newsfirstkannada.com

ಪಾಂಡ್ಯ ಮ್ಯಾಚ್ ವಿನ್ನಿಂಗ್ ಆಟಕ್ಕೆ ಸೆಲ್ಯೂಟ್.. ಗೆಲುವಿನ ಹಿಂದೆ ಹಾರ್ದಿಕ್ ನುಂಗಿರುವ ನೋವುಗಳು ಎಷ್ಟು ಗೊತ್ತಾ..?

Share :

Published July 1, 2024 at 12:52pm

  ಮನದಾಳದ ನೋವನ್ನು ಹೊರಹಾಕಿರುವ ಹಾರ್ದಿಕ್ ಪಾಂಡ್ಯ

  6 ಇನ್ನಿಂಗ್ಸ್‌ಗಳಲ್ಲಿ ಪಾಂಡ್ಯ ಎಷ್ಟು, ವಿಕೆಟ್​, ರನ್​ ಗಳಿಸಿದ್ದಾರೆ?

  2024ರ ಐಪಿಎಲ್​​ನಿಂದ ಹಾರ್ದಿಕ್ ಪಾಂಡ್ಯಗೆ ಹಲವು ಸಂಕಷ್ಟ

ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಿದ್ದು ಯಶಸ್ಸಿಗಾಗಿ ಇಡೀ ತಂಡದ ಆಟಗಾರರು ಶ್ರಮಿಸಿದ್ದಾರೆ. ಈ ಎಲ್ಲರ ಪೈಕಿ ಹಾರ್ದಿಕ್​ಗೆ ಈ ವಿಶ್ವಕಪ್​ ಮೋಸ್ಟ್ ಸ್ಪೆಷಲ್​ ಆಗಿತ್ತು.

ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಸೂಪರ್ ಸ್ಟಾರ್​. ಟಿ20 ವಿಶ್ವಕಪ್ ಗೆಲುವಿನ ರೂವಾರಿ. ಕೊನೆ ಓವರ್ ಬೌಲ್​ ಮಾಡಿ ಗೆಲುವಿನ ದಡ ಮುಟ್ಟಿಸಿದ್ದ ಈ ಸ್ಟಾರ್​, ಒಂದು ಕ್ಷಣ ನೆಲಕ್ಕೆ ಕುಸಿದು ಬಿದ್ದರು. ಮುಖದಲ್ಲಿ ಸಾಧಿಸಿದ ಹೆಮ್ಮೆಯ ಕ್ಷಣವಾಗಿತ್ತು. ಸಂತೋಷದ ಕಣ್ಣೀರಧಾರೆ ಜಿನುಗುತ್ತಿತ್ತು. ಕಣ್ಣಿಂದ ಹೊರಡುತ್ತಿದ್ದ ಪ್ರತಿ ಹನಿಯೂ ಹಾರ್ದಿಕ್​ ಎದೆಯಲ್ಲಿ ಹೂತಿದ್ದ ನೋವಿನ ಒಂದೊಂದೇ ಕಥೆಯನ್ನ ಬಿಡಿಸಿ ಹೇಳುತ್ತಿತ್ತು.

ಇದನ್ನೂ ಓದಿ: 25ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸಾರಿಗೆ ಬಸ್​ ಪಲ್ಟಿ.. ಡ್ರೈವರ್ ಸೇರಿ ಮೂವರು ಗಂಭೀರ; ಆಕ್ಸಿಡೆಂಟ್ ಆಗಿದ್ದೇಗೆ?

ಅಂದು ವಿಶ್ವಕಪ್ ಸೋಲಿಗೆ ಕಾರಣವಾಗಿದ್ದ ಹಾರ್ದಿಕ್

ವಡೋದರದ ಲೋಕಲ್ ಮೈದಾನಗಳಲ್ಲಿ ಬ್ಯಾಟ್ ಬೀಸುತ್ತಿದ್ದ ಹಾರ್ದಿಕ್​​ಗೆ, ಟೀಮ್ ಇಂಡಿಯಾಗೆ ಆಡಬೇಕೆಂಬ ಕನಸಿತ್ತು. ಸಣ್ಣ ವಯಸ್ಸಿನಲ್ಲೇ ಸಂಕಷ್ಟಗಳ ಬೌನ್ಸರ್​​​ಗಳಿಗೆ ಪುಲ್ ಶಾಟ್ ಹೊಡೆದು, ಟೀಮ್ ಇಂಡಿಯಾಗೂ ಎಂಟ್ರಿ ನೀಡಿದರು. ನೋಡ ನೋಡುತ್ತಲೇ ಸ್ಟಾರ್ ಆಲ್​ರೌಂಡರ್ ಆಗಿ ಬೆಳೆದರು. ಕಪಿಲ್ ದೇವ್ ಬಳಿಕ ಭಾರತ ಕಂಡ ಶ್ರೇಷ್ಠ ಆಲ್​ರೌಂಡರ್ ಎಂದೇ ಗುರುತಿಸಿಕೊಂಡ್ರು. ಯಶಸ್ಸಿನ ಅಲೆಯಲ್ಲಿದ್ದ ಹಾರ್ದಿಕ್​, ಭಾರತೀಯ ಅಭಿಮಾನಿಗಳಿಂದಲೇ ಅಪಹಾಸ್ಯಕ್ಕೆ ಗುರಿಯಾದರು. ಟೀಮ್ ಇಂಡಿಯಾದಿಂದಲೂ ಹೊರಬಿದ್ದಿದ್ದರು. ಇದಕ್ಕೆ ಕಾರಣ 2021ರ ಟಿ20 ವಿಶ್ವಕಪ್.

ಆಲ್​​ರೌಂಡರ್ ಆಗಿ ಆಯ್ಕೆಯಾಗಿದ್ದ ಹಾರ್ದಿಕ್, ಬೌಲಿಂಗ್ ಮಾಡಲು ಸಂಪೂರ್ಣ ಫಿಟ್ ಇರಲಿಲ್ಲ. ಇದಕ್ಕೆ ಅಂದು ಟಿ20 ವಿಶ್ವಕಪ್​​ನ ಲೀಗ್​ ಸ್ಟೇಜ್​ನಿಂದಲೇ ಟೀಮ್ ಇಂಡಿಯಾ ಹೊರಬಿದಿತ್ತು. ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದಲೇ ಯಶಸ್ಸಿನ ಉತ್ತುಂಗಕ್ಕೇರಿದ್ದ ಪಾಂಡ್ಯಗೆ, ಇದೇ ಫ್ರಾಂಚೈಸಿಯ ನಡೆಯಿಂದ ಚಪ್ರಿ ಎಂಬ ಪಟ್ಟವೂ ಸಿಕ್ಕಿತ್ತು. ಕಾರಣ ರೋಹಿತ್​​​​​​​​​ ಬದಲಾಗಿ ಹಾರ್ದಿಕ್​ಗೆ ನಾಯಕ ಪಟ್ಟ ನೀಡಿದ್ದಾಗಿತ್ತು. 2 ತಿಂಗಳ ಕಾಲ ಫ್ಯಾನ್ಸ್, ಪಾಂಡ್ಯ ತಲೆ ಎತ್ತದಂತೆ ಮಾಡಿದ್ರು. ಈ ಬಗ್ಗೆ ಒಂದು ಮಾತು ಬಹಿರಂಗವಾಗಿ ಮಾತನಾಡದ ಹಾರ್ದಿಕ್ ಎಷ್ಟು ನೊಂದಿದ್ದರು ಅನ್ನೋದು ಅವರಿಗೆ ಮಾತ್ರ ಗೊತ್ತು.

ಈಗ ಅಭಿಮಾನಿಗಳ ಪಾಲಿನ ಹೀರೋ​

ಐಪಿಎಲ್​ನಲ್ಲಿ ಸತತ ವೈಫಲ್ಯದ ನಡುವೆ ಪಾಂಡ್ಯ, ಟಿ20 ವಿಶ್ವಕಪ್​​ಗೆ ಆಯ್ಕೆಯಾಗಿದ್ದರು. ಇದಕ್ಕೆ ಹಲವರು ಪ್ರಶ್ನೆ ಮಾಡಿದ್ದರು. ತಮ್ಮ ವಿರುದ್ಧದ ಎಲ್ಲ ಟೀಕೆಗಳಿಗೆ ಹಾರ್ದಿಕ್, ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ ಉತ್ತರ ನೀಡಿದ್ರು. ಬ್ಯಾಟಿಂಗ್, ಬೌಲಿಂಗ್​ನಲ್ಲಿ ಮಿಂಚು ಹರಿಸಿದ ಪಾಂಡ್ಯ, 6 ಇನ್ನಿಂಗ್ಸ್‌ಗಳಿಂದ 48 ಸರಾಸರಿಯಲ್ಲಿ 144 ರನ್ ಗಳಿಸಿದ್ರೆ, ಬೌಲಿಂಗ್​ನಲ್ಲಿ 11 ವಿಕೆಟ್ ಪಡೆದು ಮಿಂಚಿದ್ರು.

ಇದನ್ನೂ ಓದಿ: ಕಾಲೇಜು ಮುಂಭಾಗ ಸ್ಕಿಡ್ ಆಗಿ ಬಿದ್ದ ಬೈಕ್.. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು, ಯುವಕ ಗಂಭೀರ

ಅಷ್ಟೇ ಅಲ್ಲ, ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಸೌತ್ ಆಫ್ರಿಕಾಗೆ ಶಾಕ್ ನೀಡಿದ್ರು. ಹೆನ್ರಿಚ್ ಕ್ಲಾಸೆನ್ ವಿಕೆಟ್ ಪಡೆದು ತಂಡಕ್ಕೆ ತಿರುವು ನೀಡಿದ್ರು. ಕೊನೆ ಓವರ್​ನಲ್ಲಿ 16 ರನ್ ಡಿಫೆಂಡ್ ಮಾಡಿಕೊಂಡು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿನ ಹೀರೋ ಆಗಿದ್ದಾರೆ. ಆದ್ರೀಗ ಮನದಾಳದ ನೋವನ್ನು ಹೊರಹಾಕಿದ್ದಾರೆ.

ಈ ಒಂದು ಮಾತು ಸಾಕು ಹಾರ್ದಿಕ್, ನೋವನ್ನೆಲ್ಲ ವಿಷಕಂಠನಂತೆ ನುಂಗಿದ್ದರು ಅನ್ನೋದಕ್ಕೆ. ಅಭಿಮಾನಿಗಳ ಟೀಕೆಗೆ ನೊಂದಿದ್ದರು ಅನ್ನೋಕೆ. ಆ ಕೊನೆ ಓವರ್​​​ ವೇಳೆ ಏನೆಲ್ಲ ಕಷ್ಟದ ದಿನಗಳು ಕಣ್ಮಂದೆ ಬಂದಿರಬಹುದು ಎಂದು ಊಹಿಸಲು. ಅದೇನೇ ಆಗಿರಲಿ, ವಿಶ್ವಕಪ್​ನಲ್ಲಿ ಹಾರ್ದಿಕ್ ಪಾಂಡ್ಯರ ಮ್ಯಾಚ್ ವಿನ್ನಿಂಗ್ ಆಟಕ್ಕೊಂದು ಸೆಲ್ಯೂಟ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಂಡ್ಯ ಮ್ಯಾಚ್ ವಿನ್ನಿಂಗ್ ಆಟಕ್ಕೆ ಸೆಲ್ಯೂಟ್.. ಗೆಲುವಿನ ಹಿಂದೆ ಹಾರ್ದಿಕ್ ನುಂಗಿರುವ ನೋವುಗಳು ಎಷ್ಟು ಗೊತ್ತಾ..?

https://newsfirstlive.com/wp-content/uploads/2024/07/PANDYA_NEW_STYLE.jpg

Load More