/newsfirstlive-kannada/media/post_attachments/wp-content/uploads/2024/07/PANDYA_NEW_STYLE.jpg)
ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಿದ್ದು ಯಶಸ್ಸಿಗಾಗಿ ಇಡೀ ತಂಡದ ಆಟಗಾರರು ಶ್ರಮಿಸಿದ್ದಾರೆ. ಈ ಎಲ್ಲರ ಪೈಕಿ ಹಾರ್ದಿಕ್ಗೆ ಈ ವಿಶ್ವಕಪ್ ಮೋಸ್ಟ್ ಸ್ಪೆಷಲ್ ಆಗಿತ್ತು.
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಸೂಪರ್ ಸ್ಟಾರ್. ಟಿ20 ವಿಶ್ವಕಪ್ ಗೆಲುವಿನ ರೂವಾರಿ. ಕೊನೆ ಓವರ್ ಬೌಲ್ ಮಾಡಿ ಗೆಲುವಿನ ದಡ ಮುಟ್ಟಿಸಿದ್ದ ಈ ಸ್ಟಾರ್, ಒಂದು ಕ್ಷಣ ನೆಲಕ್ಕೆ ಕುಸಿದು ಬಿದ್ದರು. ಮುಖದಲ್ಲಿ ಸಾಧಿಸಿದ ಹೆಮ್ಮೆಯ ಕ್ಷಣವಾಗಿತ್ತು. ಸಂತೋಷದ ಕಣ್ಣೀರಧಾರೆ ಜಿನುಗುತ್ತಿತ್ತು. ಕಣ್ಣಿಂದ ಹೊರಡುತ್ತಿದ್ದ ಪ್ರತಿ ಹನಿಯೂ ಹಾರ್ದಿಕ್ ಎದೆಯಲ್ಲಿ ಹೂತಿದ್ದ ನೋವಿನ ಒಂದೊಂದೇ ಕಥೆಯನ್ನ ಬಿಡಿಸಿ ಹೇಳುತ್ತಿತ್ತು.
ಇದನ್ನೂ ಓದಿ:25ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸಾರಿಗೆ ಬಸ್ ಪಲ್ಟಿ.. ಡ್ರೈವರ್ ಸೇರಿ ಮೂವರು ಗಂಭೀರ; ಆಕ್ಸಿಡೆಂಟ್ ಆಗಿದ್ದೇಗೆ?
ಅಂದು ವಿಶ್ವಕಪ್ ಸೋಲಿಗೆ ಕಾರಣವಾಗಿದ್ದ ಹಾರ್ದಿಕ್
ವಡೋದರದ ಲೋಕಲ್ ಮೈದಾನಗಳಲ್ಲಿ ಬ್ಯಾಟ್ ಬೀಸುತ್ತಿದ್ದ ಹಾರ್ದಿಕ್ಗೆ, ಟೀಮ್ ಇಂಡಿಯಾಗೆ ಆಡಬೇಕೆಂಬ ಕನಸಿತ್ತು. ಸಣ್ಣ ವಯಸ್ಸಿನಲ್ಲೇ ಸಂಕಷ್ಟಗಳ ಬೌನ್ಸರ್ಗಳಿಗೆ ಪುಲ್ ಶಾಟ್ ಹೊಡೆದು, ಟೀಮ್ ಇಂಡಿಯಾಗೂ ಎಂಟ್ರಿ ನೀಡಿದರು. ನೋಡ ನೋಡುತ್ತಲೇ ಸ್ಟಾರ್ ಆಲ್ರೌಂಡರ್ ಆಗಿ ಬೆಳೆದರು. ಕಪಿಲ್ ದೇವ್ ಬಳಿಕ ಭಾರತ ಕಂಡ ಶ್ರೇಷ್ಠ ಆಲ್ರೌಂಡರ್ ಎಂದೇ ಗುರುತಿಸಿಕೊಂಡ್ರು. ಯಶಸ್ಸಿನ ಅಲೆಯಲ್ಲಿದ್ದ ಹಾರ್ದಿಕ್, ಭಾರತೀಯ ಅಭಿಮಾನಿಗಳಿಂದಲೇ ಅಪಹಾಸ್ಯಕ್ಕೆ ಗುರಿಯಾದರು. ಟೀಮ್ ಇಂಡಿಯಾದಿಂದಲೂ ಹೊರಬಿದ್ದಿದ್ದರು. ಇದಕ್ಕೆ ಕಾರಣ 2021ರ ಟಿ20 ವಿಶ್ವಕಪ್.
ಆಲ್ರೌಂಡರ್ ಆಗಿ ಆಯ್ಕೆಯಾಗಿದ್ದ ಹಾರ್ದಿಕ್, ಬೌಲಿಂಗ್ ಮಾಡಲು ಸಂಪೂರ್ಣ ಫಿಟ್ ಇರಲಿಲ್ಲ. ಇದಕ್ಕೆ ಅಂದು ಟಿ20 ವಿಶ್ವಕಪ್ನ ಲೀಗ್ ಸ್ಟೇಜ್ನಿಂದಲೇ ಟೀಮ್ ಇಂಡಿಯಾ ಹೊರಬಿದಿತ್ತು. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದಲೇ ಯಶಸ್ಸಿನ ಉತ್ತುಂಗಕ್ಕೇರಿದ್ದ ಪಾಂಡ್ಯಗೆ, ಇದೇ ಫ್ರಾಂಚೈಸಿಯ ನಡೆಯಿಂದ ಚಪ್ರಿ ಎಂಬ ಪಟ್ಟವೂ ಸಿಕ್ಕಿತ್ತು. ಕಾರಣ ರೋಹಿತ್ ಬದಲಾಗಿ ಹಾರ್ದಿಕ್ಗೆ ನಾಯಕ ಪಟ್ಟ ನೀಡಿದ್ದಾಗಿತ್ತು. 2 ತಿಂಗಳ ಕಾಲ ಫ್ಯಾನ್ಸ್, ಪಾಂಡ್ಯ ತಲೆ ಎತ್ತದಂತೆ ಮಾಡಿದ್ರು. ಈ ಬಗ್ಗೆ ಒಂದು ಮಾತು ಬಹಿರಂಗವಾಗಿ ಮಾತನಾಡದ ಹಾರ್ದಿಕ್ ಎಷ್ಟು ನೊಂದಿದ್ದರು ಅನ್ನೋದು ಅವರಿಗೆ ಮಾತ್ರ ಗೊತ್ತು.
ಈಗ ಅಭಿಮಾನಿಗಳ ಪಾಲಿನ ಹೀರೋ
ಐಪಿಎಲ್ನಲ್ಲಿ ಸತತ ವೈಫಲ್ಯದ ನಡುವೆ ಪಾಂಡ್ಯ, ಟಿ20 ವಿಶ್ವಕಪ್ಗೆ ಆಯ್ಕೆಯಾಗಿದ್ದರು. ಇದಕ್ಕೆ ಹಲವರು ಪ್ರಶ್ನೆ ಮಾಡಿದ್ದರು. ತಮ್ಮ ವಿರುದ್ಧದ ಎಲ್ಲ ಟೀಕೆಗಳಿಗೆ ಹಾರ್ದಿಕ್, ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಉತ್ತರ ನೀಡಿದ್ರು. ಬ್ಯಾಟಿಂಗ್, ಬೌಲಿಂಗ್ನಲ್ಲಿ ಮಿಂಚು ಹರಿಸಿದ ಪಾಂಡ್ಯ, 6 ಇನ್ನಿಂಗ್ಸ್‌ಗಳಿಂದ 48 ಸರಾಸರಿಯಲ್ಲಿ 144 ರನ್ ಗಳಿಸಿದ್ರೆ, ಬೌಲಿಂಗ್ನಲ್ಲಿ 11 ವಿಕೆಟ್ ಪಡೆದು ಮಿಂಚಿದ್ರು.
ಇದನ್ನೂ ಓದಿ: ಕಾಲೇಜು ಮುಂಭಾಗ ಸ್ಕಿಡ್ ಆಗಿ ಬಿದ್ದ ಬೈಕ್.. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು, ಯುವಕ ಗಂಭೀರ
ಅಷ್ಟೇ ಅಲ್ಲ, ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಸೌತ್ ಆಫ್ರಿಕಾಗೆ ಶಾಕ್ ನೀಡಿದ್ರು. ಹೆನ್ರಿಚ್ ಕ್ಲಾಸೆನ್ ವಿಕೆಟ್ ಪಡೆದು ತಂಡಕ್ಕೆ ತಿರುವು ನೀಡಿದ್ರು. ಕೊನೆ ಓವರ್ನಲ್ಲಿ 16 ರನ್ ಡಿಫೆಂಡ್ ಮಾಡಿಕೊಂಡು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿನ ಹೀರೋ ಆಗಿದ್ದಾರೆ. ಆದ್ರೀಗ ಮನದಾಳದ ನೋವನ್ನು ಹೊರಹಾಕಿದ್ದಾರೆ.
HARDIK PANDYA - YOU CHAMPION!
An emotional speech by Hardik about his tough times, he redeemed himself like a true hero. ???pic.twitter.com/l8mwdyqqIs
— Mufaddal Vohra (@mufaddal_vohra)
HARDIK PANDYA - YOU CHAMPION!
An emotional speech by Hardik about his tough times, he redeemed himself like a true hero. 🫡🇮🇳pic.twitter.com/l8mwdyqqIs— Mufaddal Vohra (@mufaddal_vohra) June 30, 2024
">June 30, 2024
ಈ ಒಂದು ಮಾತು ಸಾಕು ಹಾರ್ದಿಕ್, ನೋವನ್ನೆಲ್ಲ ವಿಷಕಂಠನಂತೆ ನುಂಗಿದ್ದರು ಅನ್ನೋದಕ್ಕೆ. ಅಭಿಮಾನಿಗಳ ಟೀಕೆಗೆ ನೊಂದಿದ್ದರು ಅನ್ನೋಕೆ. ಆ ಕೊನೆ ಓವರ್ ವೇಳೆ ಏನೆಲ್ಲ ಕಷ್ಟದ ದಿನಗಳು ಕಣ್ಮಂದೆ ಬಂದಿರಬಹುದು ಎಂದು ಊಹಿಸಲು. ಅದೇನೇ ಆಗಿರಲಿ, ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯರ ಮ್ಯಾಚ್ ವಿನ್ನಿಂಗ್ ಆಟಕ್ಕೊಂದು ಸೆಲ್ಯೂಟ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ