕೊಂಡಿರುವ ಬಗ್ಗೆ ಪೋಸ್ಟ್ ಮಾಡಿದ್ದರು. ಅವರ ಈ ನಿಗೂಢ ಪೋಸ್ಟ್ ಭಾರೀ ಚರ್ಚೆ ಆಗ್ತಿದೆ. ಇದೇ ರೀತಿ ಹಲವು ನಿಗೂಢ ಪೋಸ್ಟ್​ಗಳನ್ನು ಮಾಡ್ತಿರುವ ನಟಾಶಾ, ಪಾಂಡ್ಯ ಕುರಿತ ಒಂದೇ ಒಂದು ಪೋಸ್ಟ್ ಶೇರ್ ಮಾಡಿಲ್ಲ. ಐಪಿಎಲ್​​ ಸಂದರ್ಭದಲ್ಲೂ ಅಂತರ ಕಾಯ್ದುಕೊಂಡಿದ್ದ ಅವರು, ವಿಶ್ವಕಪ್ ಗೆದ್ದಾಗಲೂ ಮೌನವಾಗಿಯೇ ಇದ್ದಾರೆ.

Advertisment

ಇತ್ತ ಪಾಂಡ್ಯ ನಿನ್ನೆ ತಮ್ಮ ಪುತ್ರನ ಜೊತೆ ವಿಶ್ವಕಪ್ ಗೆಲುವನ್ನು ಸಂಭ್ರಮಿಸುತ್ತಿರೋ ಫೋಟೋ ಶೇರ್ ಮಾಡಿದ್ದಾರೆ. ಅಲ್ಲಿಯೂ ಕೂಡ ಪತ್ನಿ ನಟಾಶಾ ಕಾಣಿಸಿಕೊಂಡಿಲ್ಲ. ಹಾಗೆಯೇ ನಿನ್ನೆ ಅಂಬಾನಿ ಪುತ್ರನ ಮದುವೆ ನಿಮಿತ್ತ ನಡೆದ ಸಂಗೀತ ಕಾರ್ಯಕ್ರಮದಲ್ಲೂ ಪಾಂಡ್ಯ ಜೊತೆ ನಟಾಶಾ ಇಲ್ಲ. ಬದಲಾಗಿ ಸಹೋದರ ಕೃನಾಲ್ ಪಾಂಡ್ಯ, ಸ್ನೇಹಿತ್ ಇಶಾನ್ ಕಿಶನ್ ಜೊತೆ ವೇದಿಕೆಗೆ ಆಗಮಿಸಿದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಹೀಗಾಗಿ ಪಾಂಡ್ಯ ಹಾಗೂ ನಟಾಶಾ ಎಲ್ಲಿಯೂ ಒಟ್ಟಿಗೆ ಇಲ್ಲದಿರೋದ್ರಿಂದ ಮತ್ತೆ ಡಿವೋರ್ಸ್ ವದಂತಿ ಮುನ್ನಲೆಗೆ ಬಂದಿದೆ.

ಇದನ್ನೂ ಓದಿ:Jio, Airtel, Vi; ನಿಮ್ಮ ಸಿಮ್ ಸಕ್ರಿಯವಾಗಿ ಇಡಲು ಕನಿಷ್ಠ ಎಷ್ಟು ರೀಚಾರ್ಜ್​ ಮಾಡಬೇಕು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment