newsfirstkannada.com

ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಕೈಕೊಟ್ಟ ಹಾರ್ದಿಕ್​​ ಪಾಂಡ್ಯ; ಆಗಿದ್ದೇನು..?

Share :

Published May 26, 2024 at 6:06pm

Update May 26, 2024 at 6:10pm

  ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ಹಾರ್ದಿಕ್​​ ಪಾಂಡ್ಯಗೆ ಸಂಕಷ್ಟ

  ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಫುಲ್​ ಡಿಸ್ಟರ್ಬ್​ ಆದ್ರಾ ಹಾರ್ದಿಕ್​ ಪಾಂಡ್ಯ?

  ಟಿ20 ವಿಶ್ವಕಪ್​​​ಗಾಗಿ ಯುಎಸ್​ಗೆ ಹೊರಟ ಟೀಮ್​ ಇಂಡಿಯಾ ಪ್ಲೇಯರ್ಸ್​​​

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗಾಗಿ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ಸಿಯಿಂದ ರೋಹಿತ್​ ಶರ್ಮಾರನ್ನು ಕಿತ್ತು ಹಾರ್ದಿಕ್​ ಪಾಂಡ್ಯರನ್ನು ನೇಮಿಸಲಾಯ್ತು. ಅಂದಿನಿಂದಲೂ ಹಾರ್ದಿಕ್​ ಪಾಂಡ್ಯ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಐಪಿಎಲ್​ನಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡದ ಹಾರ್ದಿಕ್​​​ ನಿಂದನೆಗೆ ಗುರಿಯಾದ್ರು. ಈಗ ತಮ್ಮ ದಾಂಪತ್ಯ ಜೀವನದಲ್ಲೂ ಬಿರುಕು ಮೂಡಿದೆ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆಯೇ ಹಾರ್ದಿಕ್​ ಡಿಸ್ಟರ್ಬ್​​ ಆಗಿದ್ದಾರೆ.

ಇತ್ತ T20 ವಿಶ್ವಕಪ್​ಗೆ ಟೀಮ್​ ಇಂಡಿಯಾದ ಆಟಗಾರರು ಈಗಾಗಲೇ ಅಮೆರಿಕ ಮತ್ತು ವೆಸ್ಟ್ ಇಂಡೀಸ್​​ಗೆ ಹೊರಟಿದ್ದಾರೆ. ಮೆಗಾ ಟೂರ್ನಿಗೆ ಹೊರಟ ಮೊದಲ ಬ್ಯಾಚ್​ನಲ್ಲಿ ಹಾರ್ದಿಕ್​ ಪಾಂಡ್ಯ ಕಾಣಿಸಿಕೊಂಡಿಲ್ಲ. ಕ್ಯಾಪ್ಟನ್​​ ರೋಹಿತ್​, ಶಿವಂ ದುಬೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಮತ್ತು ರಿಷಬ್ ಪಂತ್ ಮಾತ್ರ ಇದ್ದು, ಹಾರ್ದಿಕ್ ಪಾಂಡ್ಯ ಎಲ್ಲೂ ಕಾಣಲಿಲ್ಲ.

ಬಿಸಿಸಿಐ ಪೋಸ್ಟ್​ ಮಾಡಿರೋ ವಿಡಿಯೋದಲ್ಲೂ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಇದ್ದರು. ಅಲ್ಲೂ ಹಾರ್ದಿಕ್​​ ಇರಲಿಲ್ಲ. ಮುಂಬೈ ಇಂಡಿಯನ್ಸ್​ ತಂಡದಲ್ಲಿದ್ದ ಹಾರ್ದಿಕ್ ಮೊದಲ ಬ್ಯಾಚ್‌ ಭಾಗವಾಗಬೇಕಿತ್ತು. ಆದರೆ, ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಕಾಣದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹಾರ್ದಿಕ್-ನತಾಶಾ ದಾಂಪತ್ಯದಲ್ಲಿ ಬಿರುಕು

ದಂಪತಿ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ರೂಮರ್ಸ್​ ಇವೆ. ನತಾಶಾ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಿಂದ ‘ಪಾಂಡ್ಯ’ ಸರ್​ನೇಮ್​ ತೆಗೆದುಹಾಕಿದ್ದಾರೆ. ಐಪಿಎಲ್​ನಿಂದಲೂ ದೂರ ಇದ್ದ ನತಾಶಾ ಹಾರ್ದಿಕ್​​ ಜತೆ ಕಾಣಿಸಿಕೊಳ್ಳದಿರುವುದು ಈ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: RCB ಫ್ಯಾನ್ಸ್​ಗೆ ಗುಡ್​​ನ್ಯೂಸ್​​.. ಐಪಿಎಲ್ ನಿವೃತ್ತಿ ಬೆನ್ನಲ್ಲೇ ದಿನೇಶ್​​ ಕಾರ್ತಿಕ್​​ಗೆ ಹೊಸ ಜವಾಬ್ದಾರಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಕೈಕೊಟ್ಟ ಹಾರ್ದಿಕ್​​ ಪಾಂಡ್ಯ; ಆಗಿದ್ದೇನು..?

https://newsfirstlive.com/wp-content/uploads/2024/05/Hardik-Pandya_Team-India.jpg

Load More