newsfirstkannada.com

ಕಿಲಾಡಿ ಹಾರ್ದಿಕ್ ಪಾಂಡ್ಯ.. ನತಾಶಾಗೆ ಡಿವೋರ್ಸ್‌ ಕೊಟ್ರು 70% ರಷ್ಟು ಆಸ್ತಿ ಕೊಡೋಕೆ ಆಗಲ್ವಂತೆ; ಯಾಕೆ ಗೊತ್ತಾ?

Share :

Published May 25, 2024 at 6:14pm

  ಹಾರ್ದಿಕ್​ ಪಾಂಡ್ಯ, ನತಾಶಾ ಸ್ಟಾಂಕೋವಿಕ್ ದಂಪತಿ ಮಧ್ಯೆ ಬಿರುಕು?

  ಈ ಬಾರಿ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಹೀನಾಯ ನಿರ್ಗಮನ

  ವಿಚ್ಛೇದನ ವದಂತಿ ನಡುವೆ ಕೋಟಿ ಕೋಟಿ ಆಸ್ತಿ ನತಾಶಾ ಪಾಲಾಗುತ್ತಾ?

ಸೋಶಿಯಲ್​ ಮೀಡಿಯಾದಲ್ಲಿ ಹಾರ್ದಿಕ್​ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ಈ ಇಬ್ಬರದ್ದೇ ಸುದ್ದಿ. ಈ ಸಲ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್​ ಹೀನಾಯ ನಿರ್ಗಮನವಾದರೆ ಇತ್ತ ಪಾಂಡ್ಯ ಕುಟುಂಬದಲ್ಲಿ ಬಿರುಗಾಳಿಯೇ ಎದ್ದಿದೆ. ಹಾರ್ದಿಕ್​ ಪಾಂಡ್ಯ ಹಾಗೂ ಪತ್ನಿ ನತಾಶಾ ಬೇರ್ಪಟ್ಟಿದ್ದಾರೆ ಎನ್ನಲಾಗ್ತಿದ್ದು ಸದ್ಯದಲ್ಲೇ ಡಿವೋರ್ಸ್​ ನೀಡಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಪಾಂಡ್ಯ ಶೇಕಡಾ 70 ರಷ್ಟು ಆಸ್ತಿ ಕೊಡ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಆದ್ರೆ ಆಸ್ತಿಯೆಲ್ಲ ತಾಯಿಯ ಹೆಸರಲ್ಲಿದೆ ಎಂದು ಹೇಳಲಾಗ್ತಿದೆ.

ಗುಜರಾತ್ ಟೈಟನ್ಸ್ ತಂಡದಿಂದ ಮುಂಬೈ​ಗೆ ಕ್ಯಾಪ್ಟನ್​ ಆಗಿ ಹಾರ್ದಿಕ್ ಪಾಂಡ್ಯ ಬಂದರೋ ಅವಾಗಿನಿಂದ ಶನಿ ಹೆಗಲೇರಿದಂತೆ ಅಗಿದೆ. ಪಾಂಡ್ಯ ತನ್ನ ಪತ್ನಿ ನತಾಶಾ ಸ್ಟಾಂಕೋವಿಕ್​ಗೆ ವಿಚ್ಛೇದನ ನೀಡಿದ್ದೇ ಆದಲ್ಲಿ, ತನ್ನ ಆಸ್ತಿಯ ಶೇ.70ರಷ್ಟನ್ನು ನೀಡಬೇಕಾಗುತ್ತದೆ ಎನ್ನಲಾಗುತ್ತಿದೆ. ಏಕೆಂದರೆ ನತಾಶಾ ಸೆರ್ಬಿಯಾ ರಾಷ್ಟ್ರದವರು. ಡಿವೋರ್ಸ್​ ನೀಡಿದ ಮೇಲೆ ಅವರು ತಮ್ಮ ಜೀವನಾಂಶವನ್ನು ಪಾಂಡ್ಯರಿಂದ ಪಡೆಯುವಾಗ ಸರ್ಬಿಯನ್ ಕರೆನ್ಸಿ ದಿನಾರ್​ನಲ್ಲಿ ಪಡೆದುಕೊಂಡರೆ ಶೇ.70ರಷ್ಟನ್ನು ಅವರ ಕೈ ಸೇರುತ್ತದೆ. ಆದರೆ ಇಲ್ಲಿ ಟ್ವಿಸ್ಟ್ ಏನೆಂದರೆ ಹಾರ್ದಿಕ್ ಪಾಂಡ್ಯ ಆಸ್ತಿಯನ್ನೆಲ್ಲ ತನ್ನ ತಾಯಿ ನಳಿನಿ ಪಾಂಡ್ಯ ಹೆಸರಲ್ಲಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಹೀಗಾಗಿ ಪಾಂಡ್ಯ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ. ಹೀಗಾಗಿ ಶೇಕಡಾ 50% ರಷ್ಟು ಕೂಡ ಕೊಡೋಕೆ ಆಗಲ್ಲ. ನನಗೆ ನನ್ನ ಮೇಲೆ ನಂಬಿಕೆ ಇಲ್ಲ. ನಾನು ನನ್ನ ಹೆಸರಿನಲ್ಲಿ ಯಾವುದೇ ಆಸ್ತಿ ಮಾಡಿಲ್ಲ. ನಮ್ಮ ಆಸ್ತಿಯೆಲ್ಲ ಬಹುತೇಕ ತಾಯಿ ಹೆಸರಲ್ಲಿದೆ. ಉಳಿದದ್ದು ತಂದೆ, ಸಹೋದರ ಹೆಸರಲ್ಲಿದೆ. ಆದ್ದರಿಂದ ನಾನು ಯಾರಿಗೂ 50% ರಷ್ಟು ಆಸ್ತಿ ನೀಡಲು ಇಷ್ಟವಿಲ್ಲ. ಹೀಗಾಗಿಯೇ ಕುಟುಂಬದವರ ಹೆಸರಲ್ಲಿ ಆಸ್ತಿಯೆಲ್ಲ ಮಾಡಿದ್ದೇನೆ ಎಂದು ಪಾಂಡ್ಯ ಹೇಳಿದಂತ ವಿಡಿಯೋ ತುಣುಕೊಂದು ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಲಾಡಿ ಹಾರ್ದಿಕ್ ಪಾಂಡ್ಯ.. ನತಾಶಾಗೆ ಡಿವೋರ್ಸ್‌ ಕೊಟ್ರು 70% ರಷ್ಟು ಆಸ್ತಿ ಕೊಡೋಕೆ ಆಗಲ್ವಂತೆ; ಯಾಕೆ ಗೊತ್ತಾ?

https://newsfirstlive.com/wp-content/uploads/2024/05/HARDIK_PANDYA.jpg

Load More