/newsfirstlive-kannada/media/post_attachments/wp-content/uploads/2024/10/HARDIK-PANDYA-5.jpg)
ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹೊಸ ರೇಂಜ್ ರೋವರ್ ಖರೀದಿಸಿದ್ದಾರೆ. ಪಾಂಡ್ಯಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಅವರು ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ಕಾಣಬಹುದು. ಏರ್ಪೋರ್ಟ್ನಿಂದ ಹೊರಬಂದ ನಂತರ ಹಾರ್ದಿಕ್ ತಮ್ಮ ಹೊಸ ರೇಂಜ್ ರೋವರ್ ಕಾರಿನಲ್ಲಿ ಕುಳಿತುಕೊಂಡಿದ್ದಾರೆ.
ಇತ್ತೀಚೆಗೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಪಂದ್ಯದಲ್ಲಿ ಪಾಂಡ್ಯ ಟೀಂ ಇಂಡಿಯಾದ ಭಾಗವಾಗಿದ್ದರು. ಪಂದ್ಯ ಮುಗಿದ ನಂತರ ಭಾರತದ ಸ್ಟಾರ್ ಆಟಗಾರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿಂದ ನಿರ್ಗಮಿಸುವಾಗ ಹೊಸ ರೇಂಜ್ ರೋವರ್ ಅನ್ನು ಚಲಾಯಿಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ಇನ್ಮೇಲೆ ಸಲ್ಲುನ ಟಚ್ ಮಾಡೋದು ಅಷ್ಟು ಸುಲಭ ಅಲ್ಲ; ಈ ಕಾರಿನ ವಿಶೇಷತೆಯೇ ಹಂಗಿದೆ..! ಬೆಲೆ ಎಷ್ಟು ಕೋಟಿ?
ಇನ್ನು ಈ ಕಾರು ದೇಶದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. ಇತ್ತೀಚೆಗೆ ಬಾಲಿವುಡ್ ನಟಿ ಹಾಗೂ ಬಿಜೆಪಿ ನಾಯಕಿ ಕಂಗನಾ ರಣಾವತ್ ಕೂಡ ರೇಂಜ್ ರೋವರ್ ಖರೀದಿಸಿದ್ದರು. ಲ್ಯಾಂಡ್ ರೋವರ್ ರೇಂಜ್ ರೋವರ್ ( Land Rover Range Rover) 2996 cc, 2997 cc ಮತ್ತು 2998 cc ಎಂಜಿನ್‌ಗಳೊಂದಿಗೆ ಲಭ್ಯವಿದೆ. ಈ ಎಂಜಿನ್ 346 bhp ನಿಂದ 394 bhp ವರೆಗಿನ ಶಕ್ತಿಯನ್ನು ಒದಗಿಸುತ್ತದೆ. 550 Nm ನಿಂದ 700 Nm ವರೆಗಿನ ಟಾರ್ಕ್ ಶಕ್ತಿ ಹೊಂದಿದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 234 ರಿಂದ 242 ಕಿಮೀ. ರೇಂಜ್ ರೋವರ್ SV ರಣಥಂಬೋರ್ (Ranthambore) ಆವೃತ್ತಿಯು ಇತ್ತೀಚಿನ ಮಾದರಿಯಾಗಿದೆ. ಈ ವಾಹನದ ಬೆಲೆ 5.72 ಕೋಟಿ ರೂಪಾಯಿ ಆಗಿದೆ.
ರೇಂಜ್ ರೋವರ್ ಬೆಲೆ
ಲ್ಯಾಂಡ್ ರೋವರ್ ರೇಂಜ್ ರೋವರ್ನ ಹಲವು ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ರೇಂಜ್ ರೋವರ್ ಬೆಲೆ 2.36 ಕೋಟಿ ರೂ. ರೇಂಜ್ ರೋವರ್ ಸ್ಪೋರ್ಟ್ (range rover sport ) ಬೆಲೆ 1.40 ಕೋಟಿ ರೂಪಾಯಿ, ರೇಂಜ್ ರೋವರ್ ವೆಲಾರ್ (velar) ಭಾರತದಲ್ಲಿ ರೂ 87.90 ಲಕ್ಷಕ್ಕೆ ಲಭ್ಯವಿದೆ. ರೇಂಜ್ ರೋವರ್ ಇವೊಕ್ ಬೆಲೆ 67.90 ಲಕ್ಷ ರೂಪಾಯಿ.
ಇದನ್ನೂ ಓದಿ:ವಿರಾಟ್, ಅನುಷ್ಕಾ ಕುಡಿಯುವ ನೀರು ಫ್ರಾನ್ಸ್ನಿಂದ ಬರುತ್ತೆ! ಒಂದು ಲೀಟರ್ಗೆ ಎಷ್ಟು ಬೆಲೆ ಗೊತ್ತಾ?
Hardik Pandya arrived back in Mumbai from Dubai.
He bought a new Range Rover😉 pic.twitter.com/lNG6JjCE8y— Rohan Gangta (@rohan_gangta) October 18, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ