ಪಾಕ್ ಟೀಮ್ ವೇತನಕ್ಕಿಂತ ಹಾರ್ದಿಕ್ ಪಾಂಡ್ಯ ವಾಚ್ ದುಬಾರಿ.. ಬೆಲೆ ಕೇಳಿದ್ರೆ, ಶಾಕ್ ಆಗುತ್ತೆ!

author-image
Bheemappa
Updated On
ಪಾಕ್ ಟೀಮ್ ವೇತನಕ್ಕಿಂತ ಹಾರ್ದಿಕ್ ಪಾಂಡ್ಯ ವಾಚ್ ದುಬಾರಿ.. ಬೆಲೆ ಕೇಳಿದ್ರೆ, ಶಾಕ್ ಆಗುತ್ತೆ!
Advertisment
  • ಕೋಟಿ ಕೋಟಿ ರೂಪಾಯಿಯ ಈ ವಾಚ್​ ವಿಶ್ವದಲ್ಲಿ ಎಷ್ಟಿವೆ?
  • ಹೈವೋಲ್ಟೇಜ್ ಮ್ಯಾಚ್​ನಲ್ಲಿ ಗಮನ ಸೆಳೆದ ಹಾರ್ದಿಕ್ ವಾಚ್
  • ಐಷಾರಾಮಿ ವಾಚ್​ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?

ಪಾಕ್​​ ತಂಡವನ್ನು ಬಗ್ಗು ಬಡಿದ ಟೀಮ್ ಇಂಡಿಯಾ, ನಿರಾಯಾಸವಾಗಿ ಸಮೀಸ್​ಗೆ ಎಂಟ್ರಿ ನೀಡಿದೆ. ಪಾಕ್ ಎದುರಿನ ಗೆಲುವಿಗೆ ಇಡೀ ಭಾರತವೇ ಗಲ್ಲಿ ಗಲ್ಲಿಗಳಲ್ಲಿ ಸಂಭ್ರಮಾಚರಿಸುತ್ತಿದೆ. ಆಟಗಾರರ ಪ್ರದರ್ಶನವನ್ನು ಕೊಂಡಾಡುತ್ತಿದ್ದಾರೆ. ಆದ್ರೆ, ಈ ಮ್ಯಾಚ್​ನಲ್ಲಿ ಹಾರ್ದಿಕ್ ಪಾಂಡ್ಯ ಧರಿಸಿದ್ದ ಆ ಒಂದು ವಾಚ್, ಸೆನ್ಸೇಷನ್ ಸೃಷ್ಟಿಸಿದೆ.

ಬೊಂಬಾಟ್​ ಬೌಲಿಂಗ್, ಸೂಪರ್ ಫೀಲ್ಡಿಂಗ್, ದಮ್​ಧಾರ್ ಬ್ಯಾಟಿಂಗ್, ವಿರಾಟ್ ಕೊಹ್ಲಿಯ ಸೆಂಚುರಿ ಧಮಾಕ. ಹೀಗೆ ಸಂಘಟಿತ ಆಟದ ನೆರವಿನಿಂದ ನಿರಾಯಾಸವಾಗಿ ಗೆದ್ದ ಟೀಮ್ ಇಂಡಿಯಾ, ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಆದ್ರೆ, ಈ ಹೈವೋಲ್ಟೇಜ್ ಮ್ಯಾಚ್​ನಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಹಾರ್ದಿಕ್ ಪಾಂಡ್ಯರ ಕೈಯಲ್ಲಿ ಪಳಪಳ ಹೊಳೆಯುತ್ತಿದ್ದ ಆರೆಂಜ್ ಕಲರ್​​​​​​​​​​​​​​​​​​ ವಾಚ್.

publive-image

ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್​ 8 ಓವರ್​ಗಳಲ್ಲಿ ಕೇವಲ 31 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಈ ಮೂಲಕ ಟೀಮ್ ಇಂಡಿಯಾಗೆ ನೆರವಾಗಿದ್ದರು. ಆದ್ರೆ, ಬಾಬರ್​ ಅಜಂ ವಿಕೆಟ್ ಉರುಳಿಸಿದ ಸಂಭ್ರಮದಲ್ಲಿ ಹಾರ್ದಿಕ್ ಪಾಂಡ್ಯ ತೇಲಾಡುತ್ತಿದ್ದರು. ಈ ಸಂಭ್ರಮ ಜೊತೆಗೆ ಎಲ್ಲರ ಗಮನ ಸೆಳೆದಿದ್ದೆ ಪಾಂಡ್ಯ ಧರಿಸಿದ್ದ ದುಬಾರಿ ವಾಚ್.

ಹಾರ್ದಿಕ್ ಪಾಂಡ್ಯ ಧರಿಸಿದ್ದ ವಾಚ್ ಬಲು ದುಬಾರಿ​..!

ದುಬಾರಿ ವಾಚ್​​​ಗಳ ಬಗ್ಗೆ ಕ್ರೇಜ್ ಹೊಂದಿರುವ ಹಾರ್ದಿಕ್, ಪಾಕ್ ಎದುರು ಕೇಸರಿ ಬಣ್ಣದ ಬ್ರಾಂಡೆಡ್​ ಕೈಗಡಿಯಾರದೊಂದಿಗೆ ಕಣಕ್ಕಿಳಿದಿದ್ದರು. ಇಂಟ್ರೆಸ್ಟಿಂಗ್ ಅಂದ್ರೆ, ಪಾಂಡ್ಯ ಧರಿಸಿದ್ದ ಆ ದುಬಾರಿ ವಾಚ್ ಹೆಸರು ರಿಚರ್ಡ್ ಮಿಲ್ಲೆ ಕಂಪೆನಿಯ ಸ್ಪೆಷಲ್ ಎಡಿಷನ್​ RM 27-02.

ಹಾರ್ದಿಕ್ ಪಾಂಡ್ಯ ಕಟ್ಟಿದ್ದ ಈ ಲಿಮಿಟೆಡ್ ಸ್ಪೋರ್ಟ್ಸ್ ಎಡಿಷನ್​​ನ ಸ್ಟೈಲಿಶ್ RM 27-02 ವಾಚ್​​ನ​​ ಬೆಲೆ 8 ಲಕ್ಷ ಡಾಲರ್. ಅಂದರೆ ಇಂಡಿಯನ್ ರೂಪಾಯಿಯಲ್ಲಿ ಇದರ ಮೌಲ್ಯ ಬರೋಬ್ಬರಿ 7 ಕೋಟಿ.

ವಿಶ್ವದಲ್ಲಿ ತಯಾರಿಸಿದ್ದೆ ಕೇವಲ 50 ವಾಚ್​..!

ಈ ಕಂಪನಿಯವರು ತಯಾರಿ ಮಾಡಿರೋದೆ ಕೇವಲ 50 ವಾಚ್ ಅಂದ್ರೆ, ಇದು ಅಂತಿಂಥಾ ವಾಚ್ ಅಲ್ಲ, ಆ 50 ವಾಚ್​​ಗಳ ಪೈಕಿ ಒಂದು ವಾಚ್​ ಈಗ ಪಾಂಡ್ಯ ಬಳಿಯಿದೆ. ಪಾಂಡ್ಯ ಕಟ್ಟಿದ ಈ ದುಬಾರಿ ಮಿಲ್ಲೆ ವಾಚ್ ಕೆಲವೇ ಕೆಲವು ಕ್ರೀಡಾಪಟುಗಳ ಬಳಿ ಇದೆ. ಈ ಪೈಕಿ ಟೆನ್ನಿಸ್​ ದಿಗ್ಗಜ ರಾಫೆಲ್ ನಡಾಲ್ ಒಬ್ಬರಾಗಿದ್ದಾರೆ. ಪಂದ್ಯಗಳ ವೇಳೆ ಇದೇ ವಾಚ್ ಧರಿಸಿ ರಾಫೆಲ್ ನಡಾಲ್ ಆಡ್ತಾರೆ.

ಇಂಟ್ರೆಸ್ಟಿಂಗ್ ಅಂದ್ರೆ, ಈ ವಾಚ್​ನ ತಯಾರಿ ಮಾಡಿ ರಿಲೀಸ್​ ಮಾಡಿದ್ದೇ ರಾಫೆಲ್ ನಡಾಲ್ 10ನೇ ಗ್ರ್ಯಾಂಡ್​ಸ್ಲ್ಯಾಮ್​​ ಗೆದ್ದ ಕಾರಣಕ್ಕೆ. ಈ ದುಬಾರಿ ವಾಚ್​ನ ಬೇಸ್ ಪ್ಲೇಟ್​​ನ ಗ್ರೇಡ್​-5 ಟೈಟಾನಿಯಮ್​ನಿಂದ ವಿನ್ಯಾಸಗೊಳಿಸಲಾಗಿದೆ. ನಡಾಲ್​ ಬಿಟ್ರೆ ಗಾಲ್ಫ್​​ ಆಟಗಾರ ಬುಬ್ಬಾ ವ್ಯಾಟ್ಸನ್, ಎಫ್-1 ರೇಸರ್​ ಚಾಲ್ಲ್ಸ್ ಲೆಕ್ಲೆರ್ಕ್, ಮುತಾಝ್​​​​​​ ಬಾರ್ಶಿಮ್​ ಸೇರಿದಂತೆ ಕೆಲವೇ ಕೆಲ ಕ್ರೀಡಾಪಟುಗಳ ಮಾತ್ರವೇ ಈ ದುಬಾರಿ ವಾಚ್ ಹೊಂದಿದ್ದಾರೆ.

ಸ್ಪೆಷಲ್ ವಾಚ್ ವಿಶೇಷತೆ ಏನು?

  • ಬ್ರಿಡ್ಜ್​ & ಮುಳ್ಳು ತಯಾರಿಕೆಗೆ ಗ್ರೇಡ್​-5 ಟೈಟಾನಿಯಮ್​​ ಬಳಕೆ
  • ನೀಲಿ ಸ್ಪಟಿಕದೊಂದಿಗೆ ತಯಾರಿಸಿರುವ ವಾಚ್​ನ ಕೇಸ್​​
  • ಆ್ಯಂಟಿ ಗ್ಲೇರ್ ಗ್ಲಾಸ್​, ಒಳಗೆ ಕ್ರಿಸ್ಟಲ್ ಗ್ಲಾಸ್​​ ಬಳಕೆ
  • ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿಶೇಷ ವಿನ್ಯಾಸ
  • ರಫೆಲ್ ನಡಾಲ್​ಗಾಗಿ ವಿಶೇಷವಾಗಿ ತಯಾರಿಸಿದ್ದ ವಾಚ್

ಇದನ್ನೂ ಓದಿ:ಬೆಂಗಳೂರಲ್ಲಿ ನಡೆಯುವ IPL ಪಂದ್ಯಗಳಿಗೆ ಜಲಕಂಟಕ.. BWSSB ಅಧ್ಯಕ್ಷರ ಸೂಚನೆ ಏನು?

publive-image

ಪಾಕ್ ತಂಡದ ವೇತನಕ್ಕಿಂತ ಪಾಂಡ್ಯ ವಾಚ್ ಬೆಲೆಯೇ ಹೆಚ್ಚು..!

ಪಾಂಡ್ಯ ಕೈ ಗಡಿಯಾರ, ಇಡೀ ಪಾಕ್​​ ತಂಡ ವೇತನಕ್ಕಿಂತ ದುಬಾರಿಯಾಗಿದೆ. ಯಾಕಂದ್ರೆ, ಪಾಕಿಸ್ತಾನದ ಎ ಗ್ರೇಡ್ ಆಟಗಾರರಾದ ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್, ಶಾಹೀನ್ ಶಾ ಅಫ್ರಿದಿ ತಿಂಗಳ ಸ್ಯಾಲರಿ 13.95 ಲಕ್ಷ ರೂಪಾಯಿ. ಇನ್ನು ಬಿ ಗ್ರೇಡ್ ಆಟಗಾರರ ತಿಂಗಳ ವೇತನ 4.64 ಲಕ್ಷ ರೂಪಾಯಿ. ಪಾಕ್​ ತಂಡದ 15 ಆಟಗಾರರ ವೇತನಕ್ಕಿಂತ, ಹಾರ್ದಿಕ್ ಕಟ್ಟಿದ್ದ ವಾಚ್​ ಬೆಲೆಯೇ ಹೆಚ್ಚಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment